Home ಜಿಲ್ಲೆ ಕಲಬುರಗಿ ಆಧುನಿಕತೆಯೊಂದಿಗೆ ಕಲೆ, ಪರಂಪರೆಯ ಸಂರಕ್ಷಣೆ ಅಗತ್ಯ

ಆಧುನಿಕತೆಯೊಂದಿಗೆ ಕಲೆ, ಪರಂಪರೆಯ ಸಂರಕ್ಷಣೆ ಅಗತ್ಯ

ಕಲಬುರಗಿ,ಆ.29-ಕಲೆ ಮತ್ತು ವಾಸ್ತುಶಿಲ್ಪವು ಪರಸ್ಪರ ಅವಿನಾಭಾವ ಸಂಬಂಧ ಹೊಂದಿದ್ದು, ನಮ್ಮ ನಾಡಿನ ಸಂಸ್ಕøತಿ, ಪರಂಪರೆ ಮತ್ತು ಇತಿಹಾಸವನ್ನು ಪ್ರತಿಬಿಂಬಿಸುವ ಪ್ರಮುಖ ಮಾಧ್ಯಮಗಳಾಗಿವೆ. ಇಂದಿನ ಆಧುನಿಕ ಯುಗದಲ್ಲಿ ಕಲೆಯ ಮಹತ್ವನ್ನು ಅರಿತು ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ಮತ್ತು ಅವಕಾಶಗಳನ್ನು ಒದಗಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಭಾರತ ಭೂಷಣ್, ನಾಡೋಜ ಡಾ.ಜೆ.ಎಸ್.ಖಂಡೇರಾವ ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಧನ ಸಹಾಯದ ವತಿಯಿಂದ ನಗರದ ದಿ ಆರ್ಟ್ ಇಂಟಿಗ್ರೇಶನ್ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಆ.27 ರಿಂದ 29 ರವರೆಗೆ ಆಯೋಜಿಸಿರುವ ವಿಶ್ವನಾಥ ತಂಬಾಕೆಯವರ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರ ಪ್ರತಿಭೆಯನ್ನು ಗುರುತಿಸಿ ಅದನ್ನು ಬೆಳೆಸಲು ವಿವಿಧ ವೇದಿಕೆಗಳನ್ನು ಕಲ್ಪಿಸಬೇಕು. ಇಂತಹ ಕಲಾ ಪ್ರದರ್ಶನಗಳು ಯುವ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪರಿಚಯಿಸಿಕೊಳ್ಳಲು ಉತ್ತಮ ಅವಕಾಶವನ್ನು ನೀಡುತ್ತವೆ. ಕಲೆಯ ಮೂಲಕ ಸಮಾಜದಲ್ಲಿ ಸೌಂದರ್ಯಪ್ರಜ್ಞೆ, ಸೃಜನಶೀಲತೆ ಮತ್ತು ಸಾಂಸ್ಕøತಿಕ ಅರಿವು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು.
ವಾಸ್ತುಶಿಲ್ಪವು ನಮ್ಮ ಪರಂಪರೆ ಮತ್ತು ಸಂಸ್ಕøತಿಯ ಪ್ರತೀಕವಾಗಿದ್ದು, ಅದನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಆಧುನಿಕತೆಯೊಂದಿಗೆ ಸಾಂಪ್ರದಾಯಿಕ ಕಲೆ ಮತ್ತು ವಾಸ್ತುಶಿಲ್ಪದ ಮೌಲ್ಯಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಡಾ.ಮಲ್ಲಿಕಾರ್ಜುನ ಬಾಗೋಡಿ ಹಾಗೂ ಬಸವರಾಜ ಕಮಾಜಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎಚ್.ಬೆಳಮಗಿಯವರು ವಹಿಸಿದ್ದರು. ಬಿ.ಎನ್.ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಶರಣಪ್ರಕಾಶ, ಡಾ.ಅಶೋಕ ಶೆಟಕಾರ, ಎನ್.ಡಿ.ಕೇರಿ, ಕವಿತಾ ಕಟ್ಟಿ, ಗೋಪಾಲ ಕೆ.ಪಿ., ಪ್ರಶಾಂತ ಜಿ.ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಲಾವಿದರು, ಕಲಾಸಕ್ತರು, ಕಲಾ ವಿದ್ಯಾರ್ಥಿಗಳು, ವಾಸ್ತುಶಿಲ್ಪಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.