
ತಾಳಿಕೋಟೆ, ತಾಲೂಕಿನ ಬಳಗಾನೂರ ಗ್ರಾಮದ ವಿವಿಧೋದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಕುರಿತು ಶನಿವಾರರಂದು ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಚನ್ನಣ್ಣ ಅಲದಿ ಉಪಾಧ್ಯಕ್ಷರಾಗಿ ಶ್ರೀಮತಿ ಈರಮ್ಮ ಶಿವನಗೌಡ ಬಿರಾದಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷರಾಗಿದ್ದ ನೀಲಪ್ಪ ನರಸಣಗಿ ಅವರು ಹಾಗೂ ಉಪಾಧ್ಯಕ್ಷರಾಗಿದ್ದ ಶಿವಪ್ಪ ಸಾಸನೂರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ಅಲದಿ, ಉಪಾಧ್ಯಕ್ಷ ಸ್ಥಾನಕ್ಕೆ ಈರಮ್ಮ ಶಿವನಗೌಡ ಬಿರಾದಾರ ಅವರು ಒಬ್ಬೊಬ್ಬರೇ ನಾಮ ಪತ್ರ ಸಲ್ಲಿಸಿದ್ದರಿಂದ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಚನ್ನಣ್ಣ ಅಲದಿ ಉಪಾಧ್ಯಕ್ಷರಾಗಿ ಶ್ರೀಮತಿ ಈರಮ್ಮ ಶಿವನಗೌಡ ಬಿರಾದಾರ ಅವರು ಅವಿರೋಧವಾಗಿ ಅವಿರೋಧವಾಗಿ ಆಯ್ಕೆಗೊಳ್ಳಲು ಕಾರಣವಾಯಿತು.
ಸಂಘದ ಒಟ್ಟು ೧೧ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಈ ಸಮಯದಲ್ಲಿ ನೀಲಪ್ಪ ನರಸಣಗಿ, ಶಿವಪ್ಪ ಸಾಸನೂರ, ಸಿದ್ರಾಮಪ್ಪ ಅಲದಿ, ರಾಮನಗೌಡ ಹಮದಿಗನೂರ, ಲೋಹಿತ ವಾಲಿಕಾರ, ಶ್ರೀಮತಿ ಶಾರದಾ ಸಾಸನೂರ, ಈರಮ್ಮ ಬಿರಾದಾರ, ಶ್ರೀಶೈಲ ಭಂಟನೂರ, ಇಮಾಮಸಾ ಭಾಗವಾನ, ನಿಂಗಪ್ಪ ಹರಿಜನ, ಸಂಘದ ಕಾರ್ಯದರ್ಶಿ ಎಂ.ಎ. ಬಿರಾದಾರ, ಸಿಬ್ಬಂದಿಗಳಾದ ವೀರೇಶ ಬಾಗೇವಾಡಿ, ಹಾಜೇಸಾ ವಾಲಿಕಾರ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಮಯದಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರುಗಳಿಗೆ ಸಂಘದ ನಿರ್ದೇಶಕ ಮಂಡಳಿ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು.
ರೈತರ ಹಿತಾಸಕ್ತಿಗೆ ಪೂರಕವಾಗಿ ಸಂಘದ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವದರೊಂದಿಗೆ ತಾಲೂಕಿನಲ್ಲಿ ಮಾದರಿಯ ಪಿಕೆಪಿಎಸ್ ಎಂಬ ಹೆಗ್ಗಳಿಕೆ ಪಾತ್ರವಾಗುವಂತೆ ಎಲ್ಲ ಸದಸ್ಯರ ಸಹಕಾರದೊಂದಿಗೆ ಮುನ್ನಡೆಯುತ್ತೇನೆ.
ಚಂದ್ರಶೇಖರ ಅಲದಿ
ಬಳಗಾನೂರ ಪಿಕೆಪಿಎಸ್ ನೂತನ ಅಧ್ಯಕ್ಷ

































