Home ಜಿಲ್ಲೆ ಆಷಾಡ ಏಕಾದಶಿ: ಮಕ್ಕಳು ವಿಠ್ಠಲ-ರುಕ್ಕಿಣಿ ಛದ್ಮವೇಷ

ಆಷಾಡ ಏಕಾದಶಿ: ಮಕ್ಕಳು ವಿಠ್ಠಲ-ರುಕ್ಕಿಣಿ ಛದ್ಮವೇಷ

ಕಮಲನಗರ:ಜು.26:ತಾಲೂಕಿನ ತೋರಣಾ ಗ್ರಾಮದ ಸ್ವಾಮಿ ವಿವೇಕಾನಂದ ಪಬ್ಲಿಕ್ ಶಾಲೆಯ ಆವರಣದಲ್ಲಿ ಶನಿವಾರ ಸಂಸ್ಥೆಯ ಅಧ್ಯಕ್ಷ ಬಾಲಾಜಿ ಫಿರಂಗೆ ಅವರು ಭಗವಾನ್ ಪರಮಾತ್ಮ ವಿಠ್ಠಲ ರುಕ್ಮಿಣಿ ಭಾವಚಿತ್ರಕ್ಕೆ ಪುಷ್ಪಹಾರ ಹಾಕಿ ಗೌರವ ಸಲ್ಲಿಸಿ ಮಾತನಾಡಿ, ನಮ್ಮ ದೇಶದಲ್ಲಿ ಏಕಾದಶಿ ಮತ್ತು ಉಪವಾಸ ಪರ್ಯಾಯ ವಾಚಕಗಳಾಗಿದೆ. ನಮ್ಮ ಧರ್ಮ ಶಾಸ್ತ್ರಗಳಲ್ಲಿ ಅನೇಕ ರೀತಿಯ ಉಪವಾಸ ವ್ರತಗಳಿದ್ದು, ಎಲ್ಲವುಗಳಿಗೂ ತನ್ನದೇ ಆದ ಮಹತ್ವವಿದೆ. ಇವುಗಳು ಪಾಲಿಸುವ ಶ್ರದ್ಧೆಯ ಬಳಗವಿದೆ. ಈ ವ್ರತವು ಭಾರತದಾದ್ಯಂತ ಎಲ್ಲಾ ವೈಷ್ಣವ ಮತ್ತು ಭಾಗವತ್ ಸಂಪ್ರದಾಯದ ಅನುಯಾಯಿಗಳಿಗೆ ಅವುಗಳನ್ನು ನಿತ್ಯ ವ್ರತವಾಗಿವೆ.
ಅಂತಃಕರಣ ಶುದ್ದಿ, ಬಹಿರಂಗಶುದ್ಧಿ, ಆರೋಗ್ಯ ಭಾಗ್ಯ ಸಕಲ ದೋಷಗಳ ಪರಿಹಾರ ಈ ಫಲವಾಗಿದೆ. ವ್ರತಾಚರಣೆಯ ವಿಠ್ಠಲ ವಿಠ್ಠಲ ನಾಮಸ್ಮರಣೆಯಿಂದ ಹೃದಯ ಅಪಘಾತ ಮಧುಮೇಹ, ಬಿಪಿ ಇಂತಹ ರೋಗನಿವಾರಣೆ ಮಾಡುವಂತ ಅಗಾಧ ಶಕ್ತಿ ಹೊಂದಿದೆ ಎಂದು ಹೇಳಿದರು

ಶಾಲೆ ಮುದ್ದು ಮಕ್ಕಳು ವಿಠಲ- ರುಕ್ಷೀಣಿ ಛದ್ಮ ವೇಷಭೂಷಣ ಧರಿಸಿ ಮೆರವಣಿಗೆ ನಡೆಯಿತು.
ಶಾಲೆ ಅಧ್ಯಕ್ಷ ಬಾಲಾಜಿ ಆರ್ ಫಿರಂಗೆ ಮೆರವಣಿಗೆಗೆ ಚಾಲನೆ ನೀಡಿದರು.
ವಿದ್ಯಾರ್ಥಿಗಳು ವಿಠ್ಠಲ ರುಕ್ಮಿಣಿ ಮಾತೇಯ ವೇಷ ಧರಿಸಿ ವಿಠ್ಠಲ ವಿಠ್ಠಲ ವಿಠ್ಠಲಾ ಹರಿ ಓಂ ವಿಠ್ಠಲ ಎಂಬ ಹಾಡಿನ ಮೇಲೆ ನೃತ್ಯ ಮಾಡಿದರು. ಮಕ್ಕಳು ತಲೆಯ ಮೇಲೆ ತುಳಸಿ ವೃಂದಾವನ ಹೊತ್ತು ಭಜನೆ ಮಾಡಿದರು. ಟಾಳ, ಮೃದಂಗ ವೀಣೆ ಬಾರಿಸುತ್ತಾ ಜಯ ಜಯ ರಾಮ, ಕೃಷ್ಣ ಹರಿ ದೇವರ ನಾಮ ಸ್ಮರಣೆ ಮಾಡುತ್ತಾ ಕುಣಿದು ಕುಪ್ಪಳಿಸಿ ಜ್ಞಾನದೇವ್ ತುಕಾರಾಂ ಸ್ಮರಿಸುತ್ತ ಭಜನೆ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಬಾಲಾಜಿ, ಸರೋಜಾ ಬಿರಾದಾರ, ಅನುರಾಧಾ ಬಿರಾದಾರ, ಪ್ರಭಾವತಿ, ಸೃಷ್ಟಿ, ರಾಜೇಶ್ವರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.