
ಕೆ.ಆರ್.ಪುರ, ಆ.೨೦-ವಿವಾದಕ್ಕೆ ಕಾರಣವಾಗಿರುವ ಮಹದೇವಪುರ ಕ್ಷೇತ್ರದ ಕಾಡಾಗ್ರಹಾರ ಗ್ರಾಮದ ಕೆರೆ ಪ್ರದೇಶದ ಸರ್ವೆ ಕಾರ್ಯವಾಗಿದ್ದು,ತಂತಿಬೇಲಿ ಅಳವಡಿಸಿ ಸಮಸ್ಯೆಗೆ ಮುಕ್ತಿ ನೀಡಬೇಕೆಂದು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮುನಿಯಪ್ಪ ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಬೆಂ. ಪೂರ್ವ ತಾಲೂಕು ಬಿದರಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕಾಡ ಅಗ್ರಹಾರ ಗ್ರಾಮದ ಸರ್ವೆ ನಂಬರ್ ೫೪ ರಲ್ಲಿ ಕೆರೆಯಿದ್ದು,ಗ್ರಾಮದ ಶಾಂತಿ ಕದಡುವ ನಿಟ್ಟಿನಲ್ಲಿ ಕೆಲವರು ಒತ್ತುವರಿ ಆರೋಪ ಮಾಡಿದ್ದಾರೆ,ಸರ್ವೆ ನಂತರ ಕೆರೆಯ ಪಾದಚಾರಿ ಮಾರ್ಗವನ್ನೆ ಗ್ರಾಮಸ್ಥರ ಜಮೀನಿನ ಬಫರ್ ಜೋನ್ ಸ್ಥಳದಲ್ಲಿ ನಿರ್ಮಾಣ ಮಾಡಿರುವುದು ದೃಢಪಟ್ಟಿದೆತ್ವರಿತವಾಗಿ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಕೆರೆ ಉಳಿಸುವ ಕಾರ್ಯ ಮಾಡುವಂತೆ ಮನವಿ ಮಾಡಿದ್ದಾರೆ.
ಸರ್ಕಾರಿ ಸರ್ವೆಯಲ್ಲಿ ಒತ್ತುವರಿ ಮಾಡಿರುವುದಿಲ್ಲವೆಂಬುದು ತಿಳಿದುಬಂದಿದೆ, ಈ ನಿಟ್ಟಿನಲ್ಲಿ ಕೂಡಲೆ ವಿಎ, ಆರ್ ಐ, ಡಿಟಿ ಮತ್ತು ತಹಶಿಲ್ದಾರರು ಸ್ಥಳಕ್ಕಾಗಮಿಸಿ ಕಾಂಪೌಂಡ್ ನಿರ್ಮಿಣ ಮಾಡಿ ಸಾರ್ವಜನಿಕರ ಸೇವೆಗೆ ಮೀಸಲಿಡುವಂತೆ ಮನವಿ ಮಾಡಿದ್ದಾರೆ.
ಗ್ರಾಮದ ಶಾಂತಿ ಸೌಹಾರ್ದತೆಯ ನಿಟ್ಟಿನಲ್ಲಿ ಅರ್ಜಿಗಳನ್ನು ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಪರಿಶೀಲನೆ ಮಾಡುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.


































