
ಚಿಕ್ಕನಾಯಕನಹಳ್ಳಿ, ಜು. ೧೧- ಮನುಷ್ಯನ ಜೀವನ ಅಶಾಶ್ವತವಾದದ್ದು. ಬದುಕಿನಲ್ಲಿ ಸೇವೆಯ ದೀಕ್ಷೆ ಪಡೆದು ಸಮಾಜ ಸುಧಾರಣೆಗೆ ದುಡಿದರೆ ಭಗವಂತ ಮೆಚ್ಚುತ್ತಾನೆ ಎಂದು ಹಿರಿಯ ಸಾಹಿತಿ ಡಾ. ಎಂ.ವಿ. ನಾಗರಾಜರಾವ್ ಹೇಳಿದರು.
ಪಟ್ಟಣದ ರೋಟರಿ ಕನ್ವೆನ್ಷನ್ ಹಾಲ್‌ನಲ್ಲಿ ಇನ್ನರ್ ವ್ಹೀಲ್ ಕ್ಲಬ್‌ನ ನೂತನ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಸಮಸ್ಯೆಗಳಿವೆ. ಆದರೆ ಮನುಷ್ಯ ಕಷ್ಟದಲ್ಲಿದ್ದಾಗ ಒಬ್ಬರಿಗೊಬ್ಬರು ಸಹಾಯ ಮಾಡುವುದರಿಂದ ಸಮಾಜದಲ್ಲಿ ಸುಧಾರಣೆ ಕಾಣಬಹುದು. ವ್ಯಕ್ತಿ ಬದುಕಿರುವವರಗೆ ತಾನು ಒಳ್ಳೆಯ ಕೆಲಸಗಳು ನಿಸ್ವಾರ್ಥ ಸೇವೆ ಮಾಡಿದಾಗ ಆತ್ಮತೃಪ್ತಿ ಹಾಗೂ ಗೌರವ ಹೆಚ್ಚುತ್ತದೆ. ಅವಕಾಶ ಸಿಕ್ಕಾಗ ಮತ್ತು ಅಗತ್ಯ ಇದ್ದಾಗ ಸೇವೆ ನೀಡಿದಾಗ ಅದು ಸಾರ್ಥಕತೆಗೆ ಸಾಕ್ಷಿಯಾಗುತ್ತದೆ ಎಂದರು.
ಕ್ಲಬ್‌ನ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ವೀಣಾಶಂಕರ್, ಸೇವೆಯಲ್ಲಿ ನಾನು ನನ್ನದು ಎನ್ನುವ ಅಹಂ ತೊರೆದು ಜನ ಸಾಮಾನ್ಯರ ನೊವು ನಲಿವಿಗೆ ಸ್ಪಂದಿಸಬೇಕು. ಇನ್ನರ್ ವೀಲ್ ಕ್ಲಬ್ ಶತಮಾನೋತ್ಸವವನ್ನು ಕಂಡಿದೆ. ಸಮಾಜದಲ್ಲಿ ಪುರುಷನಷ್ಟೆ ಮಹಿಳೆಯ ಪಾತ್ರವಿದೆ. ಸಂಘ ಸಂಸ್ಥೆಗಳಲ್ಲಿ ಮಹಿಳೆಯರು ಸಂಘಟಿತರಾಗಬೇಕು. ಮುಂದಿನ ದಿನಗಳಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ವೀಲ್ ಛೇರ್, ವಾಕರ್, ಶೇ.೮೦ರಷ್ಟು ವಿಕಲ ಚೇತನರಿಗೆ ಎಲೆಕ್ಟ್ರಿಕ್ ಸ್ಟೂಟರ್‌ನ್ನು ಉಚಿತವಾಗಿ ನೀಡಲಾಗುವುದು. ಅರ್ಹ ಫಲಾನುಭವಿಗಳು ಕ್ಲಬ್‌ನ್ನು ಸಂಪರ್ಕಿಸಬೇಕು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಎಂ.ಬಿ.ನಾಗರಾಜು ಮಾತನಾಡಿ, ಭಾರತ ದೇಶದಲ್ಲಿ ತಾಯಿ ಸ್ಥಾನ ಮಹತ್ವವನ್ನು ಪಡೆದುಕೊಂಡಿದೆ. ಜವಾಬ್ದಾರಿಯ ಮೌಲ್ಯದಲ್ಲಿ ಪುರುಷರಿಗಿಂತ ಮಹಿಳೆಯೆ ಹೆಚ್ಚು ಪಾತ್ರವಹಿಸುತ್ತಾಳೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಇತ್ತೀಚಿಗೆ ತೀರ್ಪುನೀಡಿದೆ. ಪ್ರಸಕ್ತ ಕಾಲದಲ್ಲಿ ಯುದ್ದ ವಿಮಾನದಲ್ಲಿ ಪೈಲೈಟಾಗಿ ಕೆಲಸ ನಿರ್ವಹಿಸುವ ಮಟ್ಟಕ್ಕೆ ಮಹಿಳೆ ಪಾತ್ರ ವಹಿಸುತ್ತಿದ್ದಾಳೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರೋ.ಕಾರ್ಯದರ್ಶಿ ಪ್ರಸನ್ನಕುಮಾರ್? ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷೆ ಶಶಿಕಲಾ ಜಯದೇವ್,. ನೂತನ ಕಾರ್ಯದರ್ಶಿ ಭವಾನಿ ಜಯರಾಂ, ಪುಷ್ಪಶಿವಣ್ಣ, ಚಂದ್ರಿಕಾ, ಪುಪ್ಪರಾಣಿ, ಮಂಜುಳ ಮತ್ತಿತರರು ಭಾಗವಹಿಸಿದ್ದರು.


































