
ಕಲಬುರಗಿ,ಸೆ.28-ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ 24 ವರ್ಷದ ಗರ್ಭಿಣಿ ಮಹಿಳೆಯೋಬ್ಬರು ಗ್ರಾಮದ ತಿಪ್ಪೆಗುಂಡಿಯಲ್ಲಿ ಆಗ ತಾನೆ ಜನಿಸಿದ ಹೆಣ್ಣು ಶಿಶುವನ್ನು ಜೀವಂತ ಸಮಾಧಿ ಮಾಡಲು ಹೊರಟು, ಸಮಾಧಿ ಮಾಡಲು ಧೈರ್ಯ ಸಾಲದೆ ಪೆÇದೆಯಲ್ಲಿ ಶಿಶುವನ್ನು ಎಸೆದು ಹೋದ ಘಟನೆ ಶುಕ್ರವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಗು ಅಳುವ ಶಬ್ದಕೇಳಿ ಪಕ್ಕದ ಮನೆಯವರು ಹೊರಗಡೆ ಬಂದು ಹುಡುಕಾಡಿದಾಗ ಪೆÇದೆಯಲ್ಲಿ ರಕ್ತದ ಕಣದಲ್ಲಿ ಬಿದ್ದ ಮಗುವನ್ನು ರಕ್ಷಿಸಿ, ಮಗುವನ್ನು ಎಸೆದು ಮರಳಿ ಬರಲು ಯತ್ನಿಸಿದ ಶಿಶುವಿನ ತಾಯಿ ಮತ್ತು ಅಜ್ಜಿಯನ್ನು ವಿಚಾರಿಸಿ 112ಗೆ ಕರೆಮಾಡಿ ಪೆÇಲೀಸರಿಗೆ ಒಪ್ಪಿಸಿದ್ದಾರೆ. ವಿಶ್ವಾವಿದ್ಯಾಲಯ ಪೆÇಲೀಸ್ ಠಾಣಾಧಿಕಾರಿಗಳ ಮುಖಾಂತರ ಮಗು ಮತ್ತು ಮಗುವಿನ ತಾಯಿಯನ್ನು ಹೆಚ್ಚಿನ ಚಿಕಿತ್ಸೆಗೆ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಪ್ರಕರಣ ಮೇಲಾಧಿಕಾರಿಗಳ ಗಮನಕ್ಕೆ ಬಂದು ಶಿಶುವನ್ನು ಹತ್ಯೆ ಮಾಡಲು ಹೊರಟ ಮಗುವಿನ ತಾಯಿ ವಿರುದ್ದ ದೂರು ದಾಖಲಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮಕ್ಕಳ ಸಹಾಯವಾಣಿ ಸಂಯೋಜಕರಿಗೆ ಆಪ್ತಸಮಾಲೋಚಕರಿಗೆ ತಿಳಿಸಿದ್ದರಿಂದ ವಿಶ್ವವಿದ್ಯಾಲಯ ಪೆÇಲೀಸ್ ಠಾಣೆಯಲ್ಲಿ ತಡರಾತ್ರಿ ದೂರು ದಾಖಲಿಸಲಾಗಿದೆ. ದೂರು ದಾಖಲಿಸಿಕೊಂಡ ಪೆÇಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆಂದು ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕ ಬಸವರಾಜ ತೆಂಗಳಿ ತಿಳಿಸಿದ್ದಾರೆ.





















