
ಕಲಬುರಗಿ: ಐತಿಹಾಸಿಕ, ಅಪರೂಪದ ವಾಸ್ತುಶಿಲ್ಪ ಹೊಂದಿರುವ, ಸುಮಾರು ೧೪೦೦ ವರ್ಷಗಳ ಪ್ರಾಚೀನ ಕಾಲದ ‘ಕಲಬುರಗಿ ಗ್ರಾಮ ದೇವತೆ’ ಎಂದು ನಂಬಲ್ಪಟ್ಟ ನಗರದ ಶಹಾಬಜಾರ ನಾಕಾ ಸಮೀಪವಿರುವ ಸ್ಥಂಭ ರಾಮಲಿಂಗೇಶ್ವರ ದೇವಾಲಯ ಹಾಗೂ ಅದರ ಆವರಣದ ಸ್ಥಳ ಅಭಿವೃದ್ಧಿಗೊಳಿಸಿ, ಅದರ ಬಗ್ಗೆ ವ್ಯಾಪಕ ಪ್ರಚಾರವಾಗುವ ಕೆಲಸ ಜರುಗಬೇಕಾಗಿದೆ ಎಂದು ದೇವಸ್ಥಾನದ ಪೂಜ್ಯ ನಾಗೇಶ ಮಹಾರಾಜ ಸ್ವಾಮೀಜಿ ಹೇಳಿದರು.
ನಗರದ ಆಳಂದ ರಸ್ತೆಯ ಶಹಾಬಜಾರ ನಾಕಾ ಸಮೀಪದಲ್ಲಿರುವ ‘ಸ್ಥಂಭ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ರಾಷ್ಟಿçÃಯ ಪ್ರವಾಸೋದ್ಯಮ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ದೇವಸ್ಥಾನದ ವಾಸ್ತುಶಿಲ್ಪ ಕಲೆಯನ್ನು ಆಗಮಿಸಿದ್ದ ಭಕ್ತರಿಗೆ ವಿವರಣೆ ನೀಡುತ್ತಾ ಅವರು ಮಾತನಾಡುತ್ತಿದ್ದರು.
ಈ ದೇವಸ್ಥಾನದಲ್ಲಿ ಬಹು ಪುರಾತನ ಸ್ಥಾವರಲಿಂಗವಿದೆ. ನಿರ್ಲಕ್ಷö್ಯದಿಂದ ಸುತ್ತಲು ಗಿಡ-ಗಂಟೆ ಬೆಳೆದಿತ್ತು. ಅನೈತಿಕ ಚಟುವಟಿಕೆಗಳ ಸ್ಥಳವಾಗಿತ್ತು. ದೇವಾಲಯದ ಪರಿಸರ ಕಸದಿಂದ ತುಂಬಿತ್ತು. ನಾನು ದೇವಸ್ಥಾನದ
ಮುಖ್ಯಸ್ಥನಾದ ಮೇಲೆ ಸುತ್ತ-ಮುತ್ತಲಿನ ಸ್ಥಳವನ್ನು ಸ್ವಚ್ಛಗೊಳಿಸಿ, ದೇವಸ್ಥಾನದ ಆವರಣದ ಸುಚಿತ್ವವವನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಭಕ್ತರು ದೇವಸ್ಥಾನದ ಮಹಿಮೆಯನ್ನು ಕಂಡು ಆಗಮಿಸುತ್ತಿದ್ದಾರೆ. ಪ್ರತಿ
ಸೋಮವಾರ ಸಂಜೆ ದೀಪೋತ್ಸವ, ಶಿವರಾತ್ರಿ ದಿನದಂದು ವಿಶೇಷ ಕಾರ್ಯಕ್ರಮಗಳು ಜರುಗುತ್ತವೆ. ಐತಿಹಾಸಿಕ ದೇವಸ್ಥಾನವಾದ ಇದರ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸರ್ಕಾರ, ಸಂಬAಧಿಸಿದವರು ಇದರತ್ತ ಲಕ್ಷö್ಯ
ವಹಿಸಬೇಕಾಗಾಗಿದೆ ಎಂದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ನಮ್ಮ ಜಿಲ್ಲೆ ಸೇರಿದಂತೆ ದೇಶದಲ್ಲಿ ಅನೇಕ ಸುಕ್ಷೇತ್ರಗಳು, ಸ್ಮಾರಕಗಳು, ನೈಸರ್ಗಿಕ ತಾಣಗಳು, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಸ್ಥಳಗಳಿದ್ದು ಅವುಗಳನ್ನು ಅಭಿವೃದ್ಧಿಗೊಳಿಸುವುದು ಅವಶ್ಯಕವಾಗಿದೆ. ಇದರಿಂದ ನಮ್ಮ ದೇಶದ ಸಂಸ್ಕೃತಿ, ಇತಿಹಾಸ, ಪರಂಪರೆಯನ್ನು ಮುಂದಿನ ಪೀಳಿಗೆಗೆ ದೊರೆಯಲು ಸಾಧ್ಯವಾಗುತ್ತದೆ. ಐತಿಹಾಸಿಕ ಸ್ಥಳಗಳ ಬಗ್ಗೆ ಹೆಚ್ಚಿನ ಸಂಶೋಧನೆ ಜರುಗಬೇಕು. ಭವ್ಯವಾದ ಅನೇಕ ತಾಣಗಳು, ಸ್ಮಾರಕಗಳು, ಸುಕೇತ್ರಗಳು ಇಂದು ಅವನತಿಯ ಅಂಚಿನಲ್ಲಿವೆ. ಇವುಗಳು ನಾಶವಾದರೆ ಮುಂದಿನ ಪೀಳಿಗೆ ಕೇವಲ ಚಿತ್ರದಲ್ಲಿ ನೋಡಲು ಮಾತ್ರ ಸಾಧ್ಯವಿದ್ದು, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಅಗತ್ಯವಾಗಿದೆ. ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ರಾಷ್ಟçದ ಅಭಿವರದ್ಧಿಗೆ ಪೂರಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಜಗದೀಶ್ ದಾಳಿಮಕರ್, ಹರೀಶ್ ಮಣುರೆ, ಭಾಗ್ಯಶ್ರೀ ಮಣುರೆ, ಸ್ನೇಹಾ
ಕನಕುರಟೆ, ಲಕ್ಷಿö್ಮÃ ಠಾಕೂರ, ರೇಣುಕಾ ಸಿರಸಾಗರ, ಪ್ರಿಯಾಂಕಾ ರಂಗದಾಳ, ಶಿವರಾಜ ಪಾಟೀಲ್ ಸೇರಿದಂತೆ ಇನ್ನಿತರರಿದ್ದರು.





















