
ಗುರುಮಠಕಲ್ :ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ, ಧನಗಳ ಸಂತೆಯಲ್ಲಿ ಆಡು ಕುರಿ ಮಾರಾಟ ಪ್ರಾರಂಭದಿನದAದು ರೈತರು ಫುಲ್ ಖುಷಯಲ್ಲಿದ್ದಾರೆ, ಇದೇ ಸಂದರ್ಬದಲ್ಲಿ ರೈತರಿಗೆ ಅದ್ಧೂರಿ ಸನ್ಮಾನಿಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ತಿಳಿಸಿದ್ದಾರೆ. ಧನ ಸಂತೆಯಲ್ಲೇ ಇಂದು ದಿನಾಂಕ ೨೭-೦೭-೨೦೨೬ ರಂದು ಆಡು ಕುರಿ ಮಾರಾಟದ ಬಗ್ಗೆ ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ನಾಳ್ ಅವರು ಧ್ವನಿವರ್ಧಕ ಕರಪತ್ರ ಹಮಚುವ ಮೂಲಕ ಎಲ್ಲಾ ಕಡೆ ಸಂಚಾರ ಮಾಡುವುದರ ಜೊತೆ ಕುರಿ ಆಡು ಸಾಕಿದ ಗ್ರಾಮೀಣ ಭಾಗದ ರೈತರ ಗ್ರಾಮಗಳಿಗೆ ಬೇಟಿ ನೀಡಿ ಕರಪತ್ರ ಹಂಚಿ ಜಾಗೃತಿಗೊಳಿಸಲಾಗಿತ್ತು. ಕುರಿ ಆಡು ಮಾರಾಟಕ್ಕೆ ಬಂದ ರೈತರಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ನಾಳ್ ಅವರು ಅದ್ದೂರಿ ಸನ್ಮಾನಿಸಿ ಮಾತನಾಡಿದ ಅವರು, ಧನಗಳ ಸಂತೆಯಲ್ಲಿ ಈ ಭಾಗದಿಂದ ಕುರಿ ಆಡು ಮಾರಾಟ ಮಾಡಲು ರೈತರು ಬಹಳಷ್ಟು ಜನ ಮೊದಲನೇ ಸಂತೆಯಲ್ಲಿ ಬಂದಿರುವದರಿAದ ಬಹಳ ಸಂತೋಷವಾಗುತ್ತದೆ ಎಂದು ತಿಳಿಸಿದರು. ಇದಲ್ಲದೆ ದೂರದ ಸಂತೆಗೆ ಹೋಗಲು ಸಮಯ ಮತ್ತು ಸಾರಿಗೆ ವೆಚ್ಚ ಬಡ ರೈತರ ಮೇಲೆ ಹೊರೆಯಾಗುತ್ತಿತ್ತು, ಅದನ್ನು ಮನಗಂಡು ಆಡು ಕುರಿ ಮಾರಾಟ ಮಾಡಲು ನಿರಂತರ ಹೋರಾಟಮಾಡಿ ಬಡ ರೈತರಿಗೆ ನ್ಯಾಯ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಅದರ ಫಲವಾಗಿ ಗಡಿಭಾಗದಲ್ಲಿರುವ ಗುರುಮಠಕಲ್‌ನಲ್ಲಿ ಧನಗಳ ಸಂತೆ ಜೊತೆ ಕುರಿ ಆಡು ಮಾರಾಟ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು. ಗುರುಮಠಕಲ್ ನಗರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಪ್ರತಿ ಸೋಮವಾರ ನಡೆಯುವ ಧನಗಳ ಸಂತೆ ಜೊತೆಗೆ ಕುರಿ ಆಡು ಮಾರಾಟ ಮಾಡಲು ಅನುಕೂಲ ಮಾಡಿಕೊಟ್ಟದಕ್ಕೆ ಉಪ-ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಗೆ ಉಮೇಶ ಕೆ. ಮುದ್ನಾಳ ಅವರು ದನ್ಯವಾದ ತಿಳಿಸಿದ್ದಾರೆ.
ಇದೇ ಸಂದರ್ಬದಲ್ಲಿ ವಿನೋದಕುಮಾರ, ಭೀಮಾಶಂಕರ. ಮಲ್ಲೇಶಿ., ಪವನ, ರವಿಕುಮಾರ, ಶರಣಪ್ಪ, ಬಗ್ಗಪ್ಪ, ಸಾಬಣ್ಣ, ಹಣಮಂತ, ಮಹೇಶ, ಹುಸೇನಪ್ಪ ಬಾಗಪ್ಪ, ಬುಗ್ಗಪ್ಪ ದೇವಪ್ಪ ನರಸಪ್ಪ, ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
ಆಡು ಕುರಿ ಸಂತೆ ಪ್ರಾರಂಭ ದಿನದಂದೇ ಕೋಳಿ ಮಾರಾಟಕ್ಕೆ ಬಂದ ರೈತರನ್ನು ಕಂಡು ಬಹಳ ಸಂತೋಷ ವಾಯಿತು. ಇನ್ನು ಮುಂದೇ ಪ್ರತಿ ಸೋಮವಾರ ಧನಗಳ ಸಂತೆಯಲ್ಲಿ ಕುರಿ ಆಡು ಮಾರಾಟ ಜೊತೆಗೆ ರೈತರು ಕೋಳಿ ಕೂಡ ಮಾರಾಟ ಮಾಡಬಹುವುದೆಂದು ತಿಳಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್































