Home ಜಿಲ್ಲೆ ಬೆಂಗಳೂರು ಸಹಕಾರ ಸಂಸ್ಥೆಗಳಿಂದ ಬಡ, ಮದ್ಯಮ ವರ್ಗಕ್ಕೆ ಆರ್ಥಿಕ ಸಬಲತೆ

ಸಹಕಾರ ಸಂಸ್ಥೆಗಳಿಂದ ಬಡ, ಮದ್ಯಮ ವರ್ಗಕ್ಕೆ ಆರ್ಥಿಕ ಸಬಲತೆ

ಬೆಂಗಳೂರು,ಜು೫:ಸಹಕಾರ ಸಂಸ್ಥೆಗಳು, ಸಹಕಾರ ಬ್ಯಾಂಕ್, ಸೊಸೈಟಿಗಳಿಂದ ಬಡ, ಮಧ್ಯಮ ವರ್ಗದ ಜನರ ಆರ್ಥಿಕ ಸಬಲತೆ ಬೆಳವಣಿಗೆಯಾಗಲು ಸಾಧ್ಯವಾಗಿದೆ ಎಂದು ಹಿರಿಯ ಸಹಕಾರಿ ದುರೀಣ, ಸಾಮಾಜಿಕ ಕಾರ್ಯಕರ್ತ ಕೆ.ಎಂ.ನಾಗರಾಜು ಅವರು ಅಭಿಪ್ರಾಯ ಪಟ್ಟರು.


ಜಯನಗರದಲ್ಲಿ ದಿ ಜಯನಗರ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್‌ನ., ಅಮೃತ ಮಹೋತ್ಸವ ಭವನದ ರೂ.೩.೦೫ಕೋಟಿ ವೆಚ್ಚದ ನೂತನ ಕಟ್ಟಡ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ರಾಷ್ಟ್ರೀಯ ಬ್ಯಾಂಕ್‌ಗಳು ಜನಸಾಮಾನ್ಯರು ಬಡ-ಮಧ್ಯಮವರ್ಗದವರಿಗೆ ಸಾಲ ನೀಡುವಲ್ಲಿ ಮುಂದಾಗುತ್ತಿರಲಿಲ್ಲ. ಇಡೀ ದೇಶದಲ್ಲಿ ಸಹಕಾರಿಗಳು, ಸೊಸೈಟಿ, ಸಹಕಾರ ಬ್ಯಾಂಕ್, ಸಹಕಾರ ಸಂಘಗಳು ಸ್ಥಾಪನೆಗೊಂಡ ನಂತರ ಸ್ವಯಂಉದ್ಯೋಗ, ನಿವೇಶನ, ವಸತಿ, ಶಿಕ್ಷಣ, ವ್ಯಾಪಾರಕ್ಕಾಗಿ ಅನೇಕ ರೀತಿಯಲ್ಲಿ ಸಹಕಾರ ನೀಡುವ ಮೂಲಕ ರಾಷ್ಟ್ರದ ಪ್ರಗತಿಯಲ್ಲಿ ಮಹತ್ವದ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.


ದಿ ಜಯನಗರ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್., ಅಧ್ಯಕ್ಷ ಬಿ.ಆರ್.ವಾಸುದೇವ್ ಅಧ್ಯಕ್ಷತೆ ವಹಿಸಿ ಸಮಾಜಕ್ಕಾಗಿ ಸಂಘ ಸಂಸ್ಥೆಗಳ ಪಾತ್ರ ಮಹತ್ವದ ಕೆಲಸ ಮಾಡುತ್ತಿವೆ. ನಮ್ಮ ಸೊಸೈಟಿ ಕಡಿಮೆ ದರದ ನಿವೇಶನ ನಿರ್ಮಿಸಿ ಮಾರಾಟ ಮಾಡುತ್ತಿದ್ದು, ಸ್ವಯಂ ಉದ್ಯೋಗಕ್ಕೂ ಅವಕಾಶ ಕಲ್ಪಿಸುತ್ತಿದೆ ಎಂದರು.


ಸಂಸ್ಥೆಯ ಕಾರ್ಯದರ್ಶಿ ಎಂ.ಶಿವಣ್ಣ ಮಾತನಾಡಿ ಗುಬ್ಬಲಾಳ, ವಾಸುದೇವನಗರ, ಜಯನಗರ, ಪದ್ಮನಾಭನಗರದಲ್ಲಿ ಸೊಸೈಟಿ ವತಿಯಿಂದ ಸಹಕಾರಿ ವಿದ್ಯಾಸಂಸ್ಥೆ ಆರಂಭಿಸಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.


ನಿರ್ದೇಶಕರಾದ ಎಂ.ಪಿ.ಜಯರಾಮು, ಎನ್.ರಮೇಶ್, ಎಲ್.ಸುಬ್ರಮಣ್ಯ, ಎಂ.ಸಾವಿತ್ರಿ ಎಂ.ಪಿ.ಗಾಯತ್ರಿದೇವಿ, ಕೆ.ವರದಪ್ಪ, ವಿ.ವಿಶ್ವನಾಥ್, ಬಿ.ಬೋರಯ್ಯ, ಪಿ.ಸುರೇಶ್, ಕೆ.ಎನ್.ಚಂದ್ರಶೇಖರ್, ಕೆ.ಎಂ.ಕೇಶವ ಹಿರಿಯ ಸಹಕಾರಿಗಳಾದ ಶಿವಲಿಂಗೇಗೌಡ, ಮರಿಮಲ್ಲಯ್ಯ, ಜಯನಗರದಲ್ಲಿ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಯ ಅಮೃತ ಮಹೋತ್ಸವ ಭವನದ ಕಟ್ಟಡ ಕಾಮಗಾರಿಗೆ ಹಿರಿಯ ಸಹಕಾರಿ ದುರೀಣ ಕೆ.ಎಂ.ನಾಗರಾಜ್ ಮತ್ತು ಬ್ಯಾಂಕ್ ಅಧ್ಯಕ್ಷ ಬಿ.ಆರ್.ವಾಸುದೇವ್ ಅವರು ಪೂಜೆ ಸಲ್ಲಿಸುವ ಮೂಲಕ ಭೂಮಿ ಪೂಜೆ ಸಲ್ಲಿಸಿದರು. ಸೊಸೈಟಿಯ ನಿರ್ದೇಶಕರುಗಳು ಇದ್ದರು.