Home ಜಿಲ್ಲೆ ಕಲಬುರಗಿ ಸಿಯುಕೆ ವತಿಯಿಂದ ಹೊಸದಾಗಿ ಪ್ರವೇಶ ಪಡೆದ ಸ್ನಾತಕ ವಿದ್ಯಾರ್ಥಿಗಳಿಗೆ ಸ್ವಾಗತ

ಸಿಯುಕೆ ವತಿಯಿಂದ ಹೊಸದಾಗಿ ಪ್ರವೇಶ ಪಡೆದ ಸ್ನಾತಕ ವಿದ್ಯಾರ್ಥಿಗಳಿಗೆ ಸ್ವಾಗತ

ಕಲಬುರಗಿ,ಸೆ.21-ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ವಿದ್ಯಾರ್ಥಿ ಕಲ್ಯಾಣ ವಿಭಾಗದ ವತಿಯಿಂದ 2026-27ನೇ ಶೈಕ್ಷಣಿಕ ಸಾಲಿನಲ್ಲಿ ವಿವಿಧ ಸ್ನಾತಕ ಪದವಿ ಕಾರ್ಯಕ್ರಮಗಳಿಗೆ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ ಸ್ವಾಗತ ಹಾಗೂ ಪರಿಚಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸೆ.16ರಂದು ಬಿಬಿಎ, ಬಿ.ಟೆಕ್. (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಎಐ ಮತ್ತು ಎಂಎಲ್, ಗಣಿತ ಮತ್ತು ಕಂಪ್ಯೂಟಿಂಗ್) ಹಾಗೂ ಸೆ.17ರಂದು ಬಿಎ, ಬಿಎ.ಎಲ್.ಎಲ್.ಬಿ, ಬಿಎಸ್ಸಿ ಮತ್ತು ಬಿಎಸ್‍ಡಬ್ಲ್ಯೂ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತನಾಡಿದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು, ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಶೈಕ್ಷಣಿಕ, ಸಂಶೋಧನಾ ಹಾಗೂ ಇತರ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತಮ್ಮ ವೃತ್ತಿ ಮತ್ತು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿದ್ಯಾರ್ಥಿ ಕಲ್ಯಾಣ ಮತ್ತು ಕಾನೂನು ವಿಭಾಗದ ಡೀನ್ ಪೆÇ್ರ. ಬಸವರಾಜ್ ಎಂ. ಕುಬಕಡ್ಡಿ ಅವರು, ವಿಶ್ವವಿದ್ಯಾಲಯದ ನೀತಿ ಸಂಹಿತೆ, ಕಾಯಿದೆ ಹಾಗೂ ಸುಗ್ರೀವಾಜ್ಞೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿಶ್ವವಿದ್ಯಾಲಯದ ನಿಯಮಗಳು ಮತ್ತು ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ ಅವರು, ವಿಶ್ವವಿದ್ಯಾಲಯದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಶೈಕ್ಷಣಿಕ ಹಾಗೂ ವೃತ್ತಿಪರ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ವಿಕಸಿತ ಭಾರತ-2047 ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿವಿಧ ನಿಕಾಯಗಳ ಡೀನ್‍ಗಳಾದ ಪೆÇ್ರ. ಪಾಂಡುರಂಗ ವಿ., ಪೆÇ್ರ. ಆರ್. ಎಸ್. ಹೆಗಡಿ, ಪೆÇ್ರ. ಗಣೇಶ್ ಪವಾರ್, ಪೆÇ್ರ. ಅಮರೇಂದ್ರ ಮಸ್ತಾ, ಪೆÇ್ರ. ಪ್ರಶಾಂತ್, ಪೆÇ್ರ. ಪವಿತ್ರಾ ಆಲೂರು, ಪೆÇ್ರ. ಪಲ್ಲೇಪೆÇೀಘು ರಾಘವಯ್ಯ, ಪೆÇ್ರ. ರಾಜೀವ್ ಶೇಷ ಜೋಶಿ ಹಾಗೂ ಮುಖ್ಯ ಹಾಸ್ಟೆಲ್ ವಾರ್ಡನ್ ಡಾ. ಬಸವರಾಜ್ ಎಂ. ಸೇರಿದಂತೆ ಪ್ರಾಧ್ಯಾಪಕರು ತಮ್ಮ ವಿಭಾಗಗಳು ಹಾಗೂ ಶೈಕ್ಷಣಿಕ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಪರೀಕ್ಷಾ ವ್ಯವಸ್ಥೆ, ವಿದ್ಯಾರ್ಥಿಗಳ ಶಿಸ್ತು ಮತ್ತು ಮೇಲ್ವಿಚಾರಣೆ, ಭಾಷಾ ಪ್ರಯೋಗಾಲಯ, ವಿದ್ಯಾರ್ಥಿವೇತನ, ಕ್ರೀಡಾ ವಿಭಾಗ, ಸ್ವಯಂ ಪೆÇೀರ್ಟಲ್, ಎನ್‍ಇಪಿ, ಶೈಕ್ಷಣಿಕ ವಿಭಾಗ, ಗ್ರಂಥಾಲಯ, ಎನ್‍ಎಸ್‍ಎಸ್, ಉದ್ಯಮಶೀಲತೆ ಮತ್ತು ಇನ್‍ಕ್ಯುಬೇಶನ್, ಉದ್ಯೋಗ ನಿಯೋಜನಾ ಘಟಕ, ವಸತಿ ನಿಲಯ ಹಾಗೂ ಕೌನ್ಸೆಲಿಂಗ್ ಸೇರಿದಂತೆ ವಿವಿಧ ವಿದ್ಯಾರ್ಥಿ ಸೇವೆಗಳು ಹಾಗೂ ಇತರೆ ಸೌಲಭ್ಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.
ಡಾ. ಬಸವರಾಜ್ ಎಂ. ಸ್ವಾಗತಿಸಿದರು. ಡಾ. ವೈಷ್ಣವಿ ನಾರಾಯಣಿ ಕಾರ್ಯಕ್ರಮ ನಿರೂಪಿಸಿದರು. ಡಿಎಸ್‍ಡಬ್ಲ್ಯೂ ಅಧಿಕಾರಿ ಡಾ. ಚರಣ್ ಕುಮಾರ್ ಕೆ. ಹಾಗೂ ಶ್ರೀ ಅರುಣ್ ಉಪಸ್ಥಿತರಿದ್ದರು.