ಕಲಬುರಗಿ: ಭೀಮಳ್ಳಿಯ ಪಿಎಂಶ್ರೀ ಆದರ್ಶ ವಿದ್ಯಾಲಯಕ್ಕೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‍ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಇಂದು ಜಯ ಕರ್ನಾಟಕ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ಸಂಘಟನೆಯ ಜಿಲ್ಲಾ ಮತ್ತು ವಿಭಾಗೀಯ ಉಸ್ತುವಾರಿ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ,ಡಾ.ಶಿವಕುಮಾರ ಶರ್ಮಾ, ವಿದ್ಯಾಲಯದ ಎಸ್‍ಡಿಎಂಸಿ ಅಧ್ಯಕ್ಷ ರಾಜು ಕುಂಬಾರ,ರಾಜಕುಮಾರ ಜಮಾದಾರ,ಸೋಮಶೇಖರ ರೆಡ್ಡಿ,ಪವನ ಕುಲಕರ್ಣಿ,ಆರ್ಯಸಿಂಗೆ ಸೇರಿದಂತೆ ಹಲವರು ಪಾಲ್ಗೊಂಡರು.