
ಮಾಲೂರು, ಸೆ. ೨೩: ಕಾರ್ಮಿಕ ಇಲಾಖೆ ನಿರೀಕ್ಷಕ ರೇಣುಕಾ ಪ್ರಸಾದ್ ಅವರು ಎಪಿಎಂಸಿ ಮಾರುಕಟ್ಟೆ ಸೇರಿದಂತೆ ನಗರದ ವಿವಿಧ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ, ಬಾಲ ಕಾರ್ಮಿಕ ಪದ್ಧತಿ ವಿರೋಧಿಸಿ ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ ಒಬ್ಬ ಕಿಶೋರ ಕಾರ್ಮಿಕ ಪತ್ತೆ ಯಾಗಿದ್ದು, ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಯಾವುದೇ ೧೪ ವರ್ಷದ ಕೆಳಗಿನ ಮಗುವನ್ನು ಕಾರ್ಖಾನೆಯಲ್ಲಿ, ಗಣಿಗಳಲ್ಲಿ ಅಥವಾ ಅಪಾಯಕಾರಿ ಕೆಲಸ ಮಾಡುವಂತೆ ನೇಮಿಸಬಾರದು” ಎಂದು ಹೇಳಿದರು. “ರಾಷ್ಟ್ರವು ತನ್ನ ಕೆಲಸಗಾರರ, ಮಹಿಳೆ, ಪುರುಷ ಮತ್ತು ಎಳೆ ವಯಸ್ಸಿನ ಮಕ್ಕಳ ಆರೋಗ್ಯ ಮತ್ತು ಶಕ್ತಿಯ ಶೋಷಣೆಯಾಗದಂತೆ, ಅವರು ತಮ್ಮ ಆರ್ಥಿಕ ತೊಂದರೆಯಿಂದಾಗಿ ತಮ್ಮ ವಯಸ್ಸಿಗೆ ಮೀರಿದ ಅಥವಾ ಸಾಮರ್ಥ್ಯಕ್ಕೆ ಅನುಗುಣವಾಗಿಲ್ಲದ ಕೆಲಸ ಮಾಡದಂತೆ ನೀತಿಯನ್ನು ರೂಪಿಸಬೇಕು” ಎಂದರು.
ಮಕ್ಕಳಿಗೆ ಆರೋಗ್ಯಕರ ವಾತಾವರಣದಲ್ಲಿ ಗೌರವ, ಸ್ವಾತಂತ್ರ್ಯ, ಅಭಿವೃದ್ದಿಯನ್ನು ಪಡಿಸಿಕೊಳ್ಳುವ ಅವಕಾಶ ಮತ್ತು ಅನುಕೂಲತೆಯನ್ನು ಒದಗಿಸಬೇಕು ಮತ್ತು ಬಾಲ್ಯ ಹಾಗೂ ಯೌವನದಲ್ಲಿ ನೈತಿಕ ಹಾಗೂ ಐಹಿಕ ಅಂಶಗಳನ್ನು ಕಳೆದುಕೊಳ್ಳದಂತೆ ರಕ್ಷಣೆ ಕೊಡಬೇಕು. “ರಾಷ್ಟ್ರದ ಸಂವಿಧಾನವು ಜಾರಿಗೆ ಬಂದ ೧೦ ವರ್ಷದೊಳಗೆ ಎಲ್ಲ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣವನ್ನು ಅವರಿಗೆ ೧೪ ವರ್ಷ ತುಂಬುವ ತನಕ ಕೊಡಲು ಪ್ರಯತ್ನಿಸಬೇಕು” ಎಂದು ಪ್ರತಿಪಾದಿಸಿದರು.
ಬಾಲ ಕಾರ್ಮಿಕ ಕಾಯಿದೆ, ೧೯೪೮: ಈ ಕಾಯಿದೆಯು ೧೪ ವರ್ಷದೊಳಗಿನ ಮಕ್ಕಳನ್ನು, ಅವರ ಜೀವ ಮತ್ತು ಆರೋಗ್ಯಕ್ಕೆ ಹಾನಿಕರವಾದ ೧೩ ವಿಧದ ವೃತ್ತಿಗಳಲ್ಲಿ ಮತ್ತು ೫೭ ಕಾರ್ಯ ವಿಧಾನಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿದೆ. ಆ ವೃತ್ತಿಗಳು ಮತ್ತು ಕಾರ್ಯ ವಿಧಾನಗಳನ್ನು ಆ ಕಾಯ್ದೆಯ ಪರಿಶಿಷ್ಟದಲ್ಲಿ ನಮೂದಿಸಲಾಗಿದೆ.
ಕೈಗಾರಿಕೆಗಳ ಕಾನೂನು (ಫ್ಯಾಕ್ಟರೀಸ್ ಅಕ್ಟ್), ೧೯೪೮: ಈ ಕಾಯಿದೆಯು ೧೪ ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ನಿಷೇಧಿಸಿದೆ. ೧೫-೧೮ ವರ್ಷದ ಒಳಗಿನ ಹದಿಹರೆಯದವರನ್ನು ಕಾರ್ಖಾನೆಯ ಕೆಲಸಕ್ಕೆ ತೆಗೆದು ಕೊಳ್ಳಬೇಕಾದರೆ ಅವರು ವೈದ್ಯರಿಂದ ದೈಹಿಕ ಅರ್ಹತೆಯ ಪ್ರಮಾಣ ಪತ್ರ ಪಡೆದಿರಬೇಕು. ಕಾಯಿದೆಯು ೧೪ ರಿಂದ ೧೮ ವರ್ಷದೊಳಗಿನ ಕೆಲಸಗಾರರಿಗೆ ದಿನಕ್ಕೆ ನಾಲಕ್ಕೂವರೆ ಗಂಟೆಯ ಕೆಲಸದ ಅವಧಿಯನ್ನು ನಿಗದಿ ಪಡಿಸಿದೆ ಮತ್ತು ಅವರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿದೆ.
ಬಾಲದುಡಿಮೆಯನ್ನು ನಿಷೇಧಿಸಲು ಮಾರ್ಗಸೂಚಿಗಳು:
ಬಾಲದುಡಿಮೆ (ನಿಷೇಧ ಮತ್ತು ನಿಯಂತ್ರಣ ವಿನಿಯಮ) ಅಧಿಸೂಚನೆ ೧೯೮೬ರಂತೆ ೧೫ ಉದ್ಯೋಗಗಳು ಮತ್ತು ೫೭ ಸಂಸ್ಕರಣಾ ಉದ್ಯಮಗಳಲ್ಲಿ ಬಾಲದುಡಿಮೆಯನ್ನು ನಿಷೇಧ ಮಾಡಲಾಗಿದೆ. ಬಾಲ ನ್ಯಾಯಾಲಯ ಅಧಿನಿಯಮ ೨೦೦೬ ಒಂದು ಕಲ್ಯಾಣಕಾರಿ ಅಧಿನಿಯಮವಾಗಿದ್ದು, ಇದನ್ನು ಅಲಕ್ಷಿತ ಬಾಲಾಪರಾಧಿಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ಪುನರ್ವಸತಿಗಳನ್ನು ನೀಡಲು ಜಾರಿಗೊಳಿಸಲಾಗಿದೆ ಮತ್ತು ಇದರ ವ್ಯಾಪ್ತಿಯಲ್ಲಿ ಬಾಲಕಾರ್ಮಿಕರೂ ಸೇರುತ್ತಾರೆ.
ಜೀತಪದ್ಧತಿಯ ನಿಷೇಧ ಅಧಿನಿಯಮ ೧೯೭೬ ನ್ನು ಮಕ್ಕಳನ್ನು ದುಡಿಮೆಯೊಳಗೆ ತೊಡಗಿಸಿಕೊಳ್ಳುವ ಉದ್ಯಮದಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಬಳಸಲೇಬೇಕು. ಜೊತೆಗೆ ಒಬ್ಬ ಗhಚಿಟಿಜzuತಾರನ ಮೂಲಕ ಬಾಲಕರನ್ನು ದುಡಿಮೆಗೆ ಹಾಕಿರುವ ಪ್ರಕರಣಗಳಲ್ಲಿ ಪ್ರಧಾನ ಉದ್ಯಮದಾರನನ್ನು ಬಾಲದುಡಿಮೆಯ ಗುದ್ದಿಗೆ (ನಿಷೇಧ ಮತ್ತು ನಿಯಂತ್ರಣ) ಅಧಿನಿಯಮ ೧೯೭೦ರ ಅಡಿಯಲ್ಲಿ ವಿಚಾರಣೆಗೆ ಒಳಪಡಿಸ ಬಹುದಾಗಿದೆ.
ಅಂಗಡಿ ಮುಂಗಟುಗಳು, ಹೋಟೆಲ್‌ಗಳು, ಗ್ಯಾರೇಜ್‌ಗಳು ಸೇರಿದಂತೆ ಅಪಾಯಕಾರಿ ವಸ್ತುಗಳ ತಯಾರಿಕೆಯಲ್ಲಿ ಬಾಲ ಕಾರ್ಮಿಕರನ್ನು ನಿಷೇಧಿಸಲಾಗಿದೆ. ಸಾರ್ವಜನಿಕರಿಗೆ ೧೪ ವರ್ಷದೊಳಗಿನ ಮಕ್ಕಳು ದುಡಿಮೆಯಲ್ಲಿದ್ದರೆ ಕಾರ್ಮಿಕ ಇಲಾಖೆ ಸಹಾಯವಾಣಿಗೆ ಕರೆ ಮಾಡಿದರೆ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವ ಮಾಲೀಕರ ವಿರುದ್ದ ಕಠಿಣ ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಬಾಲಕಾರ್ಮಿಕನನ್ನು ವಶಕ್ಕೆ ಪಡೆದು ಅಂಗಡಿ ಮಾಲೀಕನ ಮೇಲೆ ಪ್ರಕರಣ ದಾಖಲಿಸಿದರು.
ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕಿ ಶೃತಿ, ಏನ್‌ಜಿಓ ರವೀಂದ್ರ, ಪೊಲೀಸ್ ಸಿಬ್ಬಂದಿ ನವೀನ್ ಮತ್ತಿತರರು ಹಾಜರಿದ್ದರು.

























