Home ಜಿಲ್ಲೆ ನಾಡಿನ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ಅಪಾರ : ಡಾ. ದೀಪಮಾಲಾ ಪಾಟೀಲ

ನಾಡಿನ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ಅಪಾರ : ಡಾ. ದೀಪಮಾಲಾ ಪಾಟೀಲ

ವಿಜಯಪುರ,ಜೂ.8: ಮೈಸೂರು ಸಂಸ್ಥಾನದ ಒಡೆಯರ ರಾಜ ಸಂತತಿಯ 24ನೇ ರಾಜರಾದ ಇವರು 1902 ರಿಂದ 1940ರ ವರೆಗೆ ತಮ್ಮ ರಾಜ್ಯಭಾರ ನಡೆಸಿ ಓರ್ವ ಸಮರ್ಥ ಆಡಳಿತಗಾರರಾಗಿ, ದೂರದೃಷ್ಠಿಯ ಆಡಳಿತಗಾರರಾಗಿ ನಮಗೆ ದೊರೆತಿದ್ದು ನಮ್ಮ ನಾಡಿನ ಸೌಭಾಗ್ಯ. ನಾಡಿನ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರ ಎಂದು ಖ್ಯಾತ ವೈದ್ಯೆ ಡಾ. ದೀಪಮಾಲಾ ಪಾಟೀಲ ಅಭಿಪ್ರಾಯಪಟ್ಟರು.
ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಜಿಲ್ಲೆ, ತಾಲೂಕು ಹಾಗೂ ನಗರ ಘಟಕಗಳ ಸಹಯೋಗದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಜನ್ಮದಿನಾಚರಣೆಯ ನಿಮಿತ್ತ ಹಮ್ಮಿಕೊಂಡ ಚಿಂತನಾಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಲ್ಲಿ ಹಾಗೂ ಕನ್ನಡದ ನೆಲ, ಜಲ, ಭಾμÉಯನ್ನು ಉಳಿಸುವ ನಿಟ್ಟಿನಲ್ಲಿ ಅಹರ್ನಿಶಿ ದುಡಿದ ಒಬ್ಬ ಮಹಾನ್ ಮೇಧಾವಿಯಾಗಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸವನ ಬಾಗೇವಾಡಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನ್ಯಾಯವಾದಿ ವ್ಹಿ. ಬಿ. ಮರ್ತೂರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಇಂತಹ ಸಂಸ್ಥೆಯನ್ನು ಹುಟ್ಟುಹಾಕುವಲ್ಲಿ ಶ್ರಮಿಸಿದ ಮಹಾನ್ ಆಡಳಿತಗಾರ ನಾಲ್ವಡಿ ಕೃಷ್ಣರಾಜ ಒಡೆಯರ ಅವರು. ಅವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡ ಈ ಚಿಂತನಗೋಷ್ಠಿ ಅತ್ಯಂತ ಅರ್ಥಪೂರ್ಣವಾಗಿತ್ತು. ಕಸಾಪ ಇಂದು ಅನೇಕ ದತ್ತಿಗೋಷ್ಠಿಗಳನ್ನು ಅತ್ಯಂತ ಅರ್ಥವತ್ತಾಗಿ ಆಚರಿಸುವ ಮೂಲಕ ನಮ್ಮ ಜಿಲ್ಲೆಯ ಕೀರ್ತಿಯನ್ನು ನಾಡಿನ ತುಂಬೆಲ್ಲ ಹೆಚ್ಚಿಸಿದೆ ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತು ವಿಶೇಷ ಉಪನ್ಯಾಸ ನೀಡಿದ ವಿಜಯಪುರ ತಾಲೂಕಾ ಕಸಾಪ ಅಧ್ಯಕ್ಷ ಡಾ. ಆನಂದ ಕುಲಕರ್ಣಿ, ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿ ಹೊಂದಿದ್ದು, ಶಿಕ್ಷಣ, ಕೃಷಿ, ಸಾಹಿತ್ಯ ಮತ್ತು ಸಂಸ್ಕøತಿ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಒಡೆಯರ್ ಅವರ ದೂರದೃಷ್ಟಿಯ ಕನಸುಗಳು ಇಂದಿಗೂ ಪ್ರಸ್ತುತ. ಏμÁ್ಯ ಖಂಡದಲ್ಲಿಯೇ ಮೊಟ್ಟಮೊದಲ ಜಲ ವಿದ್ಯುತ್ ಯೋಜನೆಯಿಂದಾಗಿ 1905ರಲ್ಲಿ ಬೆಂಗಳೂರಿನಲ್ಲಿ ದೀಪಗಳು ಬೆಳಗುವಂತೆ ಮಾಡಿದರು. ರಾಜ್ಯದಲ್ಲಿ 230ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಕಟ್ಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ, ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಿದ ಇವರ ಅವಧಿಯಲ್ಲಿ ಸರ್ ಮಿರ್ಜಾ ಇಸ್ಮಾಯಿಲ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಇವರಿಗೆ ಶಕ್ತಿಯಾಗಿದ್ದರು ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬಿ.ಎಂ.ಅಜೂರ, ಡಾ.ಶುಭಾಂಗಿಣಿ ಕುಲಕರ್ಣಿ, ಡಾ.ಅನುರಾಧಾ ಕಂಗೋಣಿ, ಪ್ರತಿಭಾ ಪಾಟೀಲ, ಶಕುಂತಲಾ ಹಿರೇಮಠ ಮಾತನಾಡಿದರು.
ಇದೇ ಸಂದರ್ಭದಲ್ಲಿ 2026ರ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರಶಸ್ತಿ ಪುರಸ್ಕೃತರಾದ ಬಾಬುರಾವ ಮಹಾರಾಜರು,
ಡಾ.ರಾಜಕುಮಾರ ಜೊಲ್ಲೆ, ಡಾ.ರೇಖಾ ಪಾಟೀಲ, ಆರ್. ಜಿ. ಅಳ್ಳಗಿ, ಡಾ. ಜಿ. ಡಿ. ಕೊಟ್ನಾಳ, ರಜಿಯಾಬೇಗಂ ಕೊಟ್ನಾಳ, ನಿಂಗಪ್ಪ ಬೊಮ್ಮನಹಳ್ಳಿ, ಈರಪ್ಪ ಸರೂರ, ಆನಂದ ಕೆಂಭಾವಿ ಹಾಗೂ ವಿಜಯಾ ಬಿರಾದಾರರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತ್ರಿವೇಣಿ ವಾರದ ಪ್ರಾರ್ಥಿಸಿದರು. ಸಿದ್ರಾಮಯ್ಯ ಲಕ್ಕುಂಡಿಮಠ ಸ್ವಾಗತಿಸಿ ಗೌರವಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಶಿಕಲಾ ನಾಯ್ಕೋಡಿ ಗೀತಗಾಯನ ನೆರವೇರಿಸಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಜಯಶ್ರೀ ಹಿರೇಮಠ ವಂದಿಸಿದರು. ಶೆಟ್ಟೆವ್ವ ಹರಿಜನ, ಮುತ್ತವ್ವ ಹರಿಜನ ಹಾಗೂ ಮಹಾನಂದಾ ಕಾಂಬಳೆ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಬಸವರಾಜ ಇಜೇರಿ (ದೇಸಾಯಿ) ಬಸವರಾಜ ಬಿರಾದಾರ, ಜಿ.ಎಸ್. ಬಳ್ಳೂರ, ಅರ್ಜುನ ಶಿರೂರ, ಶಾಂತಾ ವಿಭೂತಿ, ಪ್ರದೀಪ ನಾಯ್ಕೋಡಿ, ವಿಜಯಲಕ್ಷ್ಮಿ ಹಳಕಟ್ಟಿ, ಶ್ರೀಕಾಂತ ನಾಡಗೌಡ, ಕೆ.ಎಸ್. ಹಣಮಾಣಿ, ಮಲ್ಲಿಕಾರ್ಜುನ ಕೆಳಗಡೆ, ಮಹಾದೇವ ಮೋಪಗಾರ, ಶಿವಾಜಿ ಮೋರೆ, ಸುಖದೇವಿ ಅಲಬಾಳಮಠ, ಮಮತಾ ಮುಳಸಾವಳಗಿ, ಶರಣಮ್ಮ ಹಾದಿಮನಿ, ರೂಪಾ ರಜಪೂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.