Home ಜಿಲ್ಲೆ ಕಲಬುರಗಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರದಾನ:ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿ: ಮುಗುಳನಾಗಾಂವ ಪೂಜ್ಯರು

ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರದಾನ:ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿ: ಮುಗುಳನಾಗಾಂವ ಪೂಜ್ಯರು

ಕಲಬುರಗಿ,ಸೆ.29-ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವುದು ಬಹಳ ಮುಖ್ಯ ಎಂದು ಮುಗುಳ್ನಾಗಾವ್ ಕಟ್ಟಿಮನಿ ಸಂಸ್ಥಾನ ಹಿರೇಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಹೇಳಿದರು.
ನಗರದ ಸೇಂಟ್ ಮೇರಿ ಚರ್ಚ್ ಸಭಾಭವನದಲ್ಲಿ ಕಲಬುರ್ಗಿ ಸಾಂಸ್ಕೃತಿಕ ಪ್ರತಿಷ್ಠಾನ ಶಿಕ್ಷಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಸಂಗೀತ ಸಂಭ್ರಮ ಹಾಗೂ 11ನೇ ವರ್ಷದ ಜಿಲ್ಲಾಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಕುವೆಂಪು ಅವರು ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ತಮ್ಮ ಗುರು ವೆಂಕಣಯ್ಯ ಅವರಿಗೆ ಅರ್ಪಿಸಿದರು ಸಂತ ಕಬೀರ ದಾಸರು ತಮ್ಮ ದೋಹೆಗಳಲ್ಲಿ ಭಗವಂತನಿಗಿಂತ ಮೊದಲು ಗುರುವಿಗೆ ನಮಸ್ಕರಿಸಬೇಕು ಎಂದು ಪ್ರತಿಪಾದಿಸಿದ್ದಾರೆ .ಹೀಗಾಗಿ ಸಮಾಜದಲ್ಲಿ ಗುರುವಿಗೆ ಶಿಕ್ಷಕರಿಗೆ ಅತ್ಯುನ್ನತವಾದ ಸ್ಥಾನವಿದೆ ಎಂದು ಹೇಳಿದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಗೋಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿಕ್ಷಕ ಹುದ್ದೆ ಪವಿತ್ರವಾದದ್ದು ಶಿಕ್ಷಕರಿಂದ ಮಾತ್ರ ದೇಶ ಊರು ಉದ್ಧಾರ ಸಾದ್ಯ . ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ ಮಾತನಾಡಿ ಶಿಕ್ಷಕರಿಂದಲೇ ಶಿಕ್ಷಣ ಮತ್ತು ಸಂಸ್ಕಾರ ಪಡೆಯಲು ಸಾಧ್ಯ ಶಿಕ್ಷಕರು ದೇಶದ ದೊಡ್ಡ ಆಸ್ತಿ ಮಕ್ಕಳು ಐಎಎಸ್ ಐಪಿಎಸ್ ಆಗಬೇಕಾದರೆ ಒಳ್ಳೆಯ ಶಿಕ್ಷಣ ಅವಶ್ಯಕತೆ ಇದೆ ಆ ಶಿಕ್ಷಣ ನೀಡುವವರು ಶಿಕ್ಷಕರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೆದಾರ ಮಾತನಾಡಿ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪೆÇ್ರೀತ್ಸಾಹಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಎಸ್ ಎಸ್ ಪಾಟೀಲ್ ಮಂದರವಾಡ ಮಾತನಾಡಿ ಜ್ಞಾನ ವಿಜ್ಞಾನ ತಂತ್ರಜ್ಞಾನ ಮುಂದುವರಿದರು. ಮೂಢನಂಬಿಕೆಯನ್ನು ಮುಂದುವರಿಯುತ್ತಿದೆ ಈ ಮೂಢನಂಬಿಕೆಯನ್ನು ದೂರ ಮಾಡುವುದು ಪ್ರತಿ ಗ್ರಾಮ ಪ್ರತಿ ಮನೆ ಪ್ರತಿ ಮಗುವನ್ನು ತಲುಪಲು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಪಾಟೀಲ್ ಸೇಡಂ ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದು ಬಾನರ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಂತೋಷ್ ಗಂಗೂ ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳನ್ನು ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಸತೀಶ್ ಜಾಮಗೊಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಲಬುರ್ಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ ಎಚ್ ನೀರಗುಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತುಗಳನ್ನು ಆಡಿದರು.ಡಾ ಶರಣಬಸಪ್ಪ ವಡ್ಡನ ಕೇರಿ ನಿರೂಪಿಸಿದರು . ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ವಿಜಯಲಕ್ಷ್ಕ್ ಕೆಂಗನಾಳ, ರಾಜಶೇಖರ್ ಮಾಂಗ,ಬಾಬು ಜಾಧವ್, ಕಿರಣ್ ಪಾಟೀಲ್,ಸೂರ್ಯಕಾಂತ್ ಪೂಜಾರಿ ಅನೇಕರು ಕನ್ನಡ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಶಿವಾನಂದ್ ಖಜೂರಿ ಶಂಬಣ್ಣ ಹೂಗಾರ್ ಡಾ. ಆನಂದ್ ಸಿದ್ಮಣಿ ರಮೇಶ್ ಬಡಿಗೇರ್ ,ಸಿದ್ದಣ್ಣ ಹೂಗಾರ್, ರೇವಣಸಿದ್ದಪ್ಪ ದುಕಾನ್, ಸಿದ್ದರಾಮ ಬೇತಾಳೆ, ಶಿವಶರಣಪ್ಪ ಉದನೂರ, ಉದಯ್ ಕುಮಾರ್ ,ಪೆÇ್ರಯಶ್ವಂತ ಅಷ್ಟಗಿ,ಸಂಗಮೇಶ ಬಿರಾದಾರ, ಶಿವರಾಜ ಕಾಳಗಿ, ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
………….
ಶಿಕ್ಷಕರು ಕ್ರಿಯಾತ್ಮಕವಾಗಿದ್ದರೆ ಮಾತ್ರ ಮಕ್ಕಳನ್ನು ಆಕರ್ಷಿಸಲು ಸಾಧ್ಯ ಕ್ರಿಯಾಶೀಲವಾಗಿ ಕ್ರಿಯಾತ್ಮಕವಾಗಿ ಬೋಧನೆ ಮಾಡಿದರೆ ದೇಶ ಉತ್ತುಂಗ ಸ್ಥಾನಕ್ಕೆ ಹೋಗುತ್ತದೆ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ
-ಜೋಸೆಫ್ ಪ್ರವೀಣ, ಸೇಂಟ್ ಮೇರಿ ಚರ್ಚ್ ಪ್ರಧಾನಾಯದ ಗುರು
……………..
ಜಿಲ್ಲೆಯ ಕ್ರೀಯಾಶೀಲಶಿಕ್ಷಕರಿಗೆ ಗೌರವ ಮನ್ನಣೆ ಸಿಗಲಿ ಎನ್ನುವ ಉದ್ದೇಶದಿಂದ ಪ್ರಾಥಮಿಕ ,ಪ್ರೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜಿನ ಸರ್ಕಾರಿ, ಅನುದಾನಿತ ,ಅನುದಾನ ರಹಿತ 106 ಶಿಕ್ಷಕರಿಗೆ 2026ನೇ ಸಾಲಿನ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
-ಬಿ.ಎಚ್.ನಿರಗುಡಿ, ಅಧ್ಯಕ್ಷರು, ಕಲಬುರ್ಗಿ ಸಾಂಸ್ಕøತಿಕ ಪ್ರತಿಷ್ಠಾನ ಕಲಬುರ್ಗಿ