Home ಜಿಲ್ಲೆ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಗಾಂಧೀಜಿ, ಶಾಸ್ತ್ರಿ ಜಯಂತಿ ಆಚರಣೆ

ಜಿಮ್ಸ್ ಆಸ್ಪತ್ರೆಯಲ್ಲಿ ಗಾಂಧೀಜಿ, ಶಾಸ್ತ್ರಿ ಜಯಂತಿ ಆಚರಣೆ

ಕಲಬುರಗಿ,ಅ.2-ನಗರದ ಜಿಮ್ಸ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞರ ಕೊಠಡಿಯಲ್ಲಿ ರಾಷ್ಟ್ರಪಿತಾ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿಯನ್ನು ಆಚರಿಸಲಾಯಿತು.
ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರಾದ ಡಾ.ರೂಕೀಯ ಆಸ್ನಾ ರಬಾ ಅವರು ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಭಾವ ಚಿತ್ರಕ್ಕೆ ಪೂಜೆಮಾಡಿ ಗೌರವಿಸಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ಅವರು ಬ್ರಿಟಿಷರ ದಬ್ಬಾಳಿಕೆ, ದೌರ್ಜನ್ಯವನ್ನು ಮೆಟ್ಟಿನಿಂತು ದೇಶದ ಜನತೆಯ ಪ್ರೀತಿ, ವಿಶ್ವಾಸಗಳಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಅವರ ನಡೆ-ನುಡಿ, ಚಿಂತನೆ, ಆದರ್ಶ, ಜೀವನ ಶೈಲಿ ದೇಶದಲ್ಲಿ ಇನ್ನೂ ಜೀವಂತವಾಗಿದ್ದರಿಂದ ಪ್ರಜಾಪ್ರಭುತ್ವ ಉಳಿದಿದೆ. ಲಾಲ್ ಬಹಾದ್ದೂರ್ ಶಾಸ್ತ್ರಿ ದೇಶಕಂಡ ಪ್ರಾಮಾಣಿಕ ಪ್ರಧಾನಿಯಾಗಿದ್ದರು. ಅವರ ವ್ಯಕ್ತಿತ್ವ, ಸರಳತೆ ಎಲ್ಲರಿಗೂ ಆದರ್ಶ ಎಂದು ಸ್ಮರಿಸಿದರು.
ಜಿಲ್ಲಾ ತಂಬಾಕು ವ್ಯಸನ ಮುಕ್ತ ಕೇಂದ್ರದ ಸೈಕಾಲಜಿಸ್ಟ್ ಕೌನ್ಸಿಲರ್ ಮಂಜುನಾಥ ಕಂಬಾಳಿಮಠ ಮಾತನಾಡಿ, ಮಹಾತ್ಮ ಗಾಂಧಿ ಅವರು ಶ್ರೇಷ್ಠ ಸಾಮಾಜಿಕ ಸುಧಾರಕ, ಧರ್ಮನಿಷ್ಠರು, ಸತ್ಯವಂತರಾಗಿದ್ದರು. ಇಡೀ ವಿಶ್ವವೇ ಒಪ್ಪಿ ಅಪ್ಪಿಕೊಂಡಿರುವ ಗಾಂಧಿ ಮತ್ತು ಗಾಂಧಿವಾದವನ್ನು ದೇಶದಲ್ಲಿ ಉಳಿಸಿಕೊಳ್ಳಬೇಕಿರುವುದು ಇಂದಿನ ತುರ್ತು, ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷವಾಕ್ಯದ ಮೂಲಕ ದೇಶದ ಅಭಿವೃದ್ಧಿಗೆ ಆಯಾಮ ನೀಡಿದವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಓಪಿಡಿ ಸರ್ಜನ್ ಡಾ.ಶಾಲನಿ ಸಜ್ಜನಶೆಟ್ಟಿ. ಸ್ಥಳೀಯ ವೈದ್ಯಾಧಿಕಾರಿಗಳಾದ. ಡಾ. ಓಂ ಪ್ರಕಾಶ್ ಅಂಬೂರೆ. ಡಾ. ಸಂತೋಷ್ ಕಟ್ಟಿಮನಿ. ಕಚೇರಿ ಆಡಳಿತ ಅಧಿಕಾರಿ ಅಂಬಾರಾಯ ಸಂಕಾ, ಶುಶ್ರೂಷ ಅಧೀಕ್ಷಕರು ದರ್ಜೆ – 1/2 ಗುರುಬಸಮ್ಮ ಮಾಲಿಪಾಟೀಲ, ಸಾಲೋಮಿ, ಗೀತಾ ಕುಮಾರಿ ಪಿ ಎಂ. ಲೆಕ್ಕಪರಿಶೋಧಕ ಸಿದ್ದಪ್ಪ ಹಾಲಪ್ಪನೂರ, ಗಣಕ ಸಹಾಯಕಿರಾದ ಸುರೇಖಾ ದಿವಟೆಗಿ, ನಸಿರ್ಂಗ್ ಅಧಿಕಾರಿ ಅನಿತಾ, ಪಾರ್ವತಿ ಎಂ. ಆಪ್ತ ಸಹಾಯಕರಾದ ಅವಿನಾಶ್ ಪಾಟೀಲ, ಮರಿಗೆಯ್ಯ ಶಾಕಿ, ಮಹೇಶ ತಳವಾರ ಹಾಗೂ ಇತರ ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.