Home ಜಿಲ್ಲೆ ಅಪಹರಣಕ್ಕೊಳಗಾದ  ಕಾಣೆಯಾದ ಮಕ್ಕಳ  ದೂರುಗಳ ಪರಿಶೀಲನಾ ಸಭೆ

ಅಪಹರಣಕ್ಕೊಳಗಾದ  ಕಾಣೆಯಾದ ಮಕ್ಕಳ  ದೂರುಗಳ ಪರಿಶೀಲನಾ ಸಭೆ

Oplus_16908288

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಆ.30: ನಾಪತ್ತೆಯಾದ ಮಕ್ಕಳ ಪತ್ತೆ ಮಾಡಲು, ಶಾಲೆಯಿಂದ ಹೊರಗುಳಿದವರನ್ನು ಮರಳಿ ಶಾಲೆಗೆ ಸೇರಿಸುವುದು, ಭಿಕ್ಷಾಟಣೆಯಿಂದ. ಬಾಲ್ಯ ವಿವಾಹಗಳಿಂದ ಮಕ್ಕಳ ರಕ್ಷಣೆ, ಬಾಲ್ಯ ವಿವಾಹಗಳು ತಡೆಯಲು ಕೈಗೊಳ್ಳಬೇಕಾದ ಜಾಗೃತಿ ಕ್ರಮಗಳು, ಬೇರೆ ರಾಜ್ಯಗಳ ಕಾರ್ಮಿಕರ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿರುವವರನ್ನು ಗುರುತಿಸಿ, ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವವರ ವಿರುದ್ಧ ಕಾನೂನಾತ್ಮಕ ಕ್ರಮಗಳು, ಜಿಲ್ಲೆಯಲ್ಲಿ ಅಕ್ಕ ಪಡೆಯ ಕಾರ್ಯನಿರ್ವಹಣೆ, ಶಾಲಾ-ಕಾಲಲೇಜು. ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಿಗೆ ಮಹಿಳೆ ಮತ್ತು ಮಕ್ಕಳ ರಕ್ಷಣೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಭೇಟಿ ನೀಡಿದ ವಿವರ, ಮುಂದಿನ ದಿನಗಳಲ್ಲಿ ವಸತಿ ನಿಲಯ, ಕೊಳಚೆ ಪ್ರದೇಶಗಳಿಗೆ ಭೇಟಿ, ಜಾಗೃತಿಗೆ ಸೂಚನೆ. ಆರ್.ಸಿ.ಹೆಚ್. ಪೋರ್ಟಲ್ನಲ್ಲಿ ದಾಖಲಾಗುವ ಬಾಲ ಗರ್ಭಿಣಿ ಪ್ರಕರಣಗಳ ಮುಂದಿನ ಕಾನೂನಾತ್ಮಕ ಕ್ರಮಗಳು, ಬೀಟ್ ಪೊಲೀಸ್ ಸಿಬ್ಬಂದಿಯ ಕೊಳಚೆ ಪ್ರದೇಶಗಳಿಗೆ ಭೇಟಿ ನೀಡಲು ಸೂಚನೆ, ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಸೇರಿದಂತೆ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಅಪಹರಣಕ್ಕೊಳಗಾದ ಮತ್ತು ಕಾಣೆಯಾದ ಮಕ್ಕಳ ಕುರಿತು ದಾಖಲಾದ ದೂರುಗಳ ಪರಿಶೀಲನಾ ಜಿಲ್ಲಾ ಮಟ್ಟದ ಕಾರ್ಯ ಪಡೆಯ ಸಭೆ ನಡೆಯಿತು.

ಎಸ್ಪಿ  ಡಾ. ಸುಮನ್ ಡಿ.ಪೆನ್ನೇಕರ್.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ರಾಜೇಶ್ ಎನ್. ಹೊಸಮನೆ, ಎಎಸ್ಪಿ ನವೀನ್ ಕುಮಾರ್ ಎನ್., ಮಕ್ಕಳ ಕಲ್ಯಾಣ ಸಮಿತಿಯ

 ನೋಡಲ್ ಅಧಿಕಾರಿ ತ್ರಿವೇಣಿ ಪತ್ತರ್ ಮೊದಲಾದವರು ಪಾಲ್ಗೊಂಡಿದ್ದರು.