Home ಜಿಲ್ಲೆ ಕಲಬುರಗಿ ಪತ್ನಿ ಕತ್ತು ಹಿಸುಕಿ ಕೊಂದ ಪತಿ

ಪತ್ನಿ ಕತ್ತು ಹಿಸುಕಿ ಕೊಂದ ಪತಿ

ಕಲಬುರಗಿ.ಸೆ.29- ನಗರದ ಹೊರವಲಯದ ಶರಣಶಿರಸಗಿ ಬಳಿ ಪತಿಯೇ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ರೇಣುಕಾ ಶಿಂಧೆ (38) ಎಂದು ಗುರುತಿಸಲಾಗಿದೆ.ಆಕೆಯ ಪತಿ ಸಂಜಯ್ ಕುಮಾರ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಪತ್ನಿಯ ಮೇಲೆ ಅಕ್ರಮ ಸಂಬಂಧದ ಅನುಮಾನ ಹೊಂದಿದ್ದ ಸಂಜಯ್ ಕುಮಾರ್, ಇದೇ ವಿಚಾರವಾಗಿ ಮನೆಯಲ್ಲಿ ಪದೇಪದೇ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ನಿನ್ನೆ ಸಂಜೆ ದಂಪತಿ ನಡುವೆ ಜಗಳ ನಡೆದಿದ್ದು, ಬಳಿಕ ಸಂಜಯ್ ಕುಮಾರ್ ರೇಣುಕಾ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಅಶೋಕ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿಯ ಪತ್ತೆಗೆ ಪೆÇಲೀಸರು ಕ್ರಮ ಕೈಗೊಂಡಿದ್ದಾರೆ.