Home ಜಿಲ್ಲೆ ಕಲಬುರಗಿ ಚಂದ್ರಶೇಖರ್ ವೈ.ಶಿಲ್ಪಿ ಅವರಿಗೆ ನುಡಿನಮನ

ಚಂದ್ರಶೇಖರ್ ವೈ.ಶಿಲ್ಪಿ ಅವರಿಗೆ ನುಡಿನಮನ

ಕಲಬುರಗಿ,ಸೆ.8-ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ವತಿಯಿಂದ ರಾಷ್ಟ್ರ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಚಂದ್ರಶೇಖರ್ ವೈ.ಶಿಲ್ಪಿ ಅವರಿಗೆ ನುಡಿನಮನ/ಪುಷ್ಪನಮನ ಕಾರ್ಯಕ್ರಮ ನಗರದ ರಂಗಾಯಣ ಸಭಾಂಗಣದಲ್ಲಿಂದು ಜರುಗಿತು.
ಶಹಾಪುರದ ವಿಶ್ವಕರ್ಮ ಏಕದಂಡಗಿ ಮಠದ ಅಜೇಂದ್ರ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯವಹಿಸಿದ್ದರು. ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಾನಂದ ಎಚ್.ಬಂಟನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಹಿರಿಯ ಶಿಲ್ಪ ಕಲಾವಿದರಾದ ವೀರಣ್ಣ ಎಂ.ಶಿಲ್ಪಿ, ಚಂದ್ರಹಾಸ ವೈ.ಜಾಲಿಹಾಳ, ಮಹೇಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ಸಂಚಾಲಕ ಹಣಮಂತ ಡಿ.ಬಾಡದ, ಅಕಾಡೆಮಿ ರಿಜಿಸ್ಟ್ರಾರ್ ಆರ್.ಚಂದ್ರಶೇಖರ್ ಹಾಗೂ ದಿ.ಚಂದ್ರಶೇಖರ್ ವೈ.ಶಿಲ್ಪಿ ಅವರ ಕುಟುಂಬ ವರ್ಗದವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.