
ಬೀದರ್: ಐತಿಹಾಸಿಕ ಹಿನ್ನೆಲೆಯುಳ್ಳ ಬೀದರ್ ನಗರದ ಪುರಾತನ ಶ್ರೀ ಪಾಂಡುರAಗ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಆಷಾಢ ಸಪ್ತಾಹ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿAದ ನಡೆಯುತ್ತಿವೆ. ಜುಲೈ ೨೩ರಂದು ಆರಂಭಗೊAಡಿರುವ ಸಪ್ತಾಹವು ಜುಲೈ ೩೦ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.
ಜುಲೈ ೩೦ರಂದು ಮಧ್ಯಾಹ್ನ ೧ ಗಂಟೆಗೆ ಶ್ರೀ ಪಾಂಡುರAಗನ ಪಲ್ಲಕ್ಕಿ ಉತ್ಸವ ದೇವಸ್ಥಾನದಿಂದ ಆರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ. ಸಂಜೆ ೬ ಗಂಟೆಗೆ ದಾಮಾಜಿ ಪಂಥ ಅಗಸಿ (ಶಹಾಗಂಜ) ದ್ವಾರದಲ್ಲಿ ಪಾಂಡುರAಗನ ಮೊಸರಿನ ಗಡಗಿ (ದಹಿ ಹಂಡಿ) ಒಡೆಯುವ ಕಾರ್ಯಕ್ರಮ ನಡೆಯಲಿದೆ. ಬಳಿಕ ಮುಖ್ಯ ರಸ್ತೆ, ವಿನಾಯಕ ಚೌಕ ಹಾಗೂ ಚೌಬಾರಾ ದೇವಸ್ಥಾನದ ಮುಖ್ಯದ್ವಾರದಲ್ಲಿಯೂ ದಹಿ ಹಂಡಿ ಕಾರ್ಯಕ್ರಮವನ್ನು ನೆರವೇರಿಸಲಾಗುವುದು.
ಪಲ್ಲಕ್ಕಿ ಮೆರವಣಿಗೆಯಲ್ಲಿ ಪಾಂಡುರAಗ ಮಂದಿರ ಭಜನಾ ಮಂಡಳಿ, ನಿರಂಜನ ಸ್ವಾಮಿ ಮಠ ಭಜನಾ ಮಂಡಳಿ, ಸಾಯಿಬಾಬಾ ಭಜನಾ ಮಂಡಳಿ, ಶ್ರೀ ಜಗದೇಶ್ವರಿ ಮಾತಾ ಭಜನಾ ಮಂಡಳಿ, ಮಡಿವಾಳೇಶ್ವರ ಭಜನಾ ಮಂಡಳಿ, ಮರಖಲ್ ಭಜನಾ ಮಂಡಳಿ ಹಾಗೂ ಹಳ್ಳದಕೇರಿ ಭವಾನಿ ಭಜನಾ ಮಂಡಳಿ ಸೇರಿದಂತೆ ವಿವಿಧ ಭಜನಾ ತಂಡಗಳು ಭಾಗವಹಿಸಲಿವೆ.
ಕಾರ್ಯಕ್ರಮಕ್ಕೆ ರಾಮಲು ಗಾದಗಿ, ರಾಜೇಂದ್ರಸಿAಗ್ ಪವಾರ, ಬಸವರಾಜ ಶೀಲವಂತ (ಚಿಟಗುಪ್ಪಾ), ಜಗನ್ನಾಥರಾವ್ ಜಿ. ಮಾನಕೇರಿ ಹಾಗೂ ರಾಜಕುಮಾರ ವಿಶ್ವಕರ್ಮ ನೇತೃತ್ವ ವಹಿಸಿ ಮಾರ್ಗದರ್ಶನ ನೀಡಲಿದ್ದಾರೆ.
ಭಕ್ತರ ಅನುಕೂಲಕ್ಕಾಗಿ ಸರ್ಕಾರಿ ಬಾಲಕ-ಬಾಲಕಿಯರ ಶಾಲೆಯ ಮೈದಾನದಲ್ಲಿ ಮಧ್ಯಾಹ್ನ ೩ರಿಂದ ೫ ಗಂಟೆಯವರೆಗೆ ಪ್ರಸಾದ ವಿತರಣೆ ಮಾಡಲಾಗುವುದು. ರಾತ್ರಿ ದೇವಸ್ಥಾನದಲ್ಲಿ ಮಹಾಪ್ರಸಾದದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ಪಾಂಡುರAಗನ ಕೃಪೆಗೆ ಪಾತ್ರರಾಗಬೇಕೆಂದು ಆರ್ಯ ವೈಶ್ಯ ಸಂಘ ಹಾಗೂ ಶ್ರೀ ಪಾಂಡುರAಗ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಚಂದ್ರಶೇಖರ ಗಾದಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.




























