Home ಜಿಲ್ಲೆ ಕಲಬುರಗಿ ರಾಷ್ಟ್ರೀಯ ಆರ್ಥಿಕತೆಗೆ ಪ್ರವಾಸೋದ್ಯಮದ ಕೊಡುಗೆ ಮಹತ್ವದ್ದು: ಪ್ರೊ.ಆರ್. ಆರ್. ಬಿರಾದಾರ್

ರಾಷ್ಟ್ರೀಯ ಆರ್ಥಿಕತೆಗೆ ಪ್ರವಾಸೋದ್ಯಮದ ಕೊಡುಗೆ ಮಹತ್ವದ್ದು: ಪ್ರೊ.ಆರ್. ಆರ್. ಬಿರಾದಾರ್

ಕಲಬುರಗಿ,ಸೆ.29-ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿ.ಯು.ಕೆ.), ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗದ ವತಿಯಿಂದ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ, ಶರಣಬಸವ ವಿಶ್ವವಿದ್ಯಾಲಯ, ಏವಿಯೇಷನ್ ಇನ್‍ಸ್ಟಿಟ್ಯೂಟ್ ಆಫ್ ಕರ್ನಾಟಕ, ಇಂಟಾಕ್ ಕಲಬುರಗಿ ಶಾಖೆ ಹಾಗೂ ಕೆ.ಟಿ.ಎಫ್. ಸಹಯೋಗದಲ್ಲಿ ವಿಶ್ವ ಪ್ರವಾಸೋದ್ಯಮ ದಿನ 2026ನ್ನು ಸಿ.ಯು.ಕೆ. ಆವರಣದಲ್ಲಿ ಆಚರಿಸಲಾಯಿತು.
“ಡಿಜಿಟಲ್ ಕಾರ್ಯಸೂಚಿ ಮತ್ತು ಕೃತಕ ಬುದ್ಧಿಮತ್ತೆ: ಪ್ರವಾಸೋದ್ಯಮದ ಮರುರೂಪಿಸುವಿಕೆ” ಎಂಬ ವಿಷಯದಡಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಭೆಯನ್ನುದ್ದೇಶಿಸಿ ಮಾತನಾಡಿದ ಪೆÇ್ರ. ಆರ್. ಆರ್. ಬಿರಾದಾರ್, ರಾಷ್ಟ್ರೀಯ ಆರ್ಥಿಕತೆಗೆ ಪ್ರವಾಸೋದ್ಯಮದ ಮಹತ್ವದ ಕೊಡುಗೆಯನ್ನು ವಿವರಿಸಿದರು.
ಪ್ರವಾಸೋದ್ಯಮವು ಆದಾಯ, ಉದ್ಯೋಗ ಹಾಗೂ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಆತಿಥ್ಯ, ಸಾರಿಗೆ, ಆಹಾರ ಸೇವೆ, ಕರಕುಶಲ, ಚಿಲ್ಲರೆ ವ್ಯಾಪಾರ ಮತ್ತು ಮನರಂಜನಾ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಹೇಳಿದರು. ಸ್ಥಳೀಯ ಸಮುದಾಯಗಳಿಗೆ ಅವಕಾಶಗಳನ್ನು ಕಲ್ಪಿಸುವಲ್ಲಿ ಹಾಗೂ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಪ್ರವಾಸೋದ್ಯಮದ ಪಾತ್ರ ಮಹತ್ವದ್ದಾಗಿದೆ ಎಂದರು.
ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಬೇಬಿ ಮೊಗ್ರಾ ಅವರು ಪ್ರವಾಸೋದ್ಯಮದಲ್ಲಿ ಕೃತಕ ಬುದ್ಧಿಮತ್ತೆಯ ಹೆಚ್ಚುತ್ತಿರುವ ಬಳಕೆಯ ಕುರಿತು ಮಾತನಾಡಿದರು. ಪ್ರವಾಸಿ ತಾಣಗಳ ಆಯ್ಕೆ, ಪ್ರವಾಸ ಯೋಜನೆ, ಬುಕಿಂಗ್, ವೈಯಕ್ತೀಕರಿಸಿದ ಸೇವೆಗಳು ಹಾಗೂ ತಾಣ ನಿರ್ವಹಣೆಯಲ್ಲಿ ಎಐ ಬಳಕೆಯ ಕುರಿತು ವಿವರಿಸಿದರು.
ವ್ಯವಹಾರ ಅಧ್ಯಯನ ನಿಕಾಯದ ಪೆÇ್ರ. ಪಾಂಡುರಂಗ ವಿ.ಪತ್ತಿ ಅವರು ಭಾರತದ ಸಾಂಸ್ಕøತಿಕ, ಐತಿಹಾಸಿಕ, ಆಧ್ಯಾತ್ಮಿಕ ಹಾಗೂ ನೈಸರ್ಗಿಕ ಪ್ರವಾಸೋದ್ಯಮ ಸಂಪನ್ಮೂಲಗಳ ಕುರಿತು ಮಾತನಾಡಿದರು.
ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ. ಜಿ. ಮಹೇಂದರ್ ಅವರು ವಿಶ್ವ ಪ್ರವಾಸೋದ್ಯಮ ದಿನದ ಮಹತ್ವ ಹಾಗೂ ಪ್ರವಾಸೋದ್ಯಮದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಿಸರ ಆಯಾಮಗಳನ್ನು ವಿವರಿಸಿದರು.
