
ಕಲಬುರಗಿ: ನಗರದ ಎಸ್.ಎಸ್ ತೆಗ್ನೂರು ಪಿಯು ಮತ್ತು ಪದವಿ ಮಹಾವಿದ್ಯಾಲಯದಲ್ಲಿಂದು ಜಿಲ್ಲಾಡಳಿತ,ಜಿಪಂ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆ,ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾದ ವಿಶ್ವತಂಬಾಕು ರಹಿತ ದಿನವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಅವರು ಉದ್ಘಾಟಿಸಿದರು.ಎನ್‍ಒಎಚ್‍ಪಿ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ರಾಜು ರಾಂಪುರೆ,ಪ್ರಾಂಶುಪಾಲರಾದ ಜ್ಯೋತಿ ತೆಗ್ನೂರು,ಸುಜಾತಾ ಪಾಟೀಲ, ಮಂಜುನಾಥ ಕಂಬಳಿಮಠ,ಆರತಿ ಧನಶ್ರೀ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.


























