
ಲಕ್ಷೆ÷್ಮÃಶ್ವರ,ಸೆ.೨೯: ಪಟ್ಟಣದಲ್ಲಿ ಇದೇ ದಿನಾಂಕ ಅಕ್ಟೋಬರ್ ೧೧ರಿಂದ ದಸರಾ ಮಹೋತ್ಸವದ ಅಂಗವಾಗಿ ದುರ್ಗಾ ದೌಡು ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವೂ ಹಮ್ಮಿಕೊಳ್ಳಲಾಗಿದೆ ಎಂದು ದುರ್ಗಾ ದೌಡು , ಕಾರ್ಯಕ್ರಮದ ರೂವಾರಿ ಗುರುನಾಥ ದಾನಪ್ಪನವರ ಹೇಳಿದರು.
ಅವರು ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ ಅಕ್ಟೋಬರ್ ೧೧ರಂದು ಕರೆವಾಡಿ ಮಠದ ಶ್ರೀ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಗ್ರಾಮದೇವಿ ದ್ಯಾಮವನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತ್ರಿಶೂಲ ಮತ್ತು ಭಗವಾನ್ ಧ್ವಜ ನೀಡುವ ಮೂಲಕ ದುರ್ಗಾ ದೌಡಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಈ ದುರ್ಗಾ ದೌಡು ಕಾರ್ಯಕ್ರಮ ಜಾತಿ ಧರ್ಮ ರಾಜಕೀಯವನ್ನು ಮೀರಿ ಎಲ್ಲಾ ಧರ್ಮದವರನ್ನು ಒಗ್ಗೂಡಿಸಿಕೊಂಡು
ಹಮ್ಮಿಕೊಳ್ಳುತ್ತಿರುವ ಭಕ್ತಿ ಶ್ರದ್ಧಾ ಕಾರ್ಯಕ್ರಮ ಎಂದು ಹೇಳಿದವರು ೧೮ರಂದು ಮಹಿಳೆಯರಿಗೆ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಉಡಿ ತುಂಬ ಕಾರ್ಯಕ್ರಮ ನಂತರ ೧೯ರಂದು ಶುಭಾಯಾತ್ರೆ ಜರುಗಲಿದೆ ಎಂದು ಹೇಳಿ ಒಟ್ಟು ೧೦೮ ದೇವಸ್ಥಾನಗಳಿಗೆ ಪ್ರತಿನಿತ್ಯ ಬೆಳಗಿನ ಜಾವ ಐದು ಗಂಟೆಗೆ ದುರ್ಗಾ ದೌಡು ಕಾರ್ಯಕ್ರಮ ಹೊರಟು ಪ್ರತಿ ದೇವಸ್ಥಾನದಲ್ಲೂ ವಿಶೇಷ ಪೂಜೆ ಪುನಸ್ಕಾರಗಳು ಜರಗಲಿವೆ ಎಂದು ಹೇಳಿ ಎಲ್ಲಾ ಧರ್ಮದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಬಿತ್ತಿ ಪತ್ರಗಳನ್ನು ಮುಖಂಡರುಗಳು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಗುರುರಾಜ್ ಪಾಟೀಲ್ ಕುಲಕರ್ಣಿ ದಸರಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಪೂಜಾ ರ ಸಂಚಾಲಕರಾದ ಬಸವರಾಜ ಅರಳಿ ಮಹೇಶ ಹೊಗೆ ಸೊಪ್ಪಿನ ಚಂಬಣ್ಣ ಬಾಳಿಕಾಯಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಬಸವೇಶ ಮಹಾಂತ ಶೆಟ್ಟರ ಶಿವಯೋಗಿ ಅಂಕಲಕೋಟಿ ತಿಪ್ಪಣ್ಣ ಸಂಶಿ ಈರಣ್ಣ ಕೋಲ್ಕಾರ್ ರವಿ ಲಿಗಶೆಟ್ಟಿ ರಾಜಣ್ಣ ಗುಡಿಗೇರಿ ಬಂಗಾರಪ್ಪ ಮುಳುಗುಂದ ಮಲ್ಲನಗೌಡ ಪಾಟೀಲ್ ಸೇರಿದಂತೆ ಅನೇಕರಿದ್ದರು.





















