
ಬಾದಾಮಿ,ಸೆ.೨೯: ತಾಲೂಕಿನ ಸುಕ್ಷೇತ್ರ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಹಳೆ ಮಹಾಕೂಟ ಪ್ರದೇಶದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ, ನಿಸರ್ಗ ಬಳಗ ಪರಿಸರ ವೇದಿಕೆ ಹಾಗೂ ಮಹಾಕೂಟ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ೧೫೦ಕ್ಕೂ ಅಧಿಕ ಜ್ಯೂಸ್ ಬಿಲ್ವಪತ್ರೆ ಸಸಿಗಳನ್ನು ನೆಡುವ ಮೂಲಕ ಪತ್ರಿವನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹವಾಮಾನ ವೈಪರೀತ್ಯ, ಬರಗಾಲ ಹಾಗೂ ಪರಿಸರ ಅಸಮತೋಲನದಂತಹ ಸಮಸ್ಯೆಗಳನ್ನು ತಡೆಯಲು ಹಸಿರೀಕರಣವೇ ಪ್ರಮುಖ ಪರಿಹಾರವಾಗಿದೆ. ಪ್ರತಿಯೊಬ್ಬ ನಾಗರಿಕರೂ ಕನಿ?À್ಠ ಒಂದು ಗಿಡವನ್ನು ನೆಟ್ಟು ಅದನ್ನು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಮಹಾಕೂಟದಂತಹ ಪವಿತ್ರ ಕ್ಷೇತ್ರದಲ್ಲಿ ಶಿವನಿಗೆ ಅತಿ ಪ್ರಿಯವಾದ ಜ್ಯೂಸ್ ಬಿಲ್ವಪತ್ರೆ ಸಸಿಗಳ ನೆಡುವಿಕೆ ಮೂಲಕ ಪತ್ರಿವನ ನಿರ್ಮಾಣ ಪವಿತ್ರ ಕ್ಷೇತ್ರದಲ್ಲಿ ಪಾವಿತ್ರತೆ ಪ್ರಭೇದ ಪತ್ರಿವನ ಕಾರ್ಯ ನಿಸರ್ಗ ಬಳಗ ದೇವರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಶ್ಲಾಘಿಸಿದರು. ನಿಸರ್ಗ ಬಳಗ ಪರಿಸರ ವೇದಿಕೆ, ಮಹಾಕೂಟ ಟ್ರಸ್ಟ್ ಹಾಗೂ ಅರಣ್ಯ ಇಲಾಖೆ ಕೈಗೊಂಡಿರುವ ಈ ಕಾರ್ಯಕ್ರಮ ಇತರರಿಗೆ ಮಾದರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ನಿಸರ್ಗ ಬಳಗ ಪರಿಸರ ವೇದಿಕೆ ಅಧ್ಯಕ್ಷ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಉಪನ್ಯಾಸಕ ಎಸ್.ಎಚ್.ವಾಸನ, ಬಿಲ್ವಪತ್ರೆಯ ಧಾರ್ಮಿಕ, ಔ?Àಧೀಯ ಹಾಗೂ ಪರಿಸರ ಮಹತ್ವವನ್ನು ವಿವರಿಸಿದರು. ಶಿವಾರಾಧನೆಯಲ್ಲಿ ಬಿಲ್ವಪತ್ರೆಗೆ ವಿಶೇ?À ಸ್ಥಾನವಿದ್ದು, ಪರಿಸರ ಸಮತೋಲನ ಕಾಪಾಡುವಲ್ಲಿ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ರೈತರು ಮಳೆ ಆಶ್ರಿತ ಹಾಗೂ ನೀರಾವರಿ ಜಮೀನುಗಳಲ್ಲಿ ಬಿಲ್ವಪತ್ರೆ ಬೆಳೆಯಲು ಮುಂದಾಗಬೇಕು. ಉತ್ತಮ ಗುಣಮಟ್ಟದ ಬಿಲ್ವಪತ್ರೆ ಸಸಿಗಳು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಲಭ್ಯವಿದ್ದು, ಆಸಕ್ತ ರೈತರು ಇದರ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
ಮಹಾಕೂಟ ಟ್ರಸ್ಟ್ ಅಧ್ಯಕ್ಷ ಕುಮಾರಗೌಡ ಜನಾಲಿ ಅವರು ಪತ್ರಿವನ ನಿರ್ಮಾಣಕ್ಕೆ ತಂತಿ ಬೇಲಿ ನಿರ್ಮಿಸಿ ವಿಶೇ?À ಆಸಕ್ತಿ ತೋರಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿರುವುದನ್ನು ನಿಸರ್ಗ ಬಳಗದ ಸದಸ್ಯರು ಅಭಿನಂದಿಸಿದರು. ಮುಂದಿನ ದಿನಗಳಲ್ಲಿ ಮಹಾಕೂಟ ಪ್ರದೇಶವನ್ನು ಹಸಿರು ಪರಿಸರದ ಮಾದರಿ ತಾಣವನ್ನಾಗಿ ರೂಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.
“ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಉಳಿಸಿ ಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗಿಡಮರಗಳ ಸಂರಕ್ಷಣೆ ಮೂಲಕ ಪ್ರಕೃತಿಯ ಸಮತೋಲನ ಕಾಪಾಡಬಹುದು. ಪಂಚಮಹಾಭೂತಗಳ ಮಹತ್ವವನ್ನು ಅರಿತು ಅರಣ್ಯ ಸಂಪತ್ತನ್ನು ವೃದ್ಧಿಸುವ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕು” ಎಂದು ಎಸ್.ಎಚ್. ವಾಸನ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ರಂಗನಾಥ ಹೊಸಮನಿ ಹಾಗೂ ಸಿಬ್ಬಂದಿ, ಮಹಾಕೂಟ ಟ್ರಸ್ಟ್ ಪದಾಧಿಕಾರಿಗಳು, ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.





















