Home ಜಿಲ್ಲೆ ಕಲಬುರಗಿ ಮಂತ್ರಿಗಳ ಹಿಂಬಾಲಕರಾದ ಸರ್ಕಾರಿ ನೌಕರರು ?ಮಂತ್ರಿಗಳೇ ನೌಕರಿಗೆ ಚಕ್ಕರ್ ಹೊಡೆದು ನಿಮ್ಮ ಹಿಂದೆ ಓಡಾಟನಡೆಸುವ ನೌಕರರಿಗೆ...

ಮಂತ್ರಿಗಳ ಹಿಂಬಾಲಕರಾದ ಸರ್ಕಾರಿ ನೌಕರರು ?ಮಂತ್ರಿಗಳೇ ನೌಕರಿಗೆ ಚಕ್ಕರ್ ಹೊಡೆದು ನಿಮ್ಮ ಹಿಂದೆ ಓಡಾಟನಡೆಸುವ ನೌಕರರಿಗೆ ಯಾವ ಶಿಕ್ಷೆ ?

ಕಲಬುರಗಿ: ವಾಸ್ತವಾಗಿ ಸರ್ಕಾರಿ ಉದ್ಯೋಗದಲ್ಲಿ ಇರುವ ಜನರು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಬಾರದು ಎಂಬ ಕಾನೂನು ಇದೆ. ಆದರೆ ಸರ್ಕಾರಿ ನೌಕರರು ಕೆಲಸಕ್ಕೆ ಕರ್ತವ್ಯಕ್ಕೆ ಚಕ್ಕರ್ ಹೊಡೆದು ಮಂತ್ರಿಗಳ ಹಿಂದೆ ಹಿಂಬಾಲಕರಾಗಿ ಓಡಾತ್ತಿರುವುದು ಮಂತ್ರಿಗಳಿಗೆ ಅಥವಾ ಶಾಸಕರಿಗೆ ಕಾಣುವುದಿಲ್ಲವೇ? ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರ ಹಿಂದೆ ಅನೇಕ ಸರ್ಕಾರಿ ಅರೇ ಸರ್ಕಾರಿ ನೌಕರರ ಸಂಘ ಸಂಸ್ಥೆಗಳ ಸದಸ್ಯರು ಪದಾಧಿಕಾರಿಗಳು ಎಂದು ಹೇಳಿಕೊಂಡು ಹಿಂಬಾಲಕರಾಗಿ ಓಡಾಟ ನಡೆಸುತ್ತಿದ್ದಾರೆ ಎಂದು ಬಿಜಪಿ ಓಬಿಸಿ ಮೋರ್ಚಾದ ನಗರಾಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಕೀಡಿ ಕಾರಿದ್ದಾರೆ.
ಇನ್ನೂ ವಿಪರ್ಯಾಸವೆಂದರೆ ಸರ್ಕಾರಿ ನೌಕರರು, ಶಿಕ್ಷಕರು, ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಸುತ್ತಿರುವ ನೌಕರರು ಯಾವುದೋ ಒಂದು ಸಂಘ ರಚಿಸಿಕೊಂಡು ಕರ್ನಾಟಕ ನೌಕರರ ನಿಯಮಗಳನ್ನು ಗಾಳಿ ತೂರಿ ರಾಜಕೀಯ ಮಾಡುತ್ತಾ ಓಡಾಡುತ್ತಾರೆ. ಇನ್ನೂ ಮಂತ್ರಿಗಳಿಗೆ, ಶಾಸಕರಿಗೆ ಅವರ ಬಗ್ಗೆ ಅರಿವೇ ಇಲ್ಲವೇ? ಅವರ ಹತ್ತಿರ ಬರುವ ಜನರು ಯಾರು?, ಅವರ ಹಿನ್ನಲೇ ಏನು? ಅವರು ತಮ್ಮ ಕರ್ತವ್ಯವನ್ನು ಮುಗಿಸಿ ತಮ್ಮ ಹಿಂದೆ ಓಡಾಟ ನಡೆಸುತ್ತಾರೆಯೇ? ಎಂಬ ಕನಿಷ್ಟ ಜ್ಞಾನ ಇಂದು ಜನನಾಯಕರಿಗೆ ಇಲ್ಲದಂತಾಗಿದೆ. ಇವರು ಯಾವುದಾರೊಂದು ಗಂಡಾಂತರ ಮಾಡಿದಾಗ ಅವರು ಯಾರು ಎನ್ನುವದೇ ನನಗೆ ಗೊತ್ತಿಲ್ಲ ? ಎಂಬ ಹಾರಿಕೆ ಮಾತುಗಳನ್ನಾಡಿ ನೂಣಿಚಿಕೊಳ್ಳವುದು ಅನೇಕ ಪ್ರಕರಣಗಳಲ್ಲಿ ಕಂಡು ಬಂದಿದೆ.
ಸರ್ಕಾರಿ ನೌಕರರು ಯಾವುದೇ ಸಮಾಜದವರಾಗಿರಲಿ ಅವರು ಸರ್ಕಾರದ ಒಂದು ಭಾಗವಾಗಿರತ್ತಾರೆ. ಅವರು ಯಾವುದೇ ಜಾತಿ, ಧರ್ಮ ಎಂದು ಕೆಲಸ ಮಾಡಬಾರದು ಎಂದು ನಿಯಮ ಇದೆ. ಆದರೆ ಸರ್ಕಾರಿ ಕೆಲಸದಲ್ಲಿ ಕಡಿಮೆ ರಾಜಕೀಯದಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ ಎನ್ನುವದು ಬೇಸರದ ಸಂಗತಿಯಾಗಿದೆ.
ಮಾನ್ಯ ಗೃಹ ಸಚಿವರಿಗೆ ನಿಮ್ಮ ಹಿಂದೇ ಮುಂದೇ ಯಾರು ಇದ್ದಾರೆ ? ಯಾರು ನಿಮ್ಮ ಹಿತೈಷಿಗಳು, ಯಾರು ನಿಮ್ಮೊಂದಿಗೆ ಇದ್ದಾರೋ ಅವರು ಸರ್ಕಾರಿ ನೌಕರರೇ ಎನ್ನುವದನ್ನು ತಿಳಿದುಕೊಳ್ಳಲಿ. ಇನ್ನೂ ಕೆಲವರು ಸಚಿವರ ಆಪ್ತರಂತೆಯೇ ನಟನೆ ಮಾಡುತ್ತಿರುವುದು ಅನೇಕ ಮಾಧ್ಯಮಗಳ ಮುಖಾಂತರ ಸಾರ್ವಜನಿಕರು ನೋಡುತ್ತಾದ್ದಾರೆ. ಅದನ್ನು ಗಮನಿಸಿ ನಿಮ್ಮ ಹತ್ತಿರು ಇರುವ ಸರ್ಕಾರಿ ನೌಕರರು, ಅಥವಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರನ್ನು ಅವರು ಕೆಲಸದ ನಂತರ ನಿಮ್ಮಿಂದ ದೂರವಿಡಿ. ತಮ್ಮ ಕರ್ತವ್ಯವನ್ನು ಬಿಟ್ಟು ನಿಮ್ಮ ಹಿಂದೇ ಸ್ಪೂನ್ ತರ ಓಡಾಟ ಮಾಡುವುದು ಎಷ್ಟು ಸರಿ ? ಎನ್ನುವುದೇ ಆಗಿದೆ ಎಂದು ದೇವಿಂದ್ರ ದೇಸಾಯಿ ಕಲ್ಲೂರ ವ್ಯಂಗ್ಯವಾಡಿದ್ದಾರೆ.