Home ಜಿಲ್ಲೆ ಕಲಬುರಗಿ ಯುವ, ತಾಂತ್ರಿಕ,ನಾವೀನ್ಯತೆ ಶಕ್ತಿಯಿಂದ ವಿಕಸಿತಭಾರತ ಪಯಣ ಮುನ್ನಡೆ: ಆರ್. ಆರ್. ಬಿರಾದಾರ್

ಯುವ, ತಾಂತ್ರಿಕ,ನಾವೀನ್ಯತೆ ಶಕ್ತಿಯಿಂದ ವಿಕಸಿತಭಾರತ ಪಯಣ ಮುನ್ನಡೆ: ಆರ್. ಆರ್. ಬಿರಾದಾರ್

ಕಲಬುರಗಿ,ಸೆ 8: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕಂಪ್ಯೂಟರ್ ವಿಜ್ಞಾನ ನಿಕಾಯದ ವತಿಯಿಂದ ವಿಶ್ವವಿದ್ಯಾಲಯ ಮಟ್ಟದ ಆಂತರಿಕ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಎಸ್‍ಐಹೆಚ್)-2026 ನಡೆಯಿತು.
ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ, ನಾವೀನ್ಯತೆ ಕೋಶ ಹಾಗೂ ಎ.ಐ.ಸಿ.ಟಿ.ಇ. ವತಿಯಿಂದ ವಿದ್ಯಾರ್ಥಿಗಳಿಗೆ ತರಗತಿಯ ಆಚೆಗೆ ಸಂಶೋಧನೆ, ನಾವೀನ್ಯತೆ ಮತ್ತು ತಂತ್ರಜ್ಞಾನ ಆಧಾರಿತ ಸಮಸ್ಯೆ ಪರಿಹಾರದತ್ತ ಸಾಗಲು ವಿವಿಧ ವೇದಿಕೆಗಳು ಹಾಗೂ ಅವಕಾಶಗಳನ್ನು ಒದಗಿಸಲಾಗುತ್ತಿದೆ. ವಿಶ್ವವಿದ್ಯಾಲಯ ಮಟ್ಟದ ಆಂತರಿಕ ಹ್ಯಾಕಥಾನ್, ರಾಷ್ಟ್ರೀಯ ಮಟ್ಟದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‍ಗೆ ಆಯ್ಕೆ ಪ್ರಕ್ರಿಯೆಯ ಭಾಗವಾಗಿದ್ದು, ವಿದ್ಯಾರ್ಥಿಗಳಿಗೆ ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸಿ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್ ಅವರು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಯುವ ಶಕ್ತಿ, ತಾಂತ್ರಿಕ ಶಕ್ತಿ ಮತ್ತು ನಾವೀನ್ಯತೆ ಶಕ್ತಿ ಎಂಬ ಮೂರು ಪ್ರಮುಖ ಶಕ್ತಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು. ವಿಕಸಿತ ಭಾರತ @2047ರ ದೃಷ್ಟಿಕೋನದಡಿ ಜ್ಞಾನ, ತಂತ್ರಜ್ಞಾನ, ನಾವೀನ್ಯತೆ ಹಾಗೂ ಯುವಜನತೆಯ ಸಾಮಥ್ರ್ಯವನ್ನು ಬಳಸಿಕೊಂಡು ಭಾರತವನ್ನು 30-40 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ರೂಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ತಮ್ಮ “ದೊಡ್ಡ ಕನಸುಗಳನ್ನು” ಪ್ರಾಯೋಗಿಕ, ಕಾರ್ಯಸಾಧ್ಯ ಹಾಗೂ ನೈಜ ಜೀವನದ ಸಮಸ್ಯೆಗಳಿಗೆ ಪರಿಹಾರಗಳಾಗಿ ಪರಿವರ್ತಿಸಬೇಕು ಎಂದು ಕರೆ ನೀಡಿದ ಅವರು, ತಮ್ಮ ಸೃಜನಶೀಲತೆ, ತಾಂತ್ರಿಕ ಜ್ಞಾನ ಮತ್ತು ನವೀನ ಚಿಂತನೆಗಳನ್ನು ರಾಷ್ಟ್ರ ನಿರ್ಮಾಣಕ್ಕೆ ಹಾಗೂ ವಿಕಸಿತ ಭಾರತ್ 2047ರ ಗುರಿ ಸಾಧನೆಗೆ ಬಳಸಿಕೊಳ್ಳುವಂತೆ ಪೆÇ್ರೀತ್ಸಾಹಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಚ್‍ಸಿ ರೊಬೊಟಿಕ್ಸ್‍ನ ನಿರ್ದೇಶಕ ಡಾ. ರಾಧಾಕಿಶೋರ್ ಪಾಂಡುರಂಗಿ, ಅವರು ಕಲ್ಯಾಣ ಕರ್ನಾಟಕ ಪ್ರದೇಶವು ಇನ್ನೂ ಹಲವು ಅಭಿವೃದ್ಧಿ ಸವಾಲುಗಳನ್ನು ಎದುರಿಸುತ್ತಿದ್ದು, ವಿದ್ಯಾರ್ಥಿಗಳು ಸ್ಥಳೀಯ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ತಂತ್ರಜ್ಞಾನ ಆಧಾರಿತ ನವೀನ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ಹೊಸ ಆಲೋಚನೆ, ನವೀನ ಚಿಂತನೆ ಹಾಗೂ ಸಮಸ್ಯೆ ಪರಿಹರಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‍ನಂತಹ ವೇದಿಕೆಗಳನ್ನು ಒದಗಿಸುತ್ತಿರುವ ಸರ್ಕಾರ ಮತ್ತು ವಿಶ್ವವಿದ್ಯಾಲಯದ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಂತ್ರಜ್ಞಾನ ಮತ್ತು ನಾವೀನ್ಯತೆಯ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ಫ್ಲೈಯೆಟ್‍ನ ಸ್ಥಾಪಕ ಹಾಗೂ ಸಿಟಿಒ ಸಾಯಿ ವಿಷ್ಣು ವಿಪ್ಪಗುಂಟಾ ಮತ್ತು ಯುಕೆ ಮೂಲದ ಲಾಯ್ಡ್ಸ್ ಬ್ಯಾಂಕಿಂಗ್ ಗ್ರೂಪ್‍ನ ಡೇಟಾ ಸೈನ್ಸ್ ಇಂಜಿನಿಯರ್ ಅಂಶುಮಾನ್ ದೀಕ್ಷಿತ್, ಪೆರೆನಿಯಲ್ ಸಿಸ್ಟಮ್ಸ್‍ನ ಲೀಡ್ ಎಐ ಇಂಜಿನಿಯರ್ ಶ್ರೀಕಾಂತ್ ಕಸನಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಂಪ್ಯೂಟರ್ ವಿಜ್ಞಾನ ನಿಕಾಯದ ಡೀನ್ ಪೆÇ್ರ. ಆರ್. ಎಸ್. ಹೆಗಡಿ, ಎಸ್‍ಐಎಚ್ ಸಮಿತಿ ಸದಸ್ಯರು ಹಾಗೂ ಪ್ರಾಧ್ಯಾಪಕರಾದ ಡಾ. ಗುರುರಾಜ ಮುಕರಂಬಿ, ಡಾ. ಕಗಲೆ ಮಾಧುರಿ ರಘುನಾಥ್, ರಾಘವೇಂದ್ರ ಎಂ. ಇಚ್ಚಂಗಿ, ಡಾ. ಮನೋರಂಜನ್ ಗಂಧೂಡಿ, ಡಾ. ಮುದನಾರು ದತ್ತ, ಡಾ. ಶ್ಯಾಮಲಾ, ಡಾ. ಧನಂಜಯ ಮತ್ತು ಡಾ. ಅಷ್ಟಾ ಸೇರಿದಂತೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವು ವಂದೇ ಮಾತರಂದೊಂದಿಗೆ ಪ್ರಾರಂಭವಾಯಿತು. ವಿಶ್ವವಿದ್ಯಾಲಯದ ಎಸ್‍ಐಎಚ್ ಸಂಯೋಜಕ ಡಾ. ರೋಹಿತ್ ಕುಮಾರ್ ಸ್ವಾಗತ ಭಾಷಣ ಮಾಡಿದರು. ಡಾ. ನೃಸಿಂಘ ಚರಣ್ ಪ್ರಧಾನ್ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.