ಕಲಬುರಗಿ: ಜೇವರಗಿ ಪುರಸಭೆಯಲ್ಲಿ ಈ ಹಿಂದೆ ಕೆಲಸ ಮಾಡಿದ 17 ಜನ ಪೌರಕಾರ್ಮಿಕರಿಗೆ ಆದ್ಯತೆಯ ಮೇಲೆ ನೇಮಕಾತಿ ಮಾಡಿಕೊಳ್ಳುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಜೇವರಗಿ ತಾಲೂಕು ಪೌರ ಕಾರ್ಮಿಕರ ಸಂಘದಿಂದ ಮೈ ಮೇಲೆ ಹೊಲಸು ಮತ್ತು ಕಸ ಸುರಿದುಕೊಂಡು ಪ್ರತಿಭಟನೆ ನಡೆಸಲಾಯಿತು.ಶಂಕರೆಮ್ಮ ಕೊಂಬಿನ್,ಯಲ್ಲಮ್ಮ,ಷಣ್ಮುಕಮ್ಮ,ಶಾರದಮ್ಮ,ರಾಘವೇಂದ್ರ ಸೇರಿದಂತೆ ಹಲವರು ಪಾಲ್ಗೊಂಡರು.