
ಬೆಂಗಳೂರು,ಆ೩೦:ರಾಜ್ಯ ಸರ್ಕಾರ ಪಾರ್ಕ್‌ಗಳ ಶೇಕಡಾ ೫ರಷ್ಟು ಜಾಗವನ್ನು ಇತರೆ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಇಂದು ಬೆಳಿಗ್ಗೆ ಲಾಲ್‌ಬಾಗ್‌ನಲ್ಲಿ ಬೃಹತ್ ಜನಾಂದೋಲನ ನಡೆಯಿತು.
“Wಚಿಟಞ iಟಿ ಐಚಿಟbಚಿgh, Wಚಿಟಞ ಜಿoಡಿ ಐಚಿಟbಚಿgh” ಘೋಷಣೆಯಡಿ ನಡೆದ ನಡಿಗೆ ಅಭಿಯಾನದಲ್ಲಿ ಸಂಸದ ತೇಜಸ್ವಿ ಸೂರ್ಯ, ಪಿಸಿ ಮೋಹನ್. ಶೋಭ ಕರಂದ್ಲಾಜೆ, ಪರಿಸರವಾದಿ ಯಲ್ಲಪ್ಪ ರೆಡ್ಡಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಾವಿರಾರು ಸಾರ್ವಜನಿಕರು ಭಾಗವಹಿಸಿದ್ದರು.
ಲಾಲ್‌ಬಾಗ್ ಪಶ್ಚಿಮ ದ್ವಾರದಿಂದ ಬಂಡೆಯವರೆಗೆ ನಡೆದ ಕಾಲ್ನಡಿಗೆ ಜಾಥಾದಲ್ಲಿ “ಉಳಿಸಿ ಉಳಿಸಿ ಲಾಲ್‌ಬಾಗ್ ಉಳಿಸಿ” ಎಂಬ ಘೋಷಣೆಗಳು ಮೊಳಗಿದವು. ಜಾಥಾ ಬಂಡೆ ತಲುಪಿದ ಬಳಿಕ ಸಾರ್ವಜನಿಕರು ಮತ್ತು ಸಂಸದರು ಅಲ್ಲಿಯೇ ಕುಳಿತು ಸರ್ಕಾರದ ನಿರ್ಧಾರದ ವಿರುದ್ಧ ಘೋಷಣೆ ಕೂಗಿದರು. ವಿಶೇಷವಾಗಿ ಅಂಗವಿಕಲರೂ ವೀಲ್‌ಚೇರ್ ಮೂಲಕ ನಡಿಗೆ ಅಭಿಯಾನದಲ್ಲಿ ಪಾಲ್ಗೊಂಡು ಪಾರ್ಕ್ ಸಂರಕ್ಷಣೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಪೋಸ್ಟ್‌ಕಾರ್ಡ್ ಚಳುವಳಿ
ಲಾಲ್‌ಬಾಗ್ ಪಶ್ಚಿಮ ದ್ವಾರದ ಬಳಿ ಸಾರ್ವಜನಿಕರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆಯುವ ಮೂಲಕ ಪೋಸ್ಟ್‌ಕಾರ್ಡ್ ಚಳುವಳಿ ನಡೆಸಿದರು. ಇಂದು ಸುಮಾರು ೩ ಸಾವಿರ ಪತ್ರಗಳನ್ನು ಬರೆಯುವ ಗುರಿಯೊಂದಿಗೆ ಅಭಿಯಾನ ನಡೆದಿದ್ದು, ನಿನ್ನೆ ಕೂಡ ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಪತ್ರ ಬರೆದು ತಮ್ಮ ವಿರೋಧ ವ್ಯಕ್ತಪಡಿಸಿದ್ದರು.
ಅಭಿಯಾನದಲ್ಲಿ ಸಂಸದ ಡಾ. ಮಂಜುನಾಥ್, ಸಂಸದ ಪಿ.ಸಿ. ಮೋಹನ್, ಸಂಸದೆ ಶೋಭಾ ಕರಂದ್ಲಾಜೆ, ಡಾ: ಮಂಜುನಾಥ್ ,ಹಿರಿಯ ನಟಿ ಸುಧಾ ಬೆಳವಾಡಿ, ನಟಿ ಸಂಯುಕ್ತ ಹೊರನಾಡು, ಕರವೇ ಪ್ರವೀಣ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಹಾಗೂ ಪರಿಸರ ಹೋರಾಟಗಾರರು ಭಾಗವಹಿಸಿದ್ದರು.
“ಪಾರ್ಕ್ ಜಾಗ ಕಬಳಿಸುವುದನ್ನು ಒಪ್ಪಲ್ಲ’ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಟನಲ್ ರಸ್ತೆ ಯೋಜನೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಪಾರ್ಕ್ ಪ್ರದೇಶವನ್ನು ಬಳಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಆರೋಪಿಸಿದರು.
“ಪಾರ್ಕ್ ಜಾಗವನ್ನು ಕಬಳಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಲಾಲ್‌ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಶ್ವಾಸಕೋಶಗಳ ರಕ್ಷಣೆಗಾಗಿ ಸಾರ್ವಜನಿಕರು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಕೂಡಲೇ ಕಾಯ್ದೆ ತಿದ್ದುಪಡಿ ಹಾಗೂ ಟನಲ್ ರಸ್ತೆ ಯೋಜನೆಯನ್ನು ಕೈಬಿಡಬೇಕು,” ಎಂದು ಆಗ್ರಹಿಸಿದರು.
ಸರ್ಕಾರ ಹಿಂದೆ ಟನಲ್ ರಸ್ತೆ ಯೋಜನೆ ಕುರಿತು ಭಿನ್ನ ಹೇಳಿಕೆಗಳನ್ನು ನೀಡಿದ್ದು, ನಂತರ ಅಫಿಡವಿಟ್ ಸಲ್ಲಿಸಿ ಕಾಯ್ದೆ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿದೆ. ಹೀಗಿರುವಾಗ ಸರ್ಕಾರವನ್ನು ಹೇಗೆ ನಂಬುವುದು ಎಂದು ಪ್ರಶ್ನಿಸಿದ ಅವರು, “ಪಾರ್ಕ್ ಉಳಿಸುವುದು ಅಪರಾಧವಾದರೆ ಪ್ರತಿದಿನ ಈ ಹೋರಾಟದಲ್ಲಿ ಭಾಗವಹಿಸುತ್ತೇವೆ. ನಮ್ಮ ಮೇಲೆ ಪ್ರಕರಣ ದಾಖಲಿಸಿದರೂ ಹಿಂದೆ ಸರಿಯುವುದಿಲ್ಲ” ಎಂದು ಸವಾಲು ಹಾಕಿದರು.
“ಇಂದು ೫%, ನಾಳೆ ೧೦-೧೫% ಆಗಬಹುದು” ಶೋಭಾ ಕರಂದ್ಲಾಜೆ:
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ೧೯೭೫ರಲ್ಲಿ ಪಾರ್ಕ್‌ಗಳನ್ನು ರಕ್ಷಿಸುವ ಉದ್ದೇಶದಿಂದ ಕಾಯ್ದೆ ಜಾರಿಗೊಳಿಸಲಾಗಿತ್ತು. ಆದರೆ ಇದೀಗ ಅದಕ್ಕೆ ತಿದ್ದುಪಡಿ ತಂದು ಶೇಕಡಾ ೫ರಷ್ಟು ಜಾಗವನ್ನು ಬೇರೆ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುತ್ತಿರುವುದು ಆತಂಕಕಾರಿ ಎಂದರು.
“ಇಂದು ೫ ಪ್ರತಿಶತ ಎನ್ನುತ್ತಾರೆ, ಮುಂದೊಂದು ದಿನ ಅದು ೧೦ ಅಥವಾ ೧೫ ಪ್ರತಿಶತವಾಗಬಹುದು. ನಗರದ ಹಸಿರು ಪ್ರದೇಶ ಮತ್ತು ಕೆರೆಗಳನ್ನು ಉಳಿಸದಿದ್ದರೆ ಬೆಂಗಳೂರಿನ ಪರಿಸರಕ್ಕೆ ದೊಡ್ಡ ಹೊಡೆತ ಬೀಳಲಿದೆ,” ಎಂದು ಎಚ್ಚರಿಸಿದರು.
“ಚರ್ಚೆಯಿಲ್ಲದೆ ಮಸೂದೆ ಅಂಗೀಕಾರ” ಪಿ.ಸಿ. ಮೋಹನ್:
ಸಂಸದ ಪಿ.ಸಿ. ಮೋಹನ್ ಅವರು, ವಿಧಾನಮಂಡಲದಲ್ಲಿ ಸಮರ್ಪಕ ಚರ್ಚೆಯಿಲ್ಲದೆ ಮಸೂದೆ ಅಂಗೀಕರಿಸಲಾಗಿದೆ ಎಂದು ಆರೋಪಿಸಿದರು. ಟನಲ್ ರಸ್ತೆ ಯೋಜನೆಯ ಹಿನ್ನೆಲೆಯಲ್ಲಿ ಪಾರ್ಕ್ ಪ್ರದೇಶ ಬಳಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಟೀಕಿಸಿದ ಅವರು, ಯೋಜನೆಯ ವೈಜ್ಞಾನಿಕತೆ ಹಾಗೂ ಅದರ ಪ್ರವೇಶ-ನಿರ್ಗಮನ ಮಾರ್ಗಗಳ ಬಗ್ಗೆಯೂ ಪ್ರಶ್ನೆ ಎತ್ತಿದರು.
ಇನ್ನು ಸಂಸದ ಮಂಜುನಾಥ್ ಮಾತಾನಾಡಿ,ರಾಜ್ಯ ಸರ್ಕಾರ ಇದನ್ನ ಇಲ್ಲೇ ಕೈಬಿಡಬೇಕು
ಇದು ಆಂಟಿ ಎನ್ವೈರ್ನಮೆಂಟ್ ಆಕ್ಟ್, ಆಂಟಿ ನೇಚರ್ ಆಕ್ಟ್ ೩ಸಾವಿರ ಎಕರೆ ಮಾತ್ರ ಇರೋದು
ಪರಿಸರಕ್ಕೆ ಮನುಷ್ಯ ಬೇಕಾಗಿಲ್ಲ.. ಮನುಷ್ಯನಿಗೆ ಪರಿಸರ ಬೇಕು ಆರೆಂಜ್ ಲೈನ್ ಮೆಟ್ರೋ ಬಹಳ ಮುಖ್ಯವಾಗಿದೆ.. ಅದು ಆಗಬೇಕು
ಮೆಟ್ರೋ ಕಾಮಗಾರಿ ಮುಗಿಸಿದ್ರೆ ಯಾವ ಟನಲ್ ರೋಡ್ ಬೇಡ ಪರಿಸರ ಉಳಿಸಬೇಕು ಅಂತ ಎಲ್ಲರೂ ಒಂದಾಗಿದ್ದೇವೆ
ಯಾವ ರಾಜಕೀಯ ಇದರಲ್ಲಿ ಇಲ್ಲ.. ಪಕ್ಷಾತೀತವಾಗಿ ಹೋರಾಟ ಮಾಡ್ತಾ ಇದ್ದೇವೆ ವಾಯು ಮಾಲಿನ್ಯ ಹೊಸ ತಂಬಾಕು, ಧೂಮಪಾನ ಅಂತ ಕರಿತ್ತೇವೆ ವಾಕಿಂಗ್‌ಗೆ ಫುಟ್‌ಪಾತ್ ಇಲ್ಲ.. ಜಾಗ ಇಲ್ಲ ಎಂದು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
“ಲಾಲ್‌ಬಾಗ್ ತುಂಡು ತುಂಡು ಮಾಡಬೇಡಿ”
ಡಾ. ವಿವೇಕ್ ಜವಳಿ ಅವರು, ಅಭಿವೃದ್ಧಿ ಯೋಜನೆಗಳನ್ನು ಉತ್ತಮ ಉದ್ದೇಶ ಹಾಗೂ ಪರಿಸರ ಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಬೇಕು ಎಂದರು. “ಲಾಲ್‌ಬಾಗ್ ಅನ್ನು ತುಂಡು ತುಂಡು ಮಾಡುವ ಯಾವುದೇ ಪ್ರಯತ್ನ ಸರಿಯಲ್ಲ. ಲಾಲ್‌ಬಾಗ್ ಉಳಿಸುವ ಕೆಲಸವೇ ಸರ್ಕಾರದ ಆದ್ಯತೆಯಾಗಬೇಕು” ಎಂದು ಹೇಳಿದರು.
“ಬೆಂಗಳೂರಮ್ಮನನ್ನು ಸಾಯಿಸಬೇಡಿ”ಯಲ್ಲಪ್ಪ ರೆಡ್ಡಿ
ಪರಿಸರವಾದಿ ಯಲ್ಲಪ್ಪ ರೆಡ್ಡಿ ಅವರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಟನಲ್ ರಸ್ತೆ ಯೋಜನೆಯಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಕುರಿತು ಸಮಗ್ರ ಅಧ್ಯಯನ ನಡೆಸಲಾಗಿದೆಯೇ ಎಂದು ಪ್ರಶ್ನಿಸಿದ ಅವರು, “ಬೆಂಗಳೂರಿನ ಹೃದಯಭಾಗದಲ್ಲೇ ಟನಲ್ ಮಾಡಲು ಹೊರಟಿದ್ದೀರಿ. ಪರಿಸರ ಮತ್ತು ಭೂವೈಜ್ಞಾನಿಕ ಅಧ್ಯಯನವಿಲ್ಲದೆ ಇಂತಹ ಯೋಜನೆಗಳನ್ನು ಜಾರಿಗೊಳಿಸುವುದು ಸರಿಯಲ್ಲ. ಬೆಂಗಳೂರಮ್ಮನನ್ನು ಸಾಯಿಸಬೇಡಿ ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಸರ್ಕಾರದ ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ ಅವರು, “ನೋಟಿಸ್ ನೀಡಲು ನಾವೇನು ಅಪರಾಧಿಗಳೇ? ಪಾರ್ಕ್ ಮತ್ತು ಪರಿಸರ ಉಳಿಸುವ ಹೋರಾಟವನ್ನು ಅಪರಾಧವೆಂದು ಪರಿಗಣಿಸಬಾರದು” ಎಂದು ಹೇಳಿದರು.
ಸರ್ಕಾರದ ನಿರ್ಧಾರ ಹಿಂಪಡೆಯುವಂತೆ ಆಗ್ರಹ
ಒಟ್ಟಾರೆಯಾಗಿ, ಲಾಲ್‌ಬಾಗ್‌ನಲ್ಲಿ ನಡೆದ “ಲಾಲ್‌ಬಾಗ್ ಉಳಿಸಿ ಅಭಿಯಾನವು ಪಾರ್ಕ್‌ಗಳ ಸಂರಕ್ಷಣೆ ಕುರಿತ ಸಾರ್ವಜನಿಕ ಆತಂಕವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಪರಿಸರವಾದಿಗಳು, ಜನಪ್ರತಿನಿಧಿಗಳು, ಕಲಾವಿದರು ಹಾಗೂ ಸಾರ್ವಜನಿಕರು ಒಂದೇ ವೇದಿಕೆಯಲ್ಲಿ ಸೇರಿ ಸರ್ಕಾರವು ಪಾರ್ಕ್‌ಗಳ ಶೇಕಡಾ ೫ರಷ್ಟು ಜಾಗವನ್ನು ಇತರೆ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುವ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯಬೇಕು ಹಾಗೂ ಟನಲ್ ರಸ್ತೆ ಯೋಜನೆಯ ಕುರಿತು ಮರುಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.


































