Home ಜಿಲ್ಲೆ ಟ್ಯಾಕ್ಸಿ ನಿಲ್ದಾಣಕ್ಕೆ ಚಾಲಕರ ಧರಣಿ

ಟ್ಯಾಕ್ಸಿ ನಿಲ್ದಾಣಕ್ಕೆ ಚಾಲಕರ ಧರಣಿ


ನವಲಗುಂದ,ಜು.೭: ಪಟ್ಟಣದಲ್ಲಿ ಟ್ಯಾಕ್ಸಿ ಸ್ಟಾ÷್ಯಂಡ್ ಗಾಗಿ ಜಾಗೆಯನ್ನು ಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ಚಾಲಕರ ಒಕ್ಕೂಟದ ತಾಲ್ಲೂಕು ಘಟಕದಿಂದ ಚಾಲಕರು ಮತ್ತು ಪದಾಧಿಕಾರಿಗಳು ಪುರಸಭೆ ಎದುರು ಪ್ರತಿಭಟನಾ ಧರಣಿಯನ್ನು ಎರಡನೇ ದಿನವೂ ಮುಂದುವರೆಸಿದ್ದಾರೆ.


ಮೊದಲ ದಿನ ಸೋಮವಾರ ಕರ್ನಾಟಕ ಚಾಲಕರ ಸಂಘದ ಜಿಲ್ಲಾದ್ಯಕ್ಷ ರಮೇಶ್ ಹೆಳವರ, ಹುಬ್ಬಳ್ಳಿ ತಾಲ್ಲೂಕು ಅಧ್ಯಕ್ಷ ರಾಜಣ್ಣ ಸಾಲಿ, ರೈತ ಹೋರಾಟಗಾರ ಲೋಕನಾಥ ಹೇಬಸೂರ, ಬಿಜೆಪಿ ಗ್ರಾಮೀಣಜಿಲ್ಲಾ ಕಾರ್ಯದರ್ಶಿ ದೇವರಾಜ ದಾಡಿಭಾವಿ, ಕರ್ನಾಟಕ ರಕ್ಷಣಾ ವೇದಿಕೆಯ ಸಿರಾಜುದ್ದೀನ ಧಾರವಾಡ, ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ, ಬೆಂಬಲ ವ್ಯಕ್ತ ಪಡಿಸಿ ಮಾತನಾಡಿದರು.
ತಹಶೀಲ್ದಾರ ಸುಧೀರ್ ಸಾಹುಕಾರ್, ಪುರಸಭೆ ಮುಖ್ಯಾಧಿಕಾರಿ ಎಸ್ ಪಿ ಪೂಜಾರ ಸ್ಥಳಕ್ಕೆ ಭೇಟಿ ನೀಡಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥ ಪಡಿಸಲಾಗುವುದು ಎಂದು ಧರಣಿನಿರತರಿಗೆ ಭರವಸೆ ನೀಡಿದರು.


ಮಂಜುನಾಥ್ ಮೆಣಸಿನಕಾಯಿ, ಚೇತನ ಕಲಾಲ್, ಮಂಜುನಾಥ್ ಸುಣಗಾರ, ದಯಾನಂದ ಗವಿ, ಆನಂದ ಇಬ್ರಾಹಿಂಪುರ, ಮಂಜುನಾಥ್ ಹಂಚಿನಾಳ, ಪ್ರವೀಣ ಕಾಳೆ, ಚೇತನ್ ನಾಯಕ, ಶಶಿ ತುಳಸಿಗೇರಿ, ಅಲ್ತಾಪ್ ಇಬ್ರಾಹಿಂಪುರ ರಮೇಶ ಅಂಗಡಿ, ಸಿದ್ದು ಪುರದನ್ನವರ, ಹುಸೇನಸಾಬ ಕಣವಿ, ಕಲ್ಲಪ್ಪ ಅಗಸಿಂಡಿ ಕೃಷ್ಣ ಭೋವಿ, ಶಾನು ಧಾರವಾಡ, ಸದ್ದಾಂ ಹುಗ್ಗಿ, ಅಶೋಕ ಬಸಾಪುರ, ಶಂಬು ಪವಾರ, ಪುಂಡಲೀಕ್ ಕಲಾಲ್, ಇತರರು ಪ್ರತಿಭಟನೆಯಲ್ಲಿ ಇದ್ದರು.