Home ಜಿಲ್ಲೆ ಕಲಬುರಗಿ ಮಂಗಲ ಕಾರ್ಯಾಲಯ, ಅನುಭವ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ

ಮಂಗಲ ಕಾರ್ಯಾಲಯ, ಅನುಭವ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ

ಕಲಬುರಗಿ,ಸೆ.16-ನಗರದ ಆಳಂದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸ್ವಾಮಿ ವಿವೇಕಾನಂದ ಬಡಾವಣೆಯ ಆರಾಧ್ಯ ದೈವ ಓಂಕಾರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮುಕ್ತಾಯದ ಸಮಾರಂಭದಲ್ಲಿ ಚಿನ್ಮಯಗಿರಿಯ ವೀರ ಮಹಾಂತ ಶಿವಾಚಾರ್ಯರು ಭಾಗವಹಿಸಿ ಭಕ್ತರ ಆಶಯದಂತೆ ದೇವಸ್ಥಾನದ ಅಡಿಯಲ್ಲಿ ಮಂಗಲ ಕಾರ್ಯಾಲಯ / ಅನುಭವ ಮಂಟಪ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀಗಳು ಭಕ್ತರನ್ನು ಕುರಿತು ಆಶೀರ್ವಾದದ ನುಡಿಗಳಲ್ಲಿ ಮಾತನಾಡಿ” ಆಧುನಿಕ ಜೀವನದ ಒತ್ತಡದಲ್ಲಿ ಶ್ರಾವಣ ಮಾಸದಲ್ಲಿ ಒಂದು ತಿಂಗಳವರೆಗೆ ನಡೆಯುವ ಭಜನೆ ಕೀರ್ತನೆ ಪುರಾಣಗಳಲ್ಲಿ ಸರ್ವಭಕ್ತರು ಭಾಗವಹಿಸಿ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡು ಜೀವನದಲ್ಲಿ ನೆಮ್ಮದಿಯನ್ನು ಕಾಣಬೇಕು ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಶಿವಾನಂದಯ್ಯ ಗೊಬ್ಬೂರು ಸ್ವಾಮಿ, ವಿವೇಕಾನಂದ ಬಡಾವಣೆಯ ಸಮಿತಿಯ ಅಧ್ಯಕ್ಷರಾದ ಮಲ್ಲಿನಾಥ ದಂಗಾಪುರ, ಎಸ್.ಆರ್. ಪಾಟೀಲ್ ಅತನೂರು, ಹತಗುಂದಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ದೇವೇಂದ್ರಪ್ಪ ಗಣಮುಖಿ, ಜಂಬಗಾ (ಬಿ) ಮುಖ್ಯಗುರು ರಾಜಶೇಖರ್ ಸಜ್ಜಿ, ನಿವೃತ್ತ ಮುಖ್ಯಗುರು ಕೆ. ಬಸವರಾe, ಸ್ವಾಮಿ ವಿವೇಕಾನಂದ ಭಜನಾ ಸಂಘದ ಅಧ್ಯಕ್ಷರಾದ ಅಂಬರಾಯ ಬಿರಾದಾರ್, ಶಿಕ್ಷಕ ಅಣ್ಣಾರಾಯ ಮಂಗಾಣಿ ಹಾಗೂ ದೇವಾಲಯದ ಟ್ರಸ್ಟ್ ಸದಸ್ಯರು ಹಾಗೂ ಕಾಲೋನಿಯ ನಿವಾಸಿಗಳು ಉಪಸ್ಥಿತರಿದ್ದರು.