Home ಜಿಲ್ಲೆ ಏನುಮುರೇಷನ್ ಫಾರ್ಮ ಎಲ್ಲರೂ ಭರ್ತಿ ಮಾಡಿಕೊಡಿ: ಭಗವಂತ ಖೂಬಾ

ಏನುಮುರೇಷನ್ ಫಾರ್ಮ ಎಲ್ಲರೂ ಭರ್ತಿ ಮಾಡಿಕೊಡಿ: ಭಗವಂತ ಖೂಬಾ

ಬೀದರ: ರಾಜ್ಯಾದ್ಯಂತ ಭಾರತೀಯ ಜನತಾ ಪಕ್ಷದಿಂದ ಹಮ್ಮಿಕೊಂಡಿರುವ ಎಸ್.ಐ.ಆರ್ ಮನೆ – ಮನೆ ಸಂಪರ್ಕ ಅಭಿಯಾನದ ಭಾಗವಾಗಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ನಗರದ ವಾರ್ಡ ಸಂಖ್ಯೆ 18ರ ಬೂತ್ ನಂ. 155 ನಂದಿ ಕಾಲೋನಿಯ ಮನೆ ಮನೆಗೆ ತೆರಳಿ ಮತದಾರರಿಗೆ ಜಾಗೃತಿ ಮೂಡಿಸಿ, ಅಭಿಯಾನದಲ್ಲಿ ಪಾಲ್ಗೊಂಡರು. ಹಾಗೂ ಕೆಲವು ಕುಟುಂಬಗಳಲ್ಲಿ ಅನುಕೂಲವಿಲ್ಲದೆ ಇರುವ ಕಡೆ ಖೂಬಾ ಅವರು ಸ್ವತಃ ಮತದಾರರ ಏನುಮುರೇಷನ್ ಫಾರ್ಮ ಭರ್ತಿ ಮಾಡಿಕೊಟ್ಟರು ಹಾಗೆ ಇದನ್ನು ಕೂಡಲೆ ಸರ್ಕಾರಿ ಬಿ.ಎಲ್.ಓಗಳಿಗೆ ತಲುಪಿಸಿ, ಡಿಜಿಟಜೈಷನ್ ಮಾಡಿಕೊಳ್ಳುವಂತೆ ತಿಳಿಸಿದರು.

ಮತದಾರರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈಗಾಗಲೆ ಜನರು ಫಾರಂಗಳು ಭರ್ತಿ ಮಾಡಿ ಕೊಟ್ಟಿರುವುದಾಗಿ ತಿಳಿಸಿದರು ಮತ್ತು ಕೆಲವು ಕಡೆ ಜನರು ಏನುಮುರೆಷನ್ ಫಾರ್ಮಗಳು ತುಂಬಿದ್ದಾರೆ, ಆದರೆ ಬಿ.ಎಲ್.ಓಗಳಿಗೆ ತಲುಪಿಸಿಲ್ಲಾ ಮತ್ತು ಇನ್ನೊಂದಿಷ್ಟು ಜನ, ಇನ್ನು ಸಮಯವಿದೆ ಎಂದು ಫಾರಂಗಳು ತುಂಬದೆ ಹಾಗೆ ಇಟ್ಟುಕೊಂಡಿರುವ ಬಗ್ಗೆಯೂ ಖೂಬಾ ಮತ್ತು ಅವರ ಜೊತೆಗಿದ್ದ ಪಕ್ಷದ ಮುಖಂಡರ ಗಮನಕ್ಕೆ ಬಂದಿತು, ಆದರೆ ತರಹ ಸಮಯ ವ್ಯರ್ಥ ಮಾಡದೆ ನಿಮ್ಮ ಫಾರಂಗಳು ಭರ್ತಿ ಮಾಡಿ, ಬಿ.ಎಲ್.ಓಗಳಿಗೆ ನೀಡುವ ಜವಬ್ದಾರಿ ತಮ್ಮದಿದೆ, ಆದ್ದರಿಂದ ಆದಷ್ಟೂ ಬೇಗ ಫಾರಂಗಳು ಭರ್ತಿ ಮಾಡಿಕೊಡಿ, ಕೊನೆಯ ದಿನಾಂಕದವರೆಗೆ ಕಾಯಬೇಡಿ ಎಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶ್ರೀ ವಿಕ್ರಮ ಮುದಾಳೆ, ನಿತಿನ ಕರ್ಪೂರ, ಕೆ.ಸಿದ್ರಾಮೇಶ್ವರ ರಡ್ಡಿ, ಗಣೇಶ, ಶ್ರೀಕಾಂತ ಔರಾದಕರ್, ಗುರುನಾಥ ಜ್ಯಾಂತಿಕರ್, ರವಿ ವಟಗೆ ಮುಂತಾದವರು ಖೂಬಾ ಅವರಿಗೆ ಸಾಥ್ ನೀಡಿದರು.