ಸಹಾಯಕ ಪ್ರಾಧ್ಯಾಪಕ ಹಾಗೂ ಕಾರ್ಯಕ್ರಮ ಸಂಯೋಜಕ ಡಾ.ನವೀನ್ ಕುಮಾರ್ ಟಿ. ಜಿ. ಅವರು 2026ರ ವಿಷಯದ ಪ್ರಸ್ತುತತೆ ಹಾಗೂ ಪ್ರವಾಸೋದ್ಯಮ ಯೋಜನೆ, ಪ್ರಚಾರ, ಸಾರಿಗೆ, ಆತಿಥ್ಯ ಮತ್ತು ತಾಣ ನಿರ್ವಹಣೆಯಲ್ಲಿ ಡಿಜಿಟಲ್ ತಂತ್ರಜ್ಞಾನ ಹಾಗೂ ಎಐ ಬಳಕೆಯ ಕುರಿತು ವಿವರಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ನಡೆದ ಚರ್ಚೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಪ್ರವಾಸಿ ತಾಣಗಳಿಗೆ ಉತ್ತಮ ಮೂಲಸೌಕರ್ಯ, ರಸ್ತೆ ಹಾಗೂ ವಾಯು ಸಂಪರ್ಕ, ಅಗತ್ಯ ಪ್ರವಾಸಿ ಸೌಲಭ್ಯಗಳು ಮತ್ತು ಪರಿಣಾಮಕಾರಿ ಪ್ರಚಾರಕ್ಕೆ ಒತ್ತು ನೀಡಲಾಯಿತು. ಅಲ್ಲದೆ, ಸರ್ಕಾರ, ಶಿಕ್ಷಣ ಸಂಸ್ಥೆಗಳು, ಪ್ರವಾಸೋದ್ಯಮ ಉದ್ಯಮಗಳು ಹಾಗೂ ಪರಂಪರೆ ಸಂರಕ್ಷಣಾ ಸಂಸ್ಥೆಗಳ ನಡುವೆ ಸಮನ್ವಯ ಹೆಚ್ಚಿಸುವ ಅಗತ್ಯವನ್ನು ಚರ್ಚಿಸಲಾಯಿತು. ಕಡಿಮೆ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಸಮಗ್ರ ಪ್ರವಾಸೋದ್ಯಮ ಮಾರ್ಗಗಳನ್ನು ರೂಪಿಸುವ ಬಗ್ಗೆಯೂ ಚರ್ಚೆ ನಡೆಯಿತು.
ಚರ್ಚೆಯಲ್ಲಿ ಸಿ.ಯು.ಕೆ.ಯ ವ್ಯವಹಾರ ಅಧ್ಯಯನದ ಸಹ ಪ್ರಾಧ್ಯಾಪಕ ಡಾ.ಗಣಪತಿ ಸಿನ್ನೂರು, ಇಂಟಾಕ್ ಕಲಬುರಗಿ ಶಾಖೆಯ ಮುಖ್ಯಸ್ಥ ಡಾ. ಶಂಭುಲಿಂಗ ಎಸ್. ವಾಣಿ, ಕಲಬುರಗಿಯ ‘ಟೇಕ್ ಎ ಟ್ರಿಪ್ ಟ್ರಾವೆಲ್ ಕಂಪನಿ’ಯ ವ್ಯವಸ್ಥಾಪಕ ನಿರ್ದೇಶಕ ಕರಬಸಪ್ಪ ಬಿಜಾಪುರೆ, ಶರಣಬಸವ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ಅಧ್ಯಯನ ವಿಭಾಗದ ಕಲ್ಯಾಣ್ ರಾವ್ ಹಾಗೂ ಕಲಬುರಗಿಯ ಏವಿಯೇಷನ್ ಇನ್‍ಸ್ಟಿಟ್ಯೂಟ್ ಆಫ್ ಕರ್ನಾಟಕದ ಶಾಖಾ ವ್ಯವಸ್ಥಾಪಕ ವಾದಿರಾಜ್ ಭಾಗವಹಿಸಿದ್ದರು.
ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗದ ಪೆÇ್ರ. ಅಂಕತಿ ರಘು ಅವರು ಚರ್ಚೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ನಟರಾಜ್ ಪಟ್ಟೇದ್ ಅವರು “ಪ್ರವಾಸೋದ್ಯಮ ಉದ್ಯಮದ ಡಿಜಿಟಲ್
ಪರಿವರ್ತನೆ: ವಿಕಸಿತ ಭಾರತ 2047ರತ್ತ ಮುಂದಿನ ಹಾದಿ” ಎಂಬ ವಿµಯದ ಕುರಿತು ಮುಖ್ಯ ಭಾಷಣ ಮಾಡಿದರು.
ಡಿಜಿಟಲ್ ನಾವೀನ್ಯತೆ, ಎಐನ ಜವಾಬ್ದಾರಿಯುತ ಬಳಕೆ, ಉತ್ತಮ ಸಂಪರ್ಕ ವ್ಯವಸ್ಥೆ, ಪ್ರವಾಸಿ ತಾಣಗಳ ಅಭಿವೃದ್ಧಿ, ಪರಂಪರೆ ಸಂರಕ್ಷಣೆ ಮತ್ತು ಬಲವಾದ ಪಾಲುದಾರಿಕೆಗೆ ಒತ್ತು ನೀಡುವ ಮೂಲಕ ಕಾರ್ಯಕ್ರಮ
ಮುಕ್ತಾಯಗೊಂಡಿತು.
ಡಾ. ಜಗದೀಶ್ ಬಿರಾದಾರ್, ಡಾ. ಗೌತಮ್ ಸೇರಿದಂತೆ ಬೋಧಕ ಸಿಬ್ಬಂದಿ ಹಾಗೂ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವು ವಂದೇ ಮಾತರಂದೊಂದಿಗೆ ಆರಂಭವಾಗಿ ರಾಷ್ಟ್ರ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.