Home ಜಿಲ್ಲೆ ಕಲಬುರಗಿ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಬೇಕು: ಅರುಣಕುಮಾರ ಪಾಟೀಲ ಅಭಿಮತ

ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಬೇಕು: ಅರುಣಕುಮಾರ ಪಾಟೀಲ ಅಭಿಮತ

ಕಲಬುರಗಿ,ಸೆ.೨೭- ಇನ್‌ಟ್ಯಾಕ್ ಕಲಬುರಗಿ ಅಧ್ಯಾಯ ಹಾಗೂ ಮಿಲೇನಿಯಮ್ ಇಂಗ್ಲೀಷ ಮತ್ತು ಕನ್ನಡ ಮಾಧ್ಯಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಹೆರಿಟೇಜ್ ಕ್ವೀಜ್- ೨೦೨೬ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳು ಕೇವಲ ಅಂಕಗಳನ್ನು ಗಳಿಸುವುದಕ್ಕೆ ಸೀಮಿತರಾಗಬಾರದು, ಅವರಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಬೇಕು ಎಂದು ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪ್ರೊ. ಅರುಣಕುಮಾರ ಪಾಟೀಲ ಹೇಳಿದರು.
ಇನ್ ಟ್ಯಾಕ್ ಕಲಬುರಗಿ ಅಧ್ಯಾಯದ ರಾಜ್ಯಮಟ್ಟದ ಕ್ವಿಜ್ ಸ್ಪರ್ಧೆ-೨೦೨೬ ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಕಿವಿ ಮಾತು ಹೇಳಿದರು. ಈ ರೀತಿಯ ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಉದ್ಘಾಟನಾ ನುಡಿಗಳಲ್ಲಿ ತಮ್ಮ ಅಭಿಮತವನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಕಲ್ಲಿನಾಥ ಪಾಟೀಲ, ವಿಶ್ರಾಂತ ಪ್ರಾಧ್ಯಪಕರು, ಕಲಬುರಗಿ ಇವರು ಇನ್ ಟ್ಯಾಕ್ ನಿರಂತರವಾಗಿ ಶಿಕ್ಷಣ ರಂಗಕ್ಕೆ ಸಂಬAಧಿಸಿದAತೆ, ಶೈಕ್ಷಣಿಕ ಪ್ರವಾಸ, ಪಾರಂಪರಿಕ ನಡಿಗೆ,
ಚಿತ್ರಕಲಾ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಅದರಲ್ಲಿ ರಸಪ್ರಶ್ನೆ ಮಕ್ಕಳ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವುದಲ್ಲದೆ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗು ತ್ತದೆ ಎಂದು ಹೇಳಿದರು.
ಡಾ. ಬಿ.ಎಸ್. ಗುಲಶೆಟ್ಟಿ ವಿಶ್ರಾಂತ ಪ್ರಾಧ್ಯಾಪಕರು, ಅಧ್ಯಕ್ಷೀಯ ನುಡಿಗಳಲ್ಲಿ ಮಕ್ಕಳು ಇಂದಿನ ಜಗತ್ತಿಗೆ ಹೊಂದಿಕೊಳ್ಳುವ ಜ್ಞಾನ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಬರುತ್ತದೆ ಎಂದು ಹೇಳಿದರು. ಡಾ. ಶಂಭುಲಿAಗ ಎಸ್. ವಾಣಿ, ಸಂಯೋಜಕರು, ಇನ್ ಟ್ಯಾಕ್ ಕಲಬುರಗಿ ಅಧ್ಯಾಯ ಇವರು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಹೇಳಿದರೆ, ಡಾ. ಶಶಿಶೇಖರ ರೆಡ್ಡಿ ವಂದನಾರ್ಪಣೆ ಮಾಡಿದರು.
ನಗರದ ೯ ಶಾಲೆಯ ಸುಮಾರು ೧೨೫ ವಿದ್ಯಾರ್ಥಿಗಳು ಭಾಗವಹಿಸಿದರು. ಲಿಖಿತ ಪರೀಕ್ಷೆಯಲ್ಲಿ ಹತ್ತು ತಂಡಗಳನ್ನು ಆಯ್ಕೆ ಮಾಡಿ ನಂತರ ಮೌಖಿಕ ಪ್ರಶ್ನೆಗಳನ್ನು ಐದು ಸುತ್ತುಗಳಲ್ಲಿ ಮಕ್ಕಳಿಗೆ ಕೇಳಲಾಯಿತು. ಡಾ. ಶಶಿಶೇಖರ ರೆಡ್ಡಿ, ವಿಶ್ರಾಂತ ಪ್ರಾಧ್ಯಾಪಕರು ಕ್ವಿಜ್ ಕಾರ್ಯಕ್ರಮವನ್ನು ಆಕರ್ಷಕವಾಗಿ ನಡೆಸಿಕೊಟ್ಟರು. ಪ್ರೊ. ಚಂದ್ರಶೇಖರ ಅನಾದಿ ಅವರಿಗೆ ಸಹಕರಿಸಿದರು.
ಈ ಸ್ಪರ್ಧೆಯಲ್ಲಿ ಅಪ್ಪಾ ಪಬ್ಲಿಕ್ ಶಾಲೆಯ ಒಂಬತ್ತನೇ ತರಗತಿಯ ಎಸ್.ವಿ. ದರ್ಶನ ಮತ್ತು ಮಹಮ್ಮದ ಅಬೂಬಕರ್ ಇವರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಕ್ವಿಜ್ ಸ್ಪರ್ಧೆಗೆ ಆಯ್ಕೆಗೊಂಡರು. ದ್ವಿತಿಯ ಸ್ಥಾನದಲ್ಲಿ ಮಿಲೇನಿಯಂ ಆಂಗ್ಲ ಶಾಲೆಯ ಸೋಹನ್ ಮತ್ತು ನಯನ್, ತೃತಿಯ ಸ್ಥಾನದಲ್ಲಿ ಎಸ್.ಎಂ. ಶಾಲೆಯ ಮುಜಾಮಿಲ್ ಹಾಗೂ ಮನೀಷ್ ಎಂ. ಇವರು ಆಯ್ಕೆಗೊಂಡರು.
ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಇನ್ ಟ್ಯಾಕ್ ವತಿಯಿಂದ ಪ್ರಮಾಣ ಪತ್ರ ಹಾಗೂ ಇನ್ ಟ್ಯಾಕಿನ ಸಾಮಾನ್ಯ ಜ್ಞಾನದ ಪುಸ್ತಕವನ್ನು ವಿತರಿಸಲಾಯಿತು.
ಮಿಲೇನಿಯಂ ಶಾಲೆಯ ಆಂಗ್ಲ / ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಗುರುಗಳು, ಸಹ ಶಿಕ್ಷಕರು, ಇನ್ ಟ್ಯಾಕಿನ ಸದಸ್ಯರು ಬೇರೆ ಬೇರೆ ಶಾಲೆಗಳಿಂದ ಆಗಮಿಸಿದ ಸಂಯೋಜಕರು ಭಾಗವಹಿಸಿದ್ದರು.