Home ಜಿಲ್ಲೆ ಕಲಬುರಗಿ ಟಿಪ್ಪರ್-ದ್ವಿಚಕ್ರ ವಾಹನದ ನಡುವೆ ಢಿಕ್ಕಿ; ಬೈಕ್ ಸವಾರ ಮೃತ್ಯು

ಟಿಪ್ಪರ್-ದ್ವಿಚಕ್ರ ವಾಹನದ ನಡುವೆ ಢಿಕ್ಕಿ; ಬೈಕ್ ಸವಾರ ಮೃತ್ಯು

ಚಿತ್ತಾಪುರ: ಟಿಪ್ಪರ್ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 44 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಚಿತ್ತಾಪುರ ತಾಲೂಕಿನ ರಾವೂರ ಬೈಪಾಸ್ ಕ್ರಾಸ್‍ನ ಟನಿರ್ಂಗ್ ಪಾಯಿಂಟ್ ಬಳಿ ಗುರುವಾರ ರಾತ್ರಿ ನಡೆದಿದೆ.

ಚಿತ್ತಾಪುರ ಪಟ್ಟಣದ ನಿವಾಸಿ ಮಾರುತಿ (44) ಮೃತಪಟ್ಟವರು. ಇವರು ಯಾದಗಿರಿ ಕಡೆಯಿಂದ ಚಿತ್ತಾಪುರದತ್ತ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ, ಚಿತ್ತಾಪುರ ಕಡೆಯಿಂದ ಗುಲ್ಬರ್ಗಾ ಕಡೆಗೆ ತೆರಳುತ್ತಿದ್ದ ಟಿಪ್ಪರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಅಪಘಾತದ ತೀವ್ರತೆಗೆ ಮಾರುತಿ ಮೃತಪಟ್ಟಿದ್ದಾರೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.

ವಿಷಯ ತಿಳಿದು ಸ್ಥಳಕ್ಕೆ ಚಿತ್ತಾಪುರ ಸಿಪಿಐ ಎಸ್.ಸಿ ಪಾಟೀಲ್, ಎಎಸ್‍ಐ ಚಂದ್ರಶೇಖರ್, ಲಕ್ಷ್ಮಣ, ಅಮರನಾಥ ಬನ್ನಿ, ವಿನೋದ್ ಹಾಗೂ ರಸೂಲ್ ಉಪಾಸಿ ಸೇರಿದಂತೆ ಪೆÇಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು ವಾಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.