Home ಜಿಲ್ಲೆ ಸಂಗೀತದಿAದ ಮಾನಸಿಕ ಒತ್ತಡ ಕಡಿಮೆ : ಸಾಗರ ಪಾಟೀಲ

ಸಂಗೀತದಿAದ ಮಾನಸಿಕ ಒತ್ತಡ ಕಡಿಮೆ : ಸಾಗರ ಪಾಟೀಲ

ಔರಾದ: ಜೂ.೧೭:ಸಂಗೀತವು ಮಾನವನ ಜೀವನದಲ್ಲಿ ವಿಶೇಷ ಸ್ಥಾನ ಹೊಂದಿದ್ದು, ಮನಸ್ಸನ್ನು ಅರಳಿಸುವ ಅಪಾರ ಶಕ್ತಿಯನ್ನು ಒಳಗೊಂಡಿದೆ. ಸಂಗೀತ ಕೇಳುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದಲ್ಲದೆ, ನೆಮ್ಮದಿ ಹಾಗೂ ಸಂತೋಷದ ಭಾವನೆ ಮೂಡುತ್ತದೆ ಎಂದು ಯುವ ಮುಖಂಡ ಸಾಗರ ಪಾಟೀಲ ಹೇಳಿದರು.
ತಾಲೂಕಿನ ಬೆಲ್ದಾಳ ಗ್ರಾಮದಲ್ಲಿ ಡಾ.ಪಂಡಿತ ಪುಟ್ಟರಾಜ ಸಂಗೀತ ಸಾಹಿತ್ಯ ನಾಟ್ಯ ಮತ್ತು ಚಾರಿಟೇಬಲ್ ಟ್ರಸ್ಟ್ ಬೆಲ್ದಾಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಬೆಂಗಳೂರ ವತಿಯಿಂದ ಆಯೋಜಿಸಲಾಗಿದ್ದ ಸಂಗೀತ ಸಾಂಸ್ಕೃತೀಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ವೇಗದ ಜೀವನಶೈಲಿಯಿಂದ ಜನರು ಒತ್ತಡಕ್ಕೆ ಒಳಗಾಗುತ್ತಿರುವ ಸಂದರ್ಭಗಳಲ್ಲಿ ಸಂಗೀತವು ಉತ್ತಮ ಔಷಧಿಯಂತೆ ಕಾರ್ಯನಿರ್ವಹಿಸುತ್ತಿದೆ. ಶಾಸ್ತ್ರೀಯ ಸಂಗೀತ, ಭಾವಗೀತೆ, ಭಕ್ತಿಗೀತೆ ಹಾಗೂ ಜನಪದ ಸಂಗೀತಗಳು ಮನಸ್ಸಿಗೆ ಹೊಸ ಚೈತನ್ಯ ನೀಡುತ್ತವೆ. “ಸಂಗೀತವು ಕೇವಲ ಮನರಂಜನೆಯ ಸಾಧನವಲ್ಲ, ಅದು ಮನಸ್ಸು ಮತ್ತು ಹೃದಯವನ್ನು ಸಂಪರ್ಕಿಸುವ ಮಾಧ್ಯಮವಾಗಿದೆ” ಎಂದು ತಿಳಿಸಿದರು.