Home ಜಿಲ್ಲೆ ಕಲಬುರಗಿ ಸೆ. 15 ರಂದು ರಾಷ್ಟ್ರವ್ಯಾಪ್ತಿ ವೀರಭದ್ರೇಶ್ವರ ಜಯಂತ್ಯೋತ್ಸವ

ಸೆ. 15 ರಂದು ರಾಷ್ಟ್ರವ್ಯಾಪ್ತಿ ವೀರಭದ್ರೇಶ್ವರ ಜಯಂತ್ಯೋತ್ಸವ

ಕಲಬುರಗಿ,ಸೆ.8: ವೀರಭದ್ರೇಶ್ವರ ದೇವರು ಭೂಮಿಯ ಮೇಲೆ ಉದ್ಭವಿಸಿರುವ ಪವಿತ್ರ ದಿವಸವಾದ ಭಾದ್ರಪದ ಮಾಸದ ಮೊದಲ ಮಂಗಳವಾರ ( ಸೆ. 15) ಪ್ರತಿ ವರ್ಷ ವಿಶ್ವದಾದ್ಯಂತ ವೀರಭದ್ರೇಶ್ವರ ದೇವರ ಕೋಟ್ಯಾಂತರ ಭಕ್ತರ ಮನೆ, ಮಠ ಮತ್ತು ದೇವಸ್ಥಾನಗಳಲ್ಲಿ ಬಹು ವಿಜೃಂಭಣೆಯಿಂದ ಆಚರಿಸೋಣ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿಯ ರಾಜಾಧ್ಯಕ್ಷ ಸಿ.ಎಂ.ಶಿವಶರಣಪ್ಪ ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಅಧ್ಯಕ್ಷ ಮಲ್ಲಿಕಾರ್ಜುನ ಮಠ ಹಾಗೂ ಜಗದ್ಗುರು ಪಂಚಪೀಠ ವಾರ್ತಾಧಿಕಾರಿ ಸಿದ್ರಾಮಪ್ಪ ಆಲಗೂಡಕರ್ ಅವರು ಪ್ರಕಟಣೆಯ ಮೂಲಕ ಜಂಟಿಯಾಗಿ ಕರೆ ಕೊಟ್ಟಿದಾರೆ.
ನಮ್ಮ ದೇಶದಾದ್ಯಂತ ವೀರಭದ್ರೇಶ್ವರ ದೇವರ ಲಕ್ಷಾಂತರ ದೇವಸ್ಥಾನಗಳನ್ನು ಹೊಂದಿದ್ದೇವೆ ಹಾಗೂ ಕೋಟ್ಯಾಂತರ ಜನರು ವೀರಭದ್ರೇಶ್ವರ ದೇವರ ಭಕ್ತರಿದ್ದೇವೆ. ಆದರೆ ಪ್ರತಿ ವರ್ಷವೀರಭದ್ರೇಶ್ವರ ದೇವಸ್ಥಾನಗಳಲ್ಲಿ ವೀರಭದ್ರೇಶ್ವರ ದೇವರ ಜಾತ್ರೆಗಳನ್ನು ಮಾತ್ರ ನಾವು ಆಚರಣೆ ಮಾಡುತ್ತೇವೆ. ಆದರೆ ವೀರಭದ್ರೇಶ್ವರ ಹಬ್ಬವನ್ನು ಆಚರಣೆ ಮಾಡುತ್ತಿಲ್ಲ. ಹೀಗಾಗಿ ನಾವು ಎಲ್ಲಾ ದೇವಾದಿ ದೇವತೆಗಳ ಹಬ್ಬವನ್ನು ಆಚರಿಸುವಂತೆ
ಈ ವರ್ಷ ಭಾದ್ರಪದ ಮಾಸದ ಮೊದಲನೇ ಮಂಗಳವಾರ ಸೆ. 15ರಂದು ಇದ್ದು, ಅಂದುವೀರಭದ್ರೇಶ್ವರ ದೇವರು ಭೂಮಿಯ ಮೇಲೆ ಉದ್ಭವಿಸಿದ ದಿವಸವನ್ನು ವೀರಭದ್ರೇಶ್ವರ ದೇವರ ಹಬ್ಬವನ್ನಾಗಿ ಆಚರಿಸುವ ಮೂಲಕ ವೀರಭದ್ರೇಶ್ವರ ದೇವರ ಕೃಪೆಗೆ ಪಾತ್ರರಾಗೋಣ ಎಂದಿದ್ದಾರೆ.