
ಚಡಚಣ,ಆ.9-ತಾಲೂಕಿನ ಕಟಬು ಕಟಬರ ಕ್ಷತ್ರಿಯ ಜನಾಂಗದವರು ಆಷಾಡ ಮಾಸದಲ್ಲಿ ದುರ್ಗಾದೇವಿ (ಮರಗಮ್ಮ ತಾಯಿ )ಜಾತ್ರಾ ಮಹೋತ್ಸವವು ಅತ್ಯಂತ ಭಕ್ತಿ ಮತ್ತು ಸಂಭ್ರಮದಿಂದ ಮಾಡುತ್ತಾರೆ. ಚಡಚಣ ತಾಲೂಕು ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಆಷಾಡ ಮಾಸದಲ್ಲಿ ಶುಕ್ರವಾರದಿವಸ ಮತ್ತು ವಿಶೇಷ ದಿನಗಳಂದು ದೇವಿಗೆ ಪೂಜೆ, ಹರಕೆ ಹಾಗೂ ಮಹಾ ಮಂಗಳಾರತಿ ನಡೆಯುತ್ತವೆ. ಆಷಾಡ ಮಾಸದಲ್ಲಿ ದುರ್ಗಾ ದೇವಿಗೆ (ಮರಗಮ್ಮ ತಾಯಿ )ವಿಶೇಷ ಅಲಂಕಾರ ಹಾಗೂ ಕುಂಕುಮಾರ್ಚನೆ ನಡೆಯುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಪೆÇೀತ್ರಜ ಕುಣಿತ, ಹಲಗೆನಾದದೊಂದಿಗೆ ಬೃಹತ್À ಮೆರವಣಿಗೆ ಮಾಡಿಕೊಂಡು ದೇವಿಗೆ ಪೂಜೆ ಸಲ್ಲಿಸುತ್ತಾರೆ. ಈ ಜಾತ್ರೆಗೆ ತಮ್ಮ ಬಂದು ಬಳಗದವರನ್ನು ಕರೆಸಿ ವಿಶೇಷ ಪೂಜೆ ಕೂಡ ಸಲ್ಲಿಸುತ್ತಾರೆ ಮತ್ತು ಪ್ರತಿವರ್ಷ ಒಳ್ಳೆ ಮಳೆ ಬೆಳೆ ಆಗಬೇಕೆಂದು ಈ ಜಾತ್ರೆ ನಿಮಿತ್ತ ಅದ್ದೂರಿಯಾಗಿ ಮೆರವಣಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಕಟಬ ಕಟಬರ ಕ್ಷತ್ರಿಯ ಕುಲದ ಜನಾಂಗದ ಹಿರಿಯರಾದ ಅಣ್ಣಪ್ಪ ಶಿಂಧೆ, ನಾಗಪ್ಪ ಶಿಂಧೆ ಮತ್ತು ಹನುಮಂತ ಕ್ಷತ್ರಿಯ
ಪ್ರಮುಖ ಮುಖಂಡರಾದ ಭೀಮಾಶಂಕರ್ ಶಿಂಧೆ, ಕ್ಷತ್ರಿಯ ತಾಲೂಕ ಅಧ್ಯಕ್ಷರಾದ ದತ್ತು ಶಿಂಧೆ, ಪತ್ರಕರ್ತರಾದ ಲಕ್ಷ್ಮಣ ಶಿಂದೆ ಮತ್ತು ಉಮಾಶಂಕರ್ ಕ್ಷತ್ರಿಯ ಯುವಕರ ಮುಖಂಡರಾದ ರವಿ ಶಿಂಧೆ,
ದಶರಥ ಶಿಂಧೆ, ಸುಭಾಷ್ ಶಿಂಧೆ, ಪ.ಪಂ.ಮಾಜಿ ಸದಸ್ಯರಾದ ಕುಬೇರ್ ಶಿಂದೆ ಚಿದಾನಂದ ಶಿಂದೆ ದಿಗಂಬರ್ ಶಿಂದೆ ಕಲ್ಲಪ್ಪ ಶಿಂದೆ ಅಂಬಾದಾಸ್ ಶಿಂಧೆ ಕಾಳಿದಾಸ ಶಿಂದೆ ಅನಿಲ್ ಶಿಂದೆ ಅಜಯ್ ಶಿಂಧೆ ಹಾಗೂ ಗ್ರಾಮದ ಜನರು ಉಪಸ್ಥಿತರಿದ್ದರು.































