Home ಜಿಲ್ಲೆ ಕಲಬುರಗಿ ಸುಧಾರಿತ ಇಇಜಿ ಸಂಶೋಧನೆಗೆ ಜಾಗತಿಕ, ಬಹುಶಿಸ್ತೀಯಸಹಯೋಗದ ಅಗತ್ಯ: ಬಟ್ಟು ಸತ್ಯನಾರಾಯಣ

ಸುಧಾರಿತ ಇಇಜಿ ಸಂಶೋಧನೆಗೆ ಜಾಗತಿಕ, ಬಹುಶಿಸ್ತೀಯಸಹಯೋಗದ ಅಗತ್ಯ: ಬಟ್ಟು ಸತ್ಯನಾರಾಯಣ

ಕಲಬುರಗಿ,ಸೆ.28:ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಸಾಮಾಜಿಕ ಮತ್ತು ವರ್ತನೆಯ ವಿಜ್ಞಾನ ಶಾಲೆಯ ಮನೋವಿಜ್ಞಾನ ವಿಭಾಗವು ಇತ್ತೀಚೆಗೆ ಮೂರು ದಿನಗಳಇಇಜಿ ಬಯೋಫೀಡ್‍ಬ್ಯಾಕ್ ಕಾರ್ಯಾಗಾರವನ್ನುಆಯೋಜಿಸಿತು.ಮೆದುಳಿನ ವಿದ್ಯುತ್ ತರಂಗಗಳ ದಾಖಲಾತಿ ವಿಧಾನವಾದ ಎಲೆಕ್ಟ್ರೋಎನ್ಸೆಫಲೋಗ್ರಫಿ (ಇಇಜಿ)ಹಾಗೂ ಸಂಬಂಧಿತ ಮನೋಶಾರೀರಿಕ ವಿಧಾನಗಳ ಕುರಿತು ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಿಯುಕೆ ಕುಲಪತಿಪೆÇ್ರ. ಬಟ್ಟು ಸತ್ಯನಾರಾಯಣಅವರು, ಇಇಜಿ ಹಾಗೂ ಸುಧಾರಿತ ತಂತ್ರಜ್ಞಾನಗಳ ಬಳಕೆಯೊಂದಿಗೆ ಬಹುಶಿಸ್ತೀಯ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಪ್ರತಿಪಾದಿಸಿದರು. ವಿವಿಧ ಶಿಸ್ತುಗಳಲ್ಲಿ ಹೊಸ ಸಂಶೋಧನಾ ಸಾಧ್ಯತೆಗಳನ್ನು ಅನ್ವೇಷಿಸಲು ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗವನ್ನು ಬಲಪಡಿಸಲು ವಿಭಾಗದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಅವರು ಸಂಶೋಧಕರಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕುಲಪತಿಗಳುಬಯೋಫೀಡ್‍ಬ್ಯಾಕ್ ಮತ್ತು ಅರಿವಿನ ನರಮನೋವಿಜ್ಞಾನ ಪ್ರಯೋಗಾಲಯದ ವೆಬ್‍ಸೈಟ್‍ಗೆ ಚಾಲನೆ ನೀಡಿದರು.ಪ್ರಯೋಗಾಲಯದ ಸೌಲಭ್ಯಗಳು, ಸಂಶೋಧನಾ ಚಟುವಟಿಕೆಗಳು ಹಾಗೂ ಶೈಕ್ಷಣಿಕ ಉಪಕ್ರಮಗಳ ಸಮಗ್ರ ಮಾಹಿತಿಯನ್ನು ವೆಬ್‍ಸೈಟ್ ಒಳಗೊಂಡಿದೆ. ಭಾರತ ಸೇರಿದಂತೆ ವಿಶ್ವದ ವಿವಿಧ ಭಾಗಗಳ ಸಂಶೋಧಕರು ಮತ್ತು ಸಂಸ್ಥೆಗಳು ವಿಭಾಗದೊಂದಿಗೆ ಸಂಪರ್ಕ ಸಾಧಿಸಲು ಹಾಗೂ ಸಂಶೋಧನಾ ಸಹಯೋಗದ ಅವಕಾಶಗಳನ್ನು ಅನ್ವೇಷಿಸಲು ಈ ವೆಬ್‍ಸೈಟ್ ವೇದಿಕೆಯಾಗಲಿದೆ.
ಏರೋಬ್ ಪ್ರೈವೇಟ್ ಲಿಮಿಟೆಡ್‍ನ ಸಹಾಯಕ ತಾಂತ್ರಿಕ ಬೆಂಬಲ ವ್ಯವಸ್ಥಾಪಕಶ್ರೀ ರಾಹುಲ್ ಗುಪ್ತಾಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಎಲೆಕ್ಟ್ರೋಡ್ ಅಳವಡಿಕೆ, ಇಇಜಿ ಸಿಗ್ನಲ್‍ಗಳ ದಾಖಲಾತಿ, ದತ್ತಾಂಶ ಸಂಗ್ರಹಣೆ ಹಾಗೂ ಆರ್ಟಿಫ್ಯಾಕ್ಟ್‍ಗಳ ಗುರುತಿಸುವಿಕೆ ಸೇರಿದಂತೆ ವಿವಿಧ ಪ್ರಾಯೋಗಿಕ ವಿಧಾನಗಳ ಕುರಿತು ತರಬೇತಿ ನೀಡಿದರು. ಅಲ್ಲದೆ, ಗಾಲ್ವನಿಕ್ ಸ್ಕಿನ್ ರೆಸ್ಪಾನ್ಸ್ (ಜಿಎಸ್‍ಆರ್), ಹೃದಯ ಬಡಿತದ ವ್ಯತ್ಯಾಸ (ಎಚ್‍ಆರ್‍ವಿ) ಮತ್ತು ಎಲೆಕ್ಟ್ರೋಮ್ಯೋಗ್ರಫಿ (ಇಎಂಜಿ)ಸೇರಿದಂತೆ ವಿವಿಧ ಶಾರೀರಿಕ ಮಾಪನ ವಿಧಾನಗಳ ಕುರಿತು ಭಾಗವಹಿಸಿದವರಿಗೆ ಮಾಹಿತಿ ನೀಡಿದರು.
ಸ್ವಾಗತ ಭಾಷಣ ಮಾಡಿದ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಪೆÇ್ರ. ವಿಜಯೇಂದ್ರ ಪಾಂಡೆ ಅವರು, ಪ್ರಾಯೋಗಿಕ ಹಾಗೂ ಸಂಶೋಧನಾ ಆಧಾರಿತ ತರಬೇತಿಯನ್ನು ಬಲಪಡಿಸಲು ವಿಭಾಗ ಕೈಗೊಂಡಿರುವ ವಿವಿಧ ಉಪಕ್ರಮಗಳ ಕುರಿತು ವಿವರಿಸಿದರು. ಸಾಮಾಜಿಕ ಮತ್ತು ವರ್ತನೆಯ ವಿಜ್ಞಾನ ಶಾಲೆಯ ಡೀನ್ಪ್ರೊ. ಪವಿತ್ರಾ ಆರ್. ಆಲೂರ ಅವರು ಯುವ ಸಂಶೋಧಕರ ಕೌಶಲ್ಯ ಮತ್ತು ಸಂಶೋಧನಾ ಸಾಮಥ್ರ್ಯ ವೃದ್ಧಿಯಲ್ಲಿ ಪ್ರಾಯೋಗಿಕ ಕಲಿಕೆಯ ಮಹತ್ವವನ್ನು ಒತ್ತಿ ಹೇಳಿದರು.
ಸಹಾಯಕ ಪ್ರಾಧ್ಯಾಪಕಿ ಹಾಗೂ ಕಾರ್ಯಕ್ರಮ ಸಂಯೋಜಕಿಡಾ. ಆಸ್ತಾಅವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವುರಾಷ್ಟ್ರಗೀತೆಯೊಂದಿಗೆ ಆರಂಭಗೊಂಡು, ರಾಷ್ಟ್ರಗಾನದೊಂದಿಗೆ ಮುಕ್ತಾಯವಾಯಿತು.