
ಕಲಬುರಗಿ,ಆ.21-ನಗರದ ಜಿಮ್ಸ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞರ ಕೊಠಡಿಯಲ್ಲಿ ಡಿ.ದೇವರಾಜ ಅರಸು ರವರ 111ನೇ ಜಯಂತಿಯನ್ನು ಆಚರಿಸಲಾಯಿತು.
ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರಾದ ಡಾ.ರೂಕೀಯ ಆಸ್ನಾ ರಬಾ ಅವರು ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಓಪಿಡಿ ಸರ್ಜನ್ ಡಾ.ಶಾಲಾನಿ ಸಜ್ಜನಶೆಟ್ಟಿ, ಸ್ಥಳೀಯ ವೈದ್ಯಾಧಿಕಾರಿಗಳಾದ ಡಾ.ಓಂ ಪ್ರಕಾಶ್ ಅಂಬೂರೆ, ಡಾ.ನಾಗರಾಜ್ ಪಾಟೀಲ, ಡಾ.ಸಂತೋಷ್, ಡಾ.ನಿಶಾಂತ್ ಪಣೇಗಾಂವ್, ಡಾ.ಜಯಮ್ಮ ಎಸ್ ಗಣಜಲಖೇಡ್, ಚೀಪ್ ಮೆಡಿಕಲ್ ಆಫೀಸರ್ ಡಾ. ವಿನೋದ್ ಕುಮಾರ ಹೊಸಳ್ಳಿ, ಕಚೇರಿ ಅಧಿಕ್ಷಕರು ವಿಜಯಕುಮಾರ ಸಂಕಾ, ಎಚ್ ಫ್ ಡಬ್ಲ್ಯೂ ಇಮ್ತಿಯಾಜ್ ಹಾಗೂ ಅರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.































