
ಕಲಬುರಗಿ,ಸೆ.16-ಭೂಮಿ ತಾಯಿ ಇದ್ದಂತೆ. ಗಿಡಮರಗಳನ್ನು ನೆಟ್ಟು ಪರಿಸರವನ್ನು ರಕ್ಷಿಸಿದರೆ ಅದು ಮಾನವ ಸಮಾಜವನ್ನು ರಕ್ಷಿಸುತ್ತದೆ ಎಂದು ನಿವೃತ್ತ ಅಧೀಕ್ಷಕ ಅಭಿಯಂತರರಾದ ಮಲ್ಲಿಕಾರ್ಜುನ್ ಎಂಎಸ್ ಅಭಿಪ್ರಾಯಪಟ್ಟರು.
ಕಲಬುರಗಿ ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ ಅವರ ಜನ್ಮದಿನದ ಅಂಗವಾಗಿ ಮಹೇಂದ್ರ ಫೌಂಡೇಶನ್ ವತಿಯಿಂದ ಎಂ ಎಸ್ ಕೆ ಮಿಲ್ ಜಿಡಿಎ ಬಡಾವಣೆಯಲ್ಲಿ ಹಮ್ಮಿಕೊಂಡ ಗಿಡ ನೆಡುವ ಮತ್ತು ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ಮತ್ತು ಪರಿಸರ ಬೆಳೆಸುವ ಸಂಕಲ್ಪ ಹೊಂದಿರುವ ಮಹೇಂದ್ರ ಫೌಂಡೇಶನ್ ಕಾರ್ಯ ಶ್ಲಾಘಿಸಿದರು. ನಂತರ ಕಲ್ಯಾಣ ಕರ್ನಾಟಕ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಚಂದ್ರಶೇಖರ್ ದೊಡ್ಡಮನಿ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಮಹೇಂದ್ರ ಫೌಂಡೇಶನ್ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆ ಬೆಳೆಸಿ ಅವರನ್ನು ಉತ್ತೇಜಿಸಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಶರಣಪ್ಪ ನಂದಗಿರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಲಕ್ಷ್ಮಣ್ ಕನಕಟಕರ್, ಶಶಿಕಾಂತ್ ಹೋಳ್ಕರ್, ಈಶ್ವರ್ ಹೊಸಮನಿ, ಡಾ. ಕೃಷ್ಣಮೂರ್ತಿ,ಡಾ. ದೀಪ್ತಿ,ಕಾಶಿನಾಥ್ ಮುಖರ್ಜಿ, ಮಲ್ಲಿಕಾರ್ಜುನ್ ಮದಾನಿ, ಪರಮೇಶ್ವರ್ ಧನ್ನಿ, ಸಿದ್ದಣ್ಣ ಹಾಲಬಾವಿ, ಶರಣಬಸವ ಹೆಗ್ಗಡೆ, ಜ್ಯೋತಿ ದೊಡ್ಡಮನಿ, ಅನಿಲಕುಮಾರ್ ಸುಗಂಧಿ, ಸಂಜೀವ್ ಕುಮಾರ್ ಮೇಲಿನಮನಿ, ಡಾ. ತುಶಿತ್, ಅಶಿತ್ ಮತ್ತು ಜಗನ್ನಾಥ್ ಮುಂತಾದವರು ಉಪಸ್ಥಿತರಿದ್ದರು.




























