Home ಜಿಲ್ಲೆ ಬೆಂಗಳೂರು 21ಕ್ಕೆ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಪದಗ್ರಹಣ

21ಕ್ಕೆ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಪದಗ್ರಹಣ

ಚಿಕ್ಕಬಳ್ಳಾಪುರ.ಜೂ೧೭: ಕೆಪಿಸಿಸಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಕೆ.ಹರಿಪ್ರಸಾದ್ ಹಿಂದುಳಿದ ವರ್ಗಗಳ ನಾಯಕ.ಅವರ ಪದಗ್ರಹಣ ಕಾರ್ಯಕ್ರಮವು ಜೂ.೨೧ರಂದು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ನಮ್ಮ ಕ್ಷೇತ್ರದಿಂದ ೨.೫ ಸಾವಿರ ಮಂದಿ ೫೦ ಬಸ್ಸುಗಳಲ್ಲಿ ಭಾಗಿಯಾಗಲಿದ್ದೇವೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ, ಮತ್ತು ಪಕ್ಷದ ನೂತನ ಅಧ್ಯಕ್ಷರು ಕೆಪಿಸಿಸಿಯ ತಳಮಟ್ಟದ ಕಾರ್ಯಕರ್ತರಾಗಿ ದುಡಿದು ವಿವಿಧ ವಿಭಾಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಸಂಘಟನಾ ಚಾತುರ್ಯ ತೋರಿದವರು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ೨೦೨೮ಕ್ಕೆ ಕಾಂಗ್ರೆಸ್ ಮ್ಯಾಜಿಕ್ ಮಾಡಲಿದ್ದು ೧೫೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಲಿದೆ. ಒಬಿಸಿ ನಾಯಕನಿಗೆ ಅಧ್ಯಕ್ಷಪಟ್ಟ ಒಲಿದು ಬಂದಿದೆ. ನಾನೂ ಕೂಡ ಒಬಿಸಿ ಹುಡುಗನಾಗಿ ಅದನ್ನು ಸ್ವಾಗತಿಸುತ್ತೇನೆ ಎಂದರು.


೨೦೨೬ರ ನೀಟ್ ಕೋಚಿಂಗ್ ಕ್ಷೇತ್ರದ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದ್ದು ನೀಟ್‌ನಲ್ಲಿ ಒಳ್ಳೆಯ ಸ್ಥಾನ ಪಡೆದಿದ್ದರು. ದುರಾದೃಷ್ಟಕ್ಕೆ ಮರುಪರೀಕ್ಷೆ ಇದೇ ಜೂನ್೨೧ಕ್ಕೆ ನಡೆಯಲಿದೆ. ಇದೇ ರೀತಿ ಇಂದು ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಕ್ರಮ ಪ್ರಾರಂಭವಾಗಿದೆ.ಶೀಘ್ರವೇ ೫೬ ಸಾವಿರ ಹುದ್ದೆಗಳನ್ನು ನನ್ನ ಸರಕಾರ ತುಂಬುತ್ತಿದೆ. ಇಲ್ಲಿ ತರಬೇತಿ ಪಡೆಯುವ ನೂರಾರು ವಿದ್ಯಾರ್ಥಿಗಳಲ್ಲಿ ೩೦ ರಿಂದ ೪೦ ಮಕ್ಕಳಾದರೂ ಎ.ಸಿ.ತಹಶೀಲ್ದಾರ್, ಪೊಲೀಸ್ ಇನ್ಸ್ಪೆಕ್ಟರ್ ಆಗಲಿ ಎನ್ನುವುದು ನನ್ನ ಮಹದಾಸೆ.ಆಗುತ್ತಾರೆ ಎಂಬ ವಿಶ್ವಾಸವಿದೆ.


ಮುಂದಿನ ಚುನಾವಣೆ ಬಗ್ಗೆ ಯೋಚಿಸುವವನು ನಾನಲ್ಲ. ಭಗವಂತ ಒಂದು ಅವಕಾಶ ಕೊಟ್ಟಿದ್ದಾನೆ.ಅದನ್ನು ಬಳಸಿಕೊಂಡು ನನ್ನ ಕ್ಷೇತ್ರದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪ್ರತಿ ಭಾನುವಾರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಹೆಸರಾಂತ ಕೋಚಿಂಗ್ ಸೆಂಟರ್ ಪರಿಣಿತರು ಬಂದು ತರಬೇತಿ ಮಾಡಲಿದ್ದಾರೆ.ಯುವಕ ಯುವತಿಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಎಂದರು.


ಮುದ್ದೇನಹಳ್ಳಿಯ ಬಳಿ ಬಸ್ಟಾಪ್ ಮಾಡಿ ಬ್ಯೂಲ್ಡಪ್ ಕೋಡೋಕೆ ದೊಡ್ಡ ಪೋಟೋ ಹಾಕಿಕೊಳ್ಳೋಕೆ ಮುಂದಾದರೆ ಸುಮ್ಮನಿರಬೇಕಾ? ಆಸ್ಪತೆಗೆ ಬರುವ ಬಡವರ ಹೊಟ್ಟೆತುಂಬಿಸುವ ಇಂದಿರಾ ಕ್ಯಾಂಟೀನ್ ಮಾಡುವುದು ಬೇಡವಾ?ಎಂದ ಅವರು ಈವಾಗಲ್ಲ ಎಸಿ ಅವರು ಇಂದಿರಾ ಕ್ಯಾಂಟೀನ್‌ಗೆ ಮೀಸಲಿಟ್ಟಿರುವ ಜಾಗದಲ್ಲಿ ಬಸ್ಟಾಪ್ ಮಾಡಲು ಹೋಗಿದ್ದಾರೆ. ಕಾರಣ ಏನು ಗೊತ್ತಾ ನನ್ನನ್ನು ಬೈಯ್ಯಲು ಟೀಕಿಸಲು ಇವರಿಗೆ ಬೇರೆ ಕಾರಣಗಳು ಯಾವುದೂ ಸಿಕ್ಕಿಲ್ಲ. ಒಂಥರಾ ಮಾನಸಿಕ ಅಸ್ವಸ್ಥತೆ ಕಾಣುತ್ತಿದೆ.ಹೀಗಾಗಿ ಇದನ್ನು ಬಳಸಿಕೊಂಡಿದ್ದಾರೆ ಎಂದರು.