Home ಜಿಲ್ಲೆ ತುಮಕೂರು ಸಿಎ ಫೌಂಡೇಶನ್ ಪರೀಕ್ಷೆ: ವಿದ್ಯಾನಿಧಿ ವಿದ್ಯಾರ್ಥಿಗಳ ಉತ್ತಮ ಸಾಧನೆ

ಸಿಎ ಫೌಂಡೇಶನ್ ಪರೀಕ್ಷೆ: ವಿದ್ಯಾನಿಧಿ ವಿದ್ಯಾರ್ಥಿಗಳ ಉತ್ತಮ ಸಾಧನೆ

ತುಮಕೂರು, ಜು. ೧೦- ಮೇ ತಿಂಗಳಲ್ಲ ನಡೆದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.


ಈ ಯಶಸ್ಸು ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ ಸಹಕಾರ ಹಾಗೂ ಕಾಲೇಜಿನ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯ ಪ್ರತಿಫಲವಾಗಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಗುಣಮಟ್ಟದ ತರಬೇತಿ ಮತ್ತು ಸೂಕ್ತ ಮಾರ್ಗದರ್ಶನ ನೀಡಿದ ಪರಿಣಾಮವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ವಿದ್ಯಾವಾಹಿನಿ ಗ್ರೂಪ್‌ನ ಕಾರ್ಯದರ್ಶಿ ಎನ್.ಬಿ. ಪ್ರದೀಪ್‌ಕುಮಾರ್ ಅಭಿಪ್ರಾಯಪಟ್ಟರು.


ದೇಶದ ಮಟ್ಟದಲ್ಲಿ ಸಿಎ ಫೌಂಡೇಶನ್ ಪರೀಕ್ಷೆಗೆ ಒಟ್ಟು ೯೧,೯೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ ೧೮,೧೨೪ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದೇಶದ ಸರಾಸರಿ ಉತ್ತೀರ್ಣ ಪ್ರಮಾಣವು ೨೦.೦೯% ದಾಖಲಾಗಿರುವ ಸಂದರ್ಭದಲ್ಲಿ, ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶೇ. ೨೭.೦೨ ರಷ್ಟು ಉತ್ತೀರ್ಣ ಪ್ರಮಾಣ ಸಾಧಿಸುವ ಮೂಲಕ ವಿಶೇಷ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಈ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಅವನೀಶ್ ಎಂ.ಎಸ್. ಅವರು ೩೦೩ ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದು, ಲಕ್ಷ್ ಜೈನ್ ಅವರು ೨೭೮ ಅಂಕಗಳು ಹಾಗೂ ನಂದಶ್ರೀ ಎಸ್. ಅವರು ೨೬೨ ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.


ಇದಲ್ಲದೆ, ಹರ್ಷಿತಾ ಎಸ್. (೨೫೩ ಅಂಕಗಳು), ಬಸಂತ್ ಆರಾಧ್ಯ (೨೪೬ ಅಂಕಗಳು), ಹಿಂದುಶ್ರೀ ಕೆ.ಆರ್. (೨೩೦ ಅಂಕಗಳು), ಸಿಂಚನಾ ಎನ್. (೨೨೦ ಅಂಕಗಳು), ಕುಸುಮಾ ಬಿ. (೨೨೦ ಅಂಕಗಳು), ರೋಹನ್ ಎಂ. (೨೧೯ ಅಂಕಗಳು), ಪ್ರತೀಕ್ಷಾ ಜಿ. (೨೦೦ ಅಂಕಗಳು) ಹಾಗೂ ಪುಣ್ಯಶ್ರೀ ಎಂ.ಪಿ. (೨೦೦ ಅಂಕಗಳು) ಉತ್ತಮ ಅಂಕಗಳನ್ನು ಗಳಿಸಿ ಕಾಲೇಜಿನ ಹೆಮ್ಮೆಯಾಗಿದ್ದಾರೆ.


ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.