Home ಜಿಲ್ಲೆ ಬೆಂಗಳೂರು ಗೌರಿ-ಗಣೇಶ ಹಬ್ಬ-ಬಾಗಿನ ಮೂಲಕ ಸೌಹಾರ್ದತೆ

ಗೌರಿ-ಗಣೇಶ ಹಬ್ಬ-ಬಾಗಿನ ಮೂಲಕ ಸೌಹಾರ್ದತೆ

ಕೆಂಗೇರಿ, ಸೆ. ೧೫: ಜಬಿನಾ ತಾಜ್, ಕೆ.ಎಸ್. ಪರ್ವೀಜ್ ದಂಪತಿಗಳು ಕಗ್ಗಲೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ೬,೦೦೦ ಮನೆಗಳಿಗೆ ತೆರಳಿ ಗೌರಿ- ಗಣೇಶದ ಹಬ್ಬದ ಅಂಗವಾಗಿ ಬಾಗಿನವನ್ನು ನೀಡುವ ಮೂಲಕ ಸೌಹಾರ್ದತೆಯನ್ನು ಮೆರೆದಿದ್ದಾರೆ.


ಹಿಂದೂಗಳ ಪವಿತ್ರ ಹಬ್ಬವಾದ ಗೌರಿ ಗಣೇಶ ಹಬ್ಬಕ್ಕೆ ಬೇಕಾಗಿರುವ ಬಳೆ, ಬಿಚ್ಚಾಲೆ ಅರಿಶಿಣ, ಕುಂಕುಮ, ಕಡ್ಡಿ, ಕರ್ಪೂರ, ತೆಂಗಿನಕಾಯಿ, ಕೊಬ್ಬರಿ,ಬೆಲ್ಲ ಹೆಣ್ಣು ಮಕ್ಕಳಿಗೆ ಸೀರೆ, ಬಳೆ ಹರಿಶಿನ ಕುಂಕುಮ ನೀಡಿ ಸತ್ಕರಿಸುವ ಜೊತೆಗೆ ಪುರುಷರಿಗೆ ಪಂಚೆ ಶಲ್ಯ ಸೇರಿ ಹಲವು ವಸ್ತುಗಳನ್ನು ಒಳಗೊಂಡ ಕಿಟ್ಟುಗಳನ್ನು ಮನೆಮನೆಗಳಿಗೆ ತಲುಪಿಸಿದರು.


ಇದರ ಜೊತೆಗೆ ತರಳು, ಸೋಮನಹಳ್ಳಿ, ನಲಗುಳಿ, ಆಗರ ವ್ಯಾಪ್ತಿಯ ಅಂಗನವಾಡಿ ಶಿಕ್ಷಕಿಯರು, ಸಹಾಯಕರು, ಆಶಾ ಕಾರ್ಯಕರ್ತೆಯರಿಗೂ ಬಾಗಿನ ನೀಡಿದರು.


ಜಬಿನಾ ತಾಜ್ ಪರ್ವೀಜ್ ಮಾತನಾಡಿ ಪ್ರತಿ ವರ್ಷವೂ ಹಿಂದೂ ಸಹೋದರಿಯರಿಗೆ ಜಾತಿ,ಧರ್ಮ,ಭೇದ ಭಾವ ಇಲ್ಲದೆ ಅವರ ಜೊತೆಗೂಡಿ ಹಬ್ಬ ಹರಿದಿನಗಳನ್ನು ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ಬಾಗಿನವನ್ನು ಹಲವಾರು ವರ್ಷಗಳಿಂದ ನೀಡುತ್ತಾ ಬರುತ್ತಿದ್ದೇವೆ. ಇಲ್ಲಿ ನಮಗೆ ಮಾನವೀಯತೆ ಮುಖ್ಯ ಹೊರೆತು ಧರ್ಮ, ಜಾತಿ ಅಡ್ಡ ಬರುವುದಿಲ್ಲ ನಾವೆಲ್ಲರೂ ಮಾನವರು ಮಾನವತಿಯಿಂದ ಜೀವನ ಸಾಗಿಸುವುದೇ ಬಹುದೊಡ್ಡ ಕೆಲಸ ಎಂದರು.ತಾಜ್, ಕೆ.ಎಸ್. ಪರ್ವೀಜ್ ದಂಪತಿಗಳು ಕಗ್ಗಲೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ೬,೦೦೦ ಮನೆಗಳಿಗೆ ತೆರಳಿ ಗೌರಿ ಗಣೇಶದ ಹಬ್ಬದ ಅಂಗವಾಗಿ ಬಾಗಿನವನ್ನು ನೀಡುವ ಮೂಲಕ ಸೌಹಾರ್ದತೆಯನ್ನು ಮೆರೆದಿದ್ದಾರೆ.


ಹಿಂದೂಗಳ ಪವಿತ್ರ ಹಬ್ಬವಾದ ಗೌರಿ ಗಣೇಶ ಹಬ್ಬಕ್ಕೆ ಬೇಕಾಗಿರುವ ಬಳೆ, ಬಿಚ್ಚಾಲೆ ಅರಿಶಿಣ, ಕುಂಕುಮ, ಕಡ್ಡಿ, ಕರ್ಪೂರ, ತೆಂಗಿನಕಾಯಿ, ಕೊಬ್ಬರಿ,ಬೆಲ್ಲ ಹೆಣ್ಣು ಮಕ್ಕಳಿಗೆ ಸೀರೆ, ಬಳೆ ಹರಿಶಿನ ಕುಂಕುಮ ನೀಡಿ ಸತ್ಕರಿಸುವ ಜೊತೆಗೆ ಪುರುಷರಿಗೆ ಪಂಚೆ ಶಲ್ಯ ಸೇರಿ ಹಲವು ವಸ್ತುಗಳನ್ನು ಒಳಗೊಂಡ ಕಿಟ್ಟುಗಳನ್ನು ಮನೆಮನೆಗಳಿಗೆ ತಲುಪಿಸಿದರು.


ಇದರ ಜೊತೆಗೆ ತರಳು ತರಳು, ಸೋಮನಹಳ್ಳಿ, ನಲಗುಳಿ, ಆಗರ ವ್ಯಾಪ್ತಿಯ ಅಂಗನವಾಡಿ ಶಿಕ್ಷಕಿಯರು, ಸಹಾಯಕರು, ಆಶಾ ಕಾರ್ಯಕರ್ತೆಯರಿಗೂ ಬಾಗಿನ ನೀಡಿದರು.
ಜಬಿನಾ ತಾಜ್ ಪರ್ವೀಜ್ ಮಾತನಾಡಿ ಪ್ರತಿ ವರ್ಷವೂ ಹಿಂದೂ ಸಹೋದರಿಯರಿಗೆ ಜಾತಿ,ಧರ್ಮ,ಭೇದ ಭಾವ ಇಲ್ಲದೆ ಅವರ ಜೊತೆಗೂಡಿ ಹಬ್ಬ ಹರಿದಿನಗಳನ್ನು ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ಬಾಗಿನವನ್ನು ಹಲವಾರು ವರ್ಷಗಳಿಂದ ನೀಡುತ್ತಾ ಬರುತ್ತಿದ್ದೇವೆ. ಇಲ್ಲಿ ನಮಗೆ ಮಾನವೀಯತೆ ಮುಖ್ಯ ಹೊರೆತು ಧರ್ಮ, ಜಾತಿ ಅಡ್ಡ ಬರುವುದಿಲ್ಲ ನಾವೆಲ್ಲರೂ ಮಾನವರು ಮಾನವೀಯತೆಯಿಂದ ಜೀವನ ಸಾಗಿಸುವುದೇ ಬಹುದೊಡ್ಡ ಕೆಲಸ ಎಂದರು.