ಕಲಬುರಗಿ: ನಗರದ ಕೆಕೆಸಿಸಿಐ ಸಭಾಂಗಣದಲ್ಲಿ ಸರ್ಕಾರಿ, ಅರೆ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಥಟ್ ಅಂತ ಹೇಳಿ ಖ್ಯಾತಿಯ ಲೇಖರ ನಾ.ಸೋಮೇಶ್ವರ, ಶಾಸಕರಾದ ಅಲ್ಲಮಪ್ರಭು ಪಾಟೀಲ,ಶರಣಬಸಪ್ಪ ದರ್ಶನಾಪೂರ, ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ., ಶರಣು ಪಪ್ಪ, ಬಿ.ಎಸ್.ದೇಸಾಯಿ, ಚಂದ್ರಕಾಂತ ಎನ್, ಡಿ.ಕಾಚಾಪುರ, ಚಂದ್ರಾಮ ಹುಬ್ಬಳ್ಳಿ ಸೇರಿದಂತೆ ಹಲವರಿದ್ದರು.