Home ಜಿಲ್ಲೆ ಬೆಂಗಳೂರು ನವರಾತ್ರಿ, ಮಹಿಳೆಯರಿಂದ ಪಾರಾಯಣ

ನವರಾತ್ರಿ, ಮಹಿಳೆಯರಿಂದ ಪಾರಾಯಣ

ಕೆ.ಆರ್.ಪುರ, ಅ.೧೩- ನವರಾತ್ರಿ ಹಬ್ಬದ ಪ್ರಯುಕ್ತ ಸೋಮವಾರ ಕೆ.ಆರ್.ಪುರದಲ್ಲಿ ಸಮಾಜಸೇವಕ ಕೆ. ಹೇಮಂತ್ ಅವರ ನಿವಾಸದಲ್ಲಿ ಸರಸ್ವತಮ್ಮ ನೇತೃತ್ವದಲ್ಲಿ ನೂರಾರು ಮಹಿಳೆಯರು ಬಿಳಿ ಬಣ್ಣದ ಉಡುಪನ್ನು ಧರಿಸಿ ಸೌಂದರ್ಯ ಲಹರಿ ಸ್ತೋತ್ರ ಪಾರಾಯಣ ಮಾಡಿದರು.ಮಹಿಳೆಯರು ಒಂದೇ ಧಾಟಿಯಲ್ಲಿ ಇಂಪಾಗಿ ಪಾರಾಯಣ ಹಾಡಿದ್ದು ಸಾಮರಸ್ಯದ ಆಶಯವನ್ನೂ ಬಿಂಬಿಸುವಂತಿತ್ತು. ಸಾಮೂಹಿಕವಾಗಿ ಸೌಂದರ್ಯಲಹರಿಯ ಸ್ತೋತ್ರಗಳನ್ನು ಉಪಾಸನೆ ಮಾಡಿದ್ದು ಮಹಿಳೆಯರಲ್ಲಿ ಪುಳಕ ಕಂಡುಬಂದಿತು.


ಸಮಾಜಸೇವಕಿ ಕೆ.ಆರ್.ಸರಸ್ವತಮ್ಮ ಮಾತನಾಡಿ, ಪ್ರತಿ ವರ್ಷ ನವರಾತ್ರಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಕೆ.ಆರ್.ಪುರ ಸುತ್ತಮುತ್ತಲಿನ ಮಹಿಳೆಯರಿಗಾಗಿ ಪ್ರತಿ ದಿನವೂ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಸೌಂದರ್ಯ ಲಹರಿ ಪಾರಾಯಣ ಮಾಡುವುದರಿಂದ ಸಂಸ್ಕೃತಿ ಸಂಸ್ಕಾರವು ಪ್ರಸರಿಸುತ್ತಿದೆ. ನಮ್ಮ ವಾರ್ಡ್ ಮಹಿಳೆಯರಿಗೆ ವಿಶೇಷಬಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದರು. ಸೌಂದರ್ಯ ಲಹರಿ ಪಾರಾಯಣದಲ್ಲಿ ಪಾಲ್ಗೊಂಡ ಮಹಿಳೆಯರಿಗೆ ನೆನಪಿನ ಕಾಣಿಕೆ, ಪ್ರಸಾದ ವ್ಯವಸ್ಥೆ ಮಾಡಲಾಯಿತು.