
ತಾಳಿಕೋಟೆ:ಜೂ.೧೭: ಪಟ್ಟಣದ ಶ್ರೀ ಎಸ್.ಎಸ್.ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಎಲ್ಲಾ ಅಂಗ ಶಾಲಾ ಕಾಲೇಜುಗಳ ೨೦೨೬-೨೦೨೭ ರಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಮಂಗವಾರರAದು ಸ್ವಾಗತಿಸಿ ವಿದ್ಯಾರ್ಥಿಗಳಿಗೆ ಪುಷ್ಪಗುಚ್ಚ ನೀಡಿ ಸ್ವಾಗತಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಚ್.ಎಸ್.ಪಾಟೀಲ ಅವರ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳುವದರೊಂದಿಗೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ, ಸಮವಸ್ತç, ಪಠ್ಯ ಪುಸ್ತಕ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್.ಪಾಟೀಲ ಅವರು ಮಾತನಾಡಿ ಶಾಲೆ ಎಂದರೆ ಕುಟುಂಭದ ಸಾಗರವಿದ್ದಂತೆ ಇಲ್ಲಿ ಎಲ್ಲರೂ ಒಂದೇ ಕುಟುಂಭದವರಿದ್ದAತೆ ಮಕ್ಕಳ ಜ್ಞಾನಾರ್ಜನೆಯ ಜೊತೆಗೆ ಕೌಶಲ್ಯ ವೃದ್ದಿಸುವ ಅನೇಕ ಚಟುವಟಿಕೆಗಳ ನಡೆಯುತ್ತಿರುವದು ಸಂತಸದ ಸಂಗತಿಯಾಗಿ ಕ್ರೀಡೆಯಲ್ಲಿಯೂ ರಾಷ್ಟçಮಟ್ಟದ ವರೆಗೆ ಸಾಧನೆ ಮಾಡಿರುವ ಈ ಸಂಸ್ಥೆಯ ಹೆಗ್ಗಳಿಕೆ ಇನ್ನಷ್ಟು ಹೆಚ್ಚಿಸುವದರೊಂದಿಗೆ ಮುಂದೆ ಸಾಗಿರಿ ಎಂದರು.
ಅತಿಥಿಗಳಾಗಿ ಪ ಪೂ ಕಾಲೇಜಿನ ಆಂಗ್ಲ ಭಾಷೆಯ ಉಪನ್ಯಾಸಕರಾದ ಪರಶುರಾಮ ಚೌಡಕರ, ಸಂಸ್ಥೆಯ ಕಾರ್ಯದರ್ಶಿಗಳಾದ ಸಚಿನ.ಎಚ್.ಪಾಟೀಲ, ಎಸ್.ಎಸ್.ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕ ಎಸ್.ಸಿ.ಗುಡಗುಂಟಿ ಸ್ವಾಗತಿಸಿದರು, ಶಿಕ್ಷಕರಾದ ಎಸ್.ವಿ ಜಾಮಗೊಂಡಿ ನಿರೂಪಿಸಿದರು. ಶಿಕ್ಷಕ ಬಿ.ಆಯ್.ಹಿರೇಹೊಳಿ ವಂದಿಸಿದರು.



























