
ಆಳಂದ:ಮರೆಪ್ಪ ಎಂ.ಮೇತ್ರಿ .ಯವರು ಕಲಬುರ್ಗಿ ಜಿಲ್ಲೆಯ ಶಹಾಬಾದ ತಾಲೂಕಿನ ಹೋನಗುಂಟಾ ಗ್ರಾಮದವರು. ತಂದೆ .ಮರೆಪ್ಪ ತಾಯಿ ರತ್ನಮ್ಮ
ಎಂ.ಎ. ಎಂ.ಫಿಲ್ ಪದವಿಗಳನ್ನು ಪಡೆದಿದ್ದಾರೆ.ಎನ್.ಇ.ಟಿ. ಪಾಸಾಗಿದ್ದಾರೆ. ಹೈದ್ರಾಬಾದ ಕರ್ನಾಟಕ ದಲಿತ ಸಾಹಿತ್ಯ ಕುರಿತು ಸಂಶೋಧನೆ ಮಾಡಿದ್ದಾರೆ. ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ ರಾಜ್ಯ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಸಹೃದಯರಾದ ಇವರು ತಮ್ಮ ಅಭ್ಯಾಸದ ಪರಿಶ್ರಮದಿಂದ ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡವರು ಓದುಗರಾಗಿ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಉಳ್ಳವರು. ಸಾಹಿತ್ಯ ಸಮಾಜ ಸಂಸ್ಕೃತಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದವರು . -ಸ್ನೇಹಜೀವಿಯಾದ ಇವರು
ಜೀವಪರ, ಜನಪರ ಪ್ರಗತಿಪರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡವರು . ಪ್ರಸ್ತುತ ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಚಿತ್ತಾಪುರದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ . ಇವರ ಶೈಕ್ಷಣಿಕ ಸಾಧನೆ ಬೋಧನಾ ಸೇವೆಯನ್ನು ಪರಿಗಣಿಸಿ ದಿನಾಂಕ ೨೭.೯.೨೦೨೬ರಂದು ಕಲಬುರ್ಗಿಯ ರಂಗಾಯಣದಲ್ಲಿ ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ ಕಲಬುರ್ಗಿಯು ಏರ್ಪಡಿಸಿದ ವಿಶೇಷ ಉಪನ್ಯಾಸ ಹಾಗೂ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಿ. ಶಾಮಸುಂದರ್ ಸಾಹಿತ್ಯ ಸಿರಿ ಪ್ರಧಾನ ಮಾಡಲಾಯಿತು.





















