
ಕಲಬುರಗಿ: ಕರ್ನಾಟಕ ಗೃಹ ಕಾರ್ಮಿಕರ ಯೂನಿಯನ್ ಜಿಲ್ಲಾಘಟಕದ ವತಿಯಿಂದ ಅಂತರಾಷ್ಟ್ರೀಯ ಗೃಹ ಕಾರ್ಮಿಕರ ದಿನದ ಅಂಗವಾಗಿ ಇಂದು ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ಹಮ್ಮಿಕೊಂಡು ವಿವಿಧ ಬೇಡಿಕೆಗಳ ಮನವಿಯನ್ನು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.ಜಿಲ್ಲಾಧ್ಯಕ್ಷೆ ನರಸಮ್ಮ,ಮೆಹೆರಾಜ್ ಬೇಗಂ,ರೇಖಾ,ರೀನಾ,ಶರಣಮ್ಮಾ ಅವರು ಸೇರಿದಂತೆ ಹಲವರು ಪಾಲ್ಗೊಂಡರು.


























