Home ಸುದ್ದಿ ರಾಷ್ಟ್ರೀಯ ಜೂ.೧೭ ಮೋದಿ-ಟ್ರಂಪ್ ಭೇಟಿ

ಜೂ.೧೭ ಮೋದಿ-ಟ್ರಂಪ್ ಭೇಟಿ

ನವದೆಹಲಿ,ಜೂ.೧೪- ಫ್ರಾನ್ಸ್‌ನಲ್ಲಿ ಇದೇ ೧೭ ರಂದು ನಡೆಯಲಿರುವ ಜಿ-೭ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದು ಹಲವು ವಿಷಯಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳಿವೆ.


ಪಶ್ಚಿಮ ದೇಶಗಳ ಸಂಘರ್ಷದ ಹಿನ್ನೆಲೆಯಲ್ಲಿ ಓಮನ್ ಕರಾವಳಿಯಲ್ಲಿ ಭಾರತೀಯ ನಾವಿಕರನ್ನು ಹೊತ್ತೊಯ್ಯುತ್ತಿದ್ದ ಹಲವಾರು ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ಇತ್ತೀಚೆಗೆ ನಡೆಸಿದ ದಾಳಿಯಿಂದ ದ್ವಿಪಕ್ಷೀಯ ಸಂಬಂಧಗಳು ಒತ್ತಡಕ್ಕೆ ಒಳಗಾಗಿರುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಭೇಟಿ ನಡೆಯುತ್ತಿದ್ದು ಇದು ಮಹತ್ವ ಪಡೆದುಕೊಂಡಿದೆ.


ಫ್ರಾನ್ಸ್‌ನಲ್ಲಿ ನಡೆಯಲಿರುವ ಜಿ-೭ ಶೃಂಗಸಭೆಯ ಸಮಯದಲ್ಲಿ, ಉಭಯ ನಾಯಕರು ವ್ಯಾಪಾರ, ಇಂಧನ ಸಹಕಾರ ಎಚ್-೧ಬಿವೀಸಾ ನೀತಿಗಳು, ಪ್ರಾದೇಶಿಕ ಭದ್ರತೆ ಮತ್ತು ಪಶ್ಚಿಮ ಏಷ್ಯಾದಲ್ಲಿನ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.


ಜಿ- ೭ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ ಅವರ ನಡುವಿನ ಭೇಟಿಯ ನಡುವೆ ಭಾರತ-ಅಮೇರಿಕಾ ವ್ಯಾಪಾರ ಒಪ್ಪಂದದ ಬಗ್ಗೆ ಚರ್ಚಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ, ಅಮೆರಿಕದ ಹಿರಿಯ ಅಧಿಕಾರಿಗಳು, “ಸಂಭಾವ್ಯ ವ್ಯಾಪಾರ ಒಪ್ಪಂದದ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ

ಕಳೆದ ವರ್ಷದಿಂದ ಭಾರತದೊಂದಿಗೆ ಸಾಕಷ್ಟು ಮಾತುಕತೆ ನಡೆಸುತ್ತಿದ್ದೇವೆ. ಕೆಲವು ವಾರಗಳ ಹಿಂದೆ ಅಮೆರಿಕ ಭಾರತದಲ್ಲಿ ಒಂದು ತಂಡ ಈ ಸಂಬಂಧ ಚರ್ಚೆ ನಡೆಸಿದೆ. ಅಮೆರಿಕ ಮತ್ತು ಭಾರತ ನೈಸರ್ಗಿಕ ಆರ್ಥಿಕ ಪಾಲುದಾರರು ಮತ್ತು ಪರಸ್ಪರ ಭೇಟಿ ಮಾಡಿ ಚರ್ಚೆ ನಡೆಸುವ ನಿರೀಕ್ಷೆ ಇದೆ ಎಂದು ಅಮೆರಿಕ ಹೇಳಿದೆ.

ಭಾರತ- ಅಮೆರಿಕ ನಡುವೆ ವ್ಯಾಪಾರ ಒಪ್ಪಂದಿಂದ ಇಂಧನ, ಕೈಗಾರಿಕಾ ಉತ್ಪನ್ನಗಳು ಮತ್ತು ಕೆಲವು ಕೃಷಿ ಉತ್ಪನ್ನಗಳ ವಿಷಯದಲ್ಲಿ ಉಭಯ ದೇಶಗಳಿಗೆ ಪೂರಕವಾಗಲಿದ್ದು ಅಮೆರಿಕ ಭಾರತಕ್ಕೆ ಮಾರಾಟ ಮಾಡುವ ವಿಷಯಗಳ ಕುರಿತು ಅಂತಿಮ ಒಪ್ಪಂದಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಮೆರಿಕ-ಭಾರತ ಸಂಬಂಧದ ಪ್ರಾಮುಖ್ಯತೆಯ ಬಗ್ಗೆ ಸಾಕಷ್ಟು ಮಹತ್ವಾಕಾಂಕ್ಷೆ ಹೊಂದಿದ್ದಾರೆಂದು ನಮಗೆ ತಿಳಿದಿದೆ. ಸಂಭಾವ್ಯ ವ್ಯಾಪಾರ ಒಪ್ಪಂದ ಎಂದು ಭಾವಿಸುತ್ತೇವೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಮತ್ತು ಸ್ಲೋವಾಕಿಯಾದ ಒಂದು ವಾರದ ಪ್ರವಾಸದಲ್ಲಿ ಫ್ರಾನ್ಸ್ “ಭಾರತದ ಕಾರ್ಯತಂತ್ರದ ದೃಷ್ಟಿಕೋನದಲ್ಲಿ ವಿಶೇಷ ಸ್ಥಾನ ಪಡೆದಿದ್ದು ಭಾರತವು ಫ್ರೆಂಚ್ ಕಂಪನಿ ಡಸಾಲ್ಟ್ ಏವಿಯೇಷನ್‌ನ ರಫೇಲ್ ಫೈಟರ್ ಜೆಟ್‌ನ ಪ್ರಮುಖ ಗ್ರಾಹಕ ದೇಶವಾಗಿದ್ದು ಈ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ.

“ಭಾರತದ ಕಾರ್ಯತಂತ್ರದ ದೃಷ್ಟಿಕೋನದಲ್ಲಿ ಫ್ರಾನ್ಸ್ ವಿಶೇಷ ಸ್ಥಾನ ಹೊಂದಿದೆ. ಈ ವರ್ಷದ ಆರಂಭದಲ್ಲಿ, ಅಧ್ಯಕ್ಷ ಮ್ಯಾಕ್ರನ್ ಭಾರತಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದರು. ಇದು ಉಭಯ ದೇಶಗಳ ನಡುವೆ ಉತ್ತಮ ಬಾಂಧವ್ಯ ಬಲಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಫ್ರಾನ್ಸ್‌ನಲ್ಲಿ ಉಭಯ ನಾಯಕರ ನಡುವಿನ ಈ ಸಭೆಯು ಫೆಬ್ರವರಿ ೨೦೨೫ ರ ನಂತರ ಮೊದಲ ಮುಖಾಮುಖಿ ಸಂವಾದವಾಗಿದೆ. ನವೆಂಬರ್ ೨೦೨೪ ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.