ಕಲಬುರಗಿ: ಕೇಂದ್ರ ಸರಕಾರವು ಚುನಾವಣಾ ಆಯೋಗ,ಸಿಬಿಐ ಮೊದಲಾದ ಸಾಂವಿಧಾನಿಕ ಸಂಸ್ಥೆಗಳನ್ನು ರಾಜಕೀಯ ಸ್ವಾರ್ಥಕ್ಕಾಗಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ( ನಾಗವಾರ ಬಣ) ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ಜಿಲ್ಲಾ ಸಂಚಾಲಕ ಬಸವರಾಜ ಬಾಡಿಹಾಳ,ಮಂಜುನಾಥ ಲೇಂಗಟಿ,ದುರ್ಗಪ್ಪ ಕುಲ್ಲೋಲಿ,ಸುರೇಶ ರಾಕಾ,ರಾಹುಲ್ ಹಂಚಾಟೆ ಸೇರಿದಂತೆ ಹಲವರು ಪಾಲ್ಗೊಂಡರು.