
ಲಕ್ಷೆ÷್ಮÃಶ್ವರ ಪಟ್ಟಣದ ಹಳೆ ಬಸ್ ನಿಲ್ದಾಣ ಸಮೀಪವಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಜಯಂತ್ಯೋತ್ಸವದ ಅಂಗವಾಗಿ ರುದ್ರಾಭಿಷೇಕ ಮಂತ್ರಘೋಷಗಳು ವಿಶೇಷ ಪೂಜೆ ಪುರಸ್ಕಾರಗಳು ಶ್ರದ್ದಾ ಭಕ್ತಿಯಿಂದ ಜರುಗಿದವು. ಶ್ರೀ ದೇವಸ್ಥಾನದ ಅರ್ಚಕ ವೀರೇಶ್ ಮಠದ ಸೇರಿದಂತೆ ಶಿಗ್ಲಿ ಗ್ರಾಮದ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡ ಈರಣ್ಣ ಪವಾಡದವರು ವಿಶೇಷ ಪೂಜೆ ಸಲ್ಲಿಸಿದರು.
































