Home ಜಿಲ್ಲೆ ಬೆಂಗಳೂರು ವಾಲಿಬಾಲ್ ಪಂದ್ಯಾವಳಿ ಲಿಂಬಾವಳಿ ಚಾಲನೆ

ವಾಲಿಬಾಲ್ ಪಂದ್ಯಾವಳಿ ಲಿಂಬಾವಳಿ ಚಾಲನೆ

ಕೆ.ಆರ್.ಪುರ, ಅ.೧೩- ಮಹದೇವಪುರ ಕ್ಷೇತ್ರದ ವರ್ತೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಿಸಿಕೊಟ್ಟ ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಂಗಣದ ಉದ್ಘಾಟನಾ ಸಮಾರಂಭ ಮತ್ತು ಮಹದೇವಪುರ ಕ್ಷೇತ್ರ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಹದೇವಪುರ ಕ್ಷೇತ್ರದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ನಮ್ಮ ಮುಖಂಡರು ಹಲವು ವರ್ಷ ಳಿಂದ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ವಿವಿಧ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇದರಿಂದ ಇಲ್ಲಿನ ಕ್ರೀಡಾಪಟುಗಳ ಸಾಧನೆ ರಾಜ್ಯಮಟ್ಟದಲ್ಲಿ ಗುರುತಿಸುವಂತಾಗಿದೆ. ಈ ಭಾಗದ ಯುವಕರ ಕ್ರೀಡಾಸಕ್ತಿಯೇ ಇದಕ್ಕೆ ಕಾರಣ’ ಎಂದರು.


ದೇಶದ ಯುವ ಜನಾಂಗ ಆಟೋಟಗಳಲ್ಲಿ ಭಾಗವಹಿಸಿ ಆರೋಗ್ಯ ಸಂಪತ್ತು ಹೆಚ್ಚಿಸಿಕೊಳ್ಳುವ ಜತೆಗೆ ದೇಶದ ಕೀರ್ತಿಗೆ ಭಾಜನರಾಗಬೇಕು ಎಂದು ಸಲಹೆ ನೀಡಿದರು.


ಪಂದ್ಯಾವಳಿಯಲ್ಲಿ ಕ್ಷೇತ್ರದ ವರ್ತೂರು, ವೈಟ್ ಫೀಲ್ಡ್, ಕೊಡತಿ, ಮಂಡೂರು, ಜ್ಯೋತಿಪುರ, ಮಾರತ್ತಹಳ್ಳಿ ಸೇರಿದಂತೆ ಕ್ಷೇತ್ರದ ವಿವಿಧ ಭಾಗಗಳಿಂದ ೨೦ಕ್ಕೂ ಹೆಚ್ಚು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.


ಈ ಸಂದರ್ಭದಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷರು ಶ್ರೀ.ಎನ್.ಆರ್.ಶ್ರೀಧರ್ ರೆಡ್ಡಿ, ಮಾಜಿ ಅಧ್ಯಕ್ಷ ಮನೋಹರರೆಡ್ಡಿ,ನಗರಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಮೋದಿ,ವರ್ತೂರು ಕಾಮಗಾರಿ ಉಸ್ತುವಾರಿ ವಿ.ಪಿ.ರಕ್ಷೀತ್, ಮುಖಂಡರಾದ ಬಿ.ಎಸ್. ಶ್ರೀಧರ್, ವರ್ತೂರಿನ ಕೃಪಕರ್ ಆಚಾರ್, ರಾಜಶೇಖರ್, ಸಂಜಯ್ ರಾಜ್, ಚಿಕ್ಕಣ್ಣ, ರಕ್ಷಿತ್, ಸತ್ಯ, ಶ್ರೀನಿವಾಸ ಇತರರು ಭಾಗವಹಿಸಿದರು